ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯಲ್ಲಿನ ಕೆರೆ, 40 ವರ್ಷದ ಬಳಿಕ ಇಂದು ಕೋಡಿ ಬಿದ್ದಿದೆ. ಈ ಮೂಲಕ ಐತಿಹಾಸಿಕ ಕ್ಷಣವನ್ನು ಜನತೆ ಕಣ್ ತುಂಬಿಕೊಂಡು ಸಂಭ್ರಮಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ( Chitradurga District ) ಹಿರಿಯೂರು ತಾಲೂಕಿನಲ್ಲಿ ( Hiriyur Taluk ) ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವಂತ ಮಳೆಯಿಂದಾಗಿ, ಲಕ್ಕನಹಳ್ಳಿ ಬಳಿಯ ದೊಡ್ಡ ಹಣ್ಣ ಮೈತುಂಬಿ ಹರಿಯುತ್ತಿರುವುದರಿಂದ 40 ವರ್ಷಗಳ ಬಳಿಕ ಐತಿಹಾಸಿಕ ಧರ್ಮಪುರ ಕೆರೆ ( Dharmapura Lake ) ಇಂದು ಕೆರೆ ಕೋಡಿ ಬಿದ್ದಿದೆ.
OMG.! ಈ ಸತ್ತ ಕೀಟ, ಮೆದುಳಿನ ಮೇಲೆ ನಿಯಂತ್ರಣ ಸಾಧಿಸಿ ನಡೆಯುತ್ತಿದೆ ಗೊತ್ತಾ.?
ಅಂದಹಾಗೇ ಐತಿಹಾಸಿಕ ಧರ್ಮಪುರ ಕೆರೆ 1982ರಲ್ಲಿ ಭರ್ತಿಯಾಗಿ, ಕೋಡಿ ಬಿದ್ದು ನೀರು ಹರಿದಿತ್ತು. ಅಲ್ಲದೇ ಸತತ ಎರಡು ತಿಂಗಳ ಕಾಲ ಧರ್ಮಪುರ ಕೆರೆಯ ಕೋಡಿ ನೀರು ಹರಿದಿತ್ತು. ಹೀಗೆ ಕೆರೆ ಕೋಡಿ ನೀರು ಹರಿದ ಕಾರಣ, ಕೆರೆಯ ಕೆಳಭಾಗದಲ್ಲಿನ ಗ್ರಾಮಗಳಾದಂತ ಹಲವು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು. ಇದಲ್ಲದೇ ಹಲಗಲದ್ದಿ, ಮದ್ದಿಹಳ್ಳಿ, ಪಿಡಿ ಕೋಟೆ ಗ್ರಾಮದ ವಿದ್ಯಾರ್ಥಿಗಳು ಹಲವು ತಿಂಗಳುಗಟ್ಟಲೇ ಶಾಲಾ-ಕಾಲೇಜಿಗೆ ( School and College ) ಹೋಗದೇ ಇರುವಂತೆ ಆಗಿತ್ತು.
ಕಳೆದ ನಾಲ್ಕೈದು ತಿಂಗಳಿನಿಂದ ಧರ್ಮಪುರ ಹೋಬಳಿಯಲ್ಲಿ ಉತ್ತಮ ಮಳೆಯಾದ ಕಾರಣ, ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಬೇತೂರು, ಮದ್ದೀಹಳ್ಳಿ, ಹಲಗಲದ್ದಿ, ಈಶ್ವರಗೆರೆ, ಅರಳ್ಳೇಕೆರೆ, ಶ್ರವಣಗೆರೆ, ಸಕ್ಕರ, ಖಂಡೇನಹಳ್ಳಿ ಕೆರೆಗಳು ಕೋಡಿ ಬಿದ್ದಿವೆ.
ಎಂಜಿನಿಯರಿಂಗ್ ವ್ಯಾಸಂಗದ ನಿರೀಕ್ಷೆಯಲ್ಲಿದವರ ಗಮನಕ್ಕೆ: ನ.30 ಪ್ರವೇಶಾತಿಗೆ ಕೊನೆಯ ದಿನ
ಇಂದು ಧರ್ಮಪುರ ಹೋಬಳಿಯಲ್ಲೇ ಅತೀ ದೊಡ್ಡಕೆರೆ ಎನಿಸಿಕೊಂಡಿರುವಂತ ಧರ್ಮಪುರ ಕೆರೆ, ಭರ್ತಿಯಾಗಿ ಕೋಡಿ ಬಿದ್ದಿದ್ದು, ರೈತರ ಮುಖದಲ್ಲಿ ಸಂತಸ ಮನೆ ಮಾಡುವಂತೆ ಆಗಿದೆ.
ವರದಿ : ವಸಂತ ಬಿ ಈಶ್ವರಗೆರೆ
‘KSRTC ಸಿಬ್ಬಂದಿ’ಗಳಿಗೆ ಮತ್ತೊಂದು ಗುಡ್ ನ್ಯೂಸ್: ಇದೇ ಮೊದಲ ಬಾರಿಗೆ 50 ಲಕ್ಷ ರೂ ‘ಅಪಘಾತ ವಿಮೆ ಯೋಜನೆ’ ಜಾರಿ