ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ಹಣದೊಂದಿಗೆ ಸಿಕ್ಕಿಬಿದ್ದಂತ ಲೋಕೋಪಯೋಗಿ ಇಲಾಖೆಯ ಎಇ ಜಗದೀಶ್ ನನ್ನು ಹಣದ ಬಗ್ಗೆ ಸಮರ್ಪಕ ಮಾಹಿತಿ ನೀಡದ ಕಾರಣ ನಿನ್ನ ಪೊಲೀಸರು ಬಂಧಿಸಿದ್ದರು. ಇಂತಹ ಅವರಿಗೆ ಇಂದು ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜನವರಿ 4ರ ಬುಧವಾರದಂದು ಸಂಜೆ 7 ಗಂಟೆಯ ವೇಳೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ವಿಧಾನಸೌಧಕ್ಕೆ ಪ್ರವೇಶಿಸುತ್ತಿದ್ದಂತ ಪಿಡಬ್ಲ್ಯೂ ಇಲಾಖೆಯ ಸಹಾಯ ಇಂಜಿನಿಯರ್ ಜಗದೀಶ್ ಬಳಿಯಲ್ಲಿ 10.50 ಲಕ್ಷ ಹಣ ಪತ್ತೆಯಾಗಿತ್ತು. ಈ ಹಣದ ಬಗ್ಗೆ ಪ್ರಶ್ನಿಸಿದಾಗ ಸರಿಯಾದ ಮಾಹಿತಿ ನೀಡದ ಕಾರಣ, ಹಣ ಜಪ್ತಿ ಮಾಡಿ, ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ವಿಧಾನಸೌಧದ ಠಾಣೆ ಪೊಲೀಸರ ವಿಚಾರಾಣಾಧಿಕಾರಿ ಮುಂದೆ ನಿನ್ನೆ ಎಇ ಜಗದೀಶ್ ತಮ್ಮ ವಕೀಲರ ಜೊತೆಗೆ ವಿಚಾರಣೆಗೆ ಹಾಜರಾಗಿದ್ದರು. ತಮ್ಮ ವಾಹನದಲ್ಲಿ ಸಿಕ್ಕಂತ 10.50 ಲಕ್ಷ ಹಣದ ಬಗ್ಗೆ ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಿರಲಿಲ್ಲ. ಹೀಗಾಗಿ ಅವರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಇಂದು ಎಇ ಜಗದೀಶ್ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಕೋರ್ಟ್, ಜಗದೀಶ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಶೀಘ್ರವೇ ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನು ಸ್ವರೂಪ – ಸಿಎಂ ಬೊಮ್ಮಾಯಿ ಘೋಷಣೆ