ಬೆಂಗಳೂರು: ಕಿರುತೆರೆಯಲ್ಲಿ ಮತ್ತೊಬ್ಬ ನಟಿ ವಿರುದ್ಧ ವಿವಾದ ಶುರುವಾಗಿದೆ. ನಟಿ ವೈಷ್ಣವಿ ಗೌಡ ಜೊತೆ ನಿಶ್ಚಿತಾರ್ಥ ಆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿಯೊಬ್ಬರ ಆಡಿಯೋ ಸದ್ದು ಮಾಡುತ್ತಿದ್ದು, ವಿದ್ಯಾಭರಣ್ ಮೇಲೆ ಅನೇಕ ಆರೋಪಗಳನ್ನ ಮಾಡಿದ್ದರು. ಈ ಬೆನ್ನಲ್ಲೇ ನಾವು ವಿವಾದಕ್ಕೆ ಕಾರಣವಾಗಿರುವಂತ ಮದುವೆಯನ್ನು ಮುರಿದುಕೊಂಡಿದ್ದೇವೆ ಎಂಬುದಾಗಿ ನಟಿ ವೈಷ್ಣವಿ ಗೌಡ ಹೇಳಿದ್ದಾರೆ.
BREAKING NEWS: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ; ಬೆಚ್ಚಿಬಿದ್ದ ಜನತೆ
ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನಾನು ಉದ್ಯಮಿ ವಿದ್ಯಾಭರಣ್ ಜೊತೆಗಿನ ವಿವಾಹವನ್ನು ಮುರಿದುಕೊಳ್ಳುತ್ತಿದ್ದೇವೆ. ಈ ವಿಷಯವನ್ನು ಮುಂದುವರೆಸುವುದು ಬೇಡ. ಇಲ್ಲಿಗೆ ಬಿಟ್ಟು ಬಿಡಿ ಎಂಬುದಾಗಿ ಮನವಿಯನ್ನು ನಟಿ ವೈಷ್ಣವಿ ಗೌಡ ಮಾಡಿದ್ದಾರೆ.
ಅಂದಹಾಗೇ ಉದ್ಯಮಿ ವಿದ್ಯಾಭರಣ್ ಅವರು, ಇನ್ ಸ್ಟಾಗ್ರಾಂ ಖಾತೆಯಿಂದ ಅನೇಕ ಹುಡುಗಿಯರೊಂದಿಗೆ ಮೆಸೇಜ್ ಮಾಡಿ ಅನುಚಿತ ವರ್ತನೆ ತೋರಿದ್ದಾನೆ. ಏನೇ ಆಗಲಿ ವೈಷ್ಣವಿಗೆ ಮೋಸ ಆಗಬಾರದು ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಆಡಿಯೋ ಇದೀಗ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಆಡಿಯೋನಲ್ಲಿ ಏನಿದೆ?
ವ್ಯಕ್ತಿಯೊಬ್ಬರಿಗೆ ಕರೆ ಮಾಡಿರುವ ನಟಿ, ಅವನು ಒಂದೇ ಒಂದು ಡಬ್ಬಾ ಸಿನಿಮಾದಲ್ಲಿ ನಟಿಸಿದ್ದಾನೆ. ಅದು ಒಂದು ವಾರ ಸಹ ಹೆಸರು ಮಾಡಲಿಲ್ಲ. ಅವನ ನಿಜವಾದ ಹೆಸರು ವಿದ್ಯಾಭರಣ್ ಅಂತಾ ಹಳ್ಳಿಯಿಂದ ಬಂದು ಇಲ್ಲೇ ಮನೆ ಕಟ್ಟಿಕೊಂಡಿದ್ದಾನೆ, ಒಂದು ಸಾಯಿಬಾಬಾ ಟೆಂಪಲ್ ಇದೆ. ತನ್ನ ಇನ್ಸ್ ಸ್ಟಾಗ್ರಾಮ್ ಖಾತೆಯಿಂದ ಅನೇಕ ಹುಡುಗಿಯರಿಗೆ ಮೆಸೇಜ್ ಮಾಡಿದ್ದಾನೆ. ಈಗ 3-4 ಸಾವಿರ ಫಾಲೋವರ್ಸ್ ಇದ್ದ ಆ ಖಾತೆಯೇ ಇಲ್ಲ. ಹುಡ್ಗಿಯರಿಗೆ ಮೆಸೇಜ್ ಮಾಡ್ತಾ ನಾನು ನಿಮ್ಮನ್ನ ಮದುವೆ ಆಗ್ತಿನಿ, ಡೇಟ್ ಮಾಡೋಣ? ಅಂತಾ ಕರೆದಿದ್ದಾನೆ.
BREAKING NEWS: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ; ಬೆಚ್ಚಿಬಿದ್ದ ಜನತೆ
ಫ್ಯಾಶನ್ ಡಿಸೈನರ್ ಒಬ್ಬರನ್ನ ಮನೆಗೆ ಕರೆದುಕೊಂಡು ಹೋಗಿ ನನ್ನ ಹೆಂಡತಿ ಆಗೋಳು ಅಂತಾ ಪರಿಚಯ ಮಾಡಿಸಿದ್ದಾನೆ. ನಂತರ ಬ್ರೇಕಪ್ ಮಾಡಿಕೊಂಡಿದ್ದಾನೆ. ಹಾಗೆಯೇ ನನಗೂ ಮೆಸೇಜ್ ಮಾಡಿ, ತುಂಬ ಇಷ್ಟ ಆಗಿದ್ದೀರಾ, 150 ಕೋಟಿ ಆಸ್ತಿಯಿದೆ, ಆಡಿ ಕಾರ್ ಇದೆ. ಟೆಂಪಲ್ ಇದೆ ಎಂದು ಹೇಳಿಕೊಂಡಿದ್ದ. ಡೇಟ್ ಮಾಡಲು ಕರೆದಿದ್ದ. ನಾನು ಆಗಲ್ಲ ಎಂದು ಹೇಳಿದೆ.