ಬೆಂಗಳೂರು : ನಟ ವಿನೋದ್ ರಾಜ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು ತಕ್ಷಣ ಅವರು ಬೆಂಗಳೂರಿನ ನೆಲಮಂಗಲದಲ್ಲಿ ಇರುವಂತಹ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸರಳ ನಟ ಎಂದೇ ಖ್ಯಾತರಾದ ವಿನೋದ್ ರಾಜ್ ಅವರಿಗೆ ಅನಾರೋಗ್ಯದಿಂದ ನೆಲಮಂಗಲದಲ್ಲಿರುವ ಇರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಚಿಕಿತ್ಸೆ ಮೇಲೆ ಕರುಳಿನ ಸಮಸ್ಯೆ ಎಂದು ತಿಳಿದು ಬಂದಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಸದ್ಯ ವಿನೋದ್ ರಾಜ್ ಅವರಿಗೆ ಕರುಳಿನ ಆಪರೇಷನ್ ಮಾಡಲಾಗಿದೆ.
ಕಳೆದ ಕೆಲವು ತಿಂಗಳಿನ ಹಿಂದೆ ತಾಯಿ ಲೀಲಾವತಿ ಅವರನ್ನು ಕಳೆದುಕೊಂಡಿದ್ದ ನಟ ವಿನೋದ ರಾಜ್, ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾಯಿ ಲೀಲಾವತಿಯ ಹೆಮ್ಮೆಯ ಪುತ್ರರಾಗಿದ್ದಾರೆ. ಇದೀಗ ಅವರಿಗೆ ಕರುಳಿನ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.