ಬೆಂಗಳೂರು: ಯುವತಿಯೊಂದಿಗೆ ನಟ ವಿದ್ಯಾಭರಣ್ ( Actor Vidyabharan ) ಮಾತನಾಡಿದ್ದಾರೆ ಎನ್ನಲಾದಂತ ಆಡಿಯೋ ಒಂದು ವೈರಲ್ ( Audio Viral ) ಆಗಿತ್ತು. ಇದು ನನ್ನ ವಿರುದ್ಧ ಮಾಡುತ್ತಿರುವಂತ ಅಪಪ್ರಚಾರದ್ದಾಗಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದಾರೆ.
BIG BREAKING NEWS: ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’ಯ ‘ಅಂತಿಮ ಕೀ ಉತ್ತರ’ ಪ್ರಕಟ | KARTET-2022
ಇಂದು ಆಡಿಯೋ ವೈರಲ್ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿದಂತ ನಟ ವಿದ್ಯಾಭರಣ್ ಅವರು, ದೂರು ನೀಡಿದರು. ಈ ಬಳಿಕ ಮಾತನಾಡಿ, ನಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಹಿತಶತ್ರುಗಳೇ ನಮ್ಮ ವಿರುದ್ಧ ಅಪಪ್ರಚಾರ ಮಾಡಿರಬಹುದು. ಆಡಿಯೋದಲ್ಲಿ ಯಾರು ಮಾತನಾಡಿರೋದು ಅಂತ ಗೊತ್ತಿಲ್ಲ. ಆಡಿಯೋದಲ್ಲಿರುವುದು ಮಾತ್ರ ಸಂಪೂರ್ಣ ಸುಳ್ಳು ಎಂದರು.
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ
ಈ ಹಿಂದೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದೆ, ಬ್ರೇಕ್ ಅಪ್ ಆಯ್ತು. ನನ್ನ ಮತ್ತು ನನ್ನ ಫ್ಯಾಮಿಲಿ ಘನತೆಗೆ ಧಕ್ಕೆ ತಂದಿದ್ದಾರೆ. ಆಡಿಯೋದಲ್ಲಿ ಮಾತನಾಡಿರುವಂತ ಮೂರನೇ ವ್ಯಕ್ತಿ ಯಾರು ಅಂತ ಗೊತ್ತಾಗಬೇಕು. ಈ ಬಗ್ಗೆ ತನಿಖೆಗಾಗಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಗೆ ದೂರು ನೀಡಲಾಗಿದೆ ಎಂದು ಹೇಳಿದರು.