ಮಂಡ್ಯ: ಕಾಂತಾರ ಚಿತ್ರದ ( Kantara Movie ) ಬಗ್ಗೆ ನಟ ಚೇತನ್ ( Actor Chetan ) ಚೀಪ್ ಪಬ್ಲಿಸಿಟಿಗೋಸ್ಕರ ಮಾತನಾಡುತ್ತಿದ್ದಾರೆ. ಈ ಮೂಲಕ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂಬುದಾಗಿ ಪೇಜಾವರ ಶ್ರೀಗಳು ವಾಗ್ಧಾಳಿ ನಡೆಸಿದ್ದಾರೆ.
BIGG BREAKING NEWS: 100 ರೂ ದೇಣಿಗೆ ಸಂಗ್ರಹ ಆದೇಶ ಹಿಂಪಡೆದ ‘ಶಿಕ್ಷಣ ಇಲಾಖೆ’
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಿಂದುತ್ವ ಎಂಬುದು ಬ್ರಾಹ್ಮಣತ್ವದಲ್ಲಿಯೇ ಇದೆ. ಆದ್ರೇ ನಟ ಚೇತನ್ ಮಾತ್ರ ಚೀಪ್ ಪಬ್ಲಿಸಿಟಿಗೋಸ್ಕರ ಕಾಂತಾರ ಚಿತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಆದ್ರೇ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳೋದಿಲ್ಲ. ನಂಬಿಕೆ ಎನ್ನುವುದು ಅವರವರ ಭಾವನೆಗೆ ಬಿಟ್ಟಿದ್ದು ಎಂದು ಹೇಳಿದರು.
ಉಕ್ರೇನ್ ಮೇಲೆ ರಷ್ಯಾ ’36 ರಾಕೆಟ್’ಗಳನ್ನು ಉಡಾಯಿಸಿದೆ – ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ| Ukraine
ಹಿಂದುತ್ವ ಹಾಗೂ ಬ್ರಾಹ್ಮಣತ್ವ ಬೇರೆ ಬೇರೆಯಲ್ಲ. ಹಿಂದುತ್ವ ವಿಶಾಲವಾಗಿದ್ದಾದರೇ, ಅದರೊಳಗೇ ಬ್ರಾಹ್ಮಣತ್ವವೂ ಬರುತ್ತದೆ. ನಟ ಚೇತನ್ ಯಾವ ನೆಲೆಯಲ್ಲಿ ಮಾತನಾಡಿದ್ದಾರೋ ನನಗೆ ಅರ್ಥವಾಗಿಲ್ಲ. ಅವರವರು ನೋಡುವ ದೃಷ್ಠಿಕೋನದಲ್ಲಿ ನಂಬಿಕೆ, ಆಚರಣೆ ಅಡಗಿರುತ್ತದೆ ಎಂದರು.
‘ಚಾಮರಾಜನಗರ’ದಲ್ಲಿ ಅದ್ದೂರಿಯಾಗಿ ನಡೆದ ‘ವಿದ್ಯಾಗಣಪತಿ ವಿಸರ್ಜನೆ ಶೋಭಾಯಾತ್ರೆ’