ಬೆಂಗಳೂರು: ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದಂತ ಜೊತೆ ಜೊತೆಯಲಿಯ ಧಾರವಾಹಿಯ ( Jote Joteyali Serial ) ನಾಯಕ ನಟ ಅನಿರುದ್ಧ್ ಗೆ ( Actor Aniruddha Jatkar ) ಧಾರವಾಹಿಯಿಂದ ಗೇಟ್ ಪಾಸ್ ನೀಡಲಾಗಿದೆ. ಇದಲ್ಲದೇ 2 ವರ್ಷಗಳ ಕಾಲ ಕಿರುತೆರೆಯ ಧಾರವಾಹಿಗಳಿಂದಲೂ ಅವರನ್ನು ನಿಷೇಧಿಸಲಾಗಿದೆ.
ಈ ಬಗ್ಗೆ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಮಾಹಿತಿ ನೀಡಿದ್ದು, ಜೊತೆ ಜೊತೆಯಲಿ ಧಾರವಾಹಿಯ ನಿರ್ಮಾಪಕ ಹಾಗೂ ನಿರ್ದೇಶಕರಾದಂತ ಆರೂರು ಜಗದೀಶ್, ಸ್ಕ್ರೀಪ್ಟ್ ಸರಿಯಿಲ್ಲ ಎಂಬ ಕಾರಣಕ್ಕಾಗಿ ನಟ ಅನಿರುದ್ಧ್ ನಿಂದಿಸಿದ್ದಾರೆ ಎಂಬುದಾಗಿ ಸಂಘಕ್ಕೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಸಂಘವು ಚರ್ಚೆ ನಡೆಸಿ, ನಟ ಅನಿರುದ್ಧ್ ಅವರನ್ನು 2 ವರ್ಷ ಕಿರುತೆರೆಯಿಂದ ಬ್ಯಾನ್ ಮಾಡುವಂತ ನಿರ್ಧಾರವನ್ನು ಕೈಗೊಂಡಿರೋದಾಗಿ ತಿಳಿಸಿದ್ದಾರೆ.
BREAKING NEWS: ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರಕ್ಕೆ ಆಕ್ಷೇಪ ಪ್ರಕರಣ: ಬಂಧಿತ ಆರೀಫ್ ಗೆ ಜಾಮೀನು ಮಂಜೂರು
ಈ ಹಿಂದೆಯೂ ಅನೇಕ ಭಾರಿ ನಟ ಅನಿರುದ್ಧ್ ಹಾಗೂ ನಿರ್ಮಾಪಕರ ನಡುವೆ ಜಗಳ ಉಂಟಾಗಿತ್ತು. ಆಗಲೂ ರಾಜಿ ಸಂಧಾನದ ಮೂಲಕ ಹೊಂದಾಣಿಕೆ ನಡೆದು, ಧಾರವಾಹಿಯ ಕೆಲಸ ಮುಂದುವರೆದಿತ್ತು. ಆದ್ರೇ.. ಈಗ ಅವರ ನಡುವಿನ ಜಗಳ ತಾರಕಕ್ಕೇರಿದ ಕಾರಣ, ಅನಿವಾರ್ಯವಾಗಿ ಜೊತೆ ಜೊತೆಯಲಿ ಧಾರವಾಹಿ ಹಾಗೂ 2 ವರ್ಷ ಕಿರುತೆರೆಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
BREAKING NEWS : ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ʻ ಮೊಟ್ಟೆ ಎಸೆತ ಸಂಪತ್ ಬಂಧನ ʼ | Sampath Arrested