ನವದೆಹಲಿ: 2022ನೇ ಸಾಲಿನ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ( Major Dhyan Chand Khel Ratna Award ) ಟೇಬಲ್ ಟೆನಿಸ್ ತಾರೆ ಅಚಂತಾ ಶರತ್ ಕಮಲ್ ( Table tennis star Achanta Sharath Kamal ) ಅವರಿಗೆ ನೀಡಲಾಗುವುದು ಎಂದು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಸೋಮವಾರ ಪ್ರಕಟಿಸಿದೆ.
2022ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಶರತ್ ಕಮಲ್ ಮೂರು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿದ್ದರು. ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರಾದ ಎಲ್ಡೋಸ್ ಪಾಲ್, ಅವಿನಾಶ್ ಸೇಬಲ್, ಲಕ್ಷ್ಯ ಸೇನ್ ಮತ್ತು ನಿಖತ್ ಜರೀನ್ ಸೇರಿದಂತೆ ಅರ್ಜುನ ಪ್ರಶಸ್ತಿಯನ್ನು ಪಡೆಯಲಿರುವ ಕ್ರೀಡಾಪಟುಗಳ ಪಟ್ಟಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ.
ಶಬರಿಮಲೆಗೆ ತೆರಳೋ ಭಕ್ತರಿಗೆ ಗುಡ್ ನ್ಯೂಸ್: ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲುಗಳ ಸಂಚಾರ