ಚಂಡೀಗಢ: ಪಂಜಾಬ್ನ ಮಲೇರ್ಕೋಟ್ಲಾ ಜಿಲ್ಲೆಯಲ್ಲಿ ಭಾನುವಾರ ಆಮ್ ಆದ್ಮಿ ಪಕ್ಷದ ಮುನ್ಸಿಪಲ್ ಕೌನ್ಸಿಲರ್ನನ್ನು ಜಿಮ್ನಲ್ಲಿ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.
ಮೊಹಮ್ಮದ್ ಅಕ್ಬರ್ ಜಿಮ್ಗೆ ಹೋಗಿದ್ದಾಗ ಒಬ್ಬ ಅಪರಿಚತ ವ್ಯಕ್ತಿ ಬಂದಿದ್ದು, ಆತನ ಮೇಲೆ ಗುಂಡಿಕ್ಕಿ ಕೊಂದಿದ್ದಾನೆ ಎಂದು ಮಲೇರ್ಕೋಟ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವನೀತ್ ಕೌರ್ ಸಿಧು ಹೇಳಿದ್ದಾರೆ.
Punjab | An Aam Aadmi Party municipal councillor was shot dead by unidentified persons in Malerkotla yesterday
We received info that councillor Mohammad Akbar has been murdered. As of now, it seems to be a personal enmity. We’re further probing the matter: SSP Malerkotla (31.07) pic.twitter.com/bVsvaa17BB
— ANI (@ANI) July 31, 2022
ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ಅಕ್ಬರ್ ಜಿಮ್ನೊಳಗೆ ಅಪರಿಚಿತ ವ್ಯಕ್ತಿಯ ಕಡೆಗೆ ಚಲಿಸುತ್ತಿರುವುದು ಕಂಡುಬಂದಿದೆ. ಅಕ್ಬರ್ ಹತ್ತಿರ ಬರುತ್ತಿದ್ದಂತೆಯೇ ದುಷ್ಕರ್ಮಿ ಆಯುಧ ತೆಗೆದು ಆತನ ಮೇಲೆ ಗುಂಡು ಹಾರಿಸಿದ್ದಾನೆ.
ಇದು ವೈಯಕ್ತಿಕ ದ್ವೇಷದ ಪರಿಣಾಮ ಎಂದು ತೋರುತ್ತಿದೆ. ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
OMG: ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ ʻ100ಕ್ಕೆ 151 ಅಂಕʼ ಗಳಿಸಿ ಅಚ್ಚರಿ ಮೂಡಿಸಿದ ವಿದ್ಯಾರ್ಥಿ!.. ಹೇಗೆ ಗೊತ್ತಾ?
BIG BREAKING NEWS: ತೆಲುಗು ಧಾರವಾಹಿ ವೇಳೇ ಕನ್ನಡದ ನಟ ಚಂದನ್ ಗೆ ಕಪಾಳಮೋಕ್ಷ! ಇಲ್ಲಿದೆ ವೈರಲ್ ವಿಡಿಯೋ
BREAKING NEWS: : LPG’ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 36 ರೂ. ಇಳಿಕೆ | Commercial LPG cylinder price cut