ಬೆಂಗಳೂರು : ಇಂದಿನ ದಿನಗಳಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ವಾಟ್ಸಾಪ್ ಮೂಲಕ ಅಪರಿಚಿತರ ಅಥವಾ ಹಳೆಯ ಸ್ನೇಹಿತರ ಸಂಪರ್ಕ ಸುಲಭವಾಗಿ ಸಿಗುತ್ತಿದೆ. ಇದು ಕೆಲವೊಮ್ಮೆ ಕೌಟುಂಬಿಕ ಬಿರುಕಿಗೆ ಕಾರಣವಾಗುತ್ತಿದೆ. ಹೌದು ಇದೀಗ ಎರಡು ಪ್ರತ್ಯೇಕ ಘಟನೆಯಲ್ಲಿ ಗಂಡ ಮಕ್ಕಳನ್ನು ಬಿಟ್ಟು ಮಹಿಳೆ ಕಟಿಂಗ್ ಶಾಪ್ ದವನ ಜೊತೆ ಓಡಿ ಹೋದ್ರೆ, ಮತ್ತೊಬ್ಬ ಮಹಿಳೆ ಗಂಡನ ಸ್ನೇಹಿತನ ಜೊತೆ ಪರಾರಿಯಾಗಿದ್ದಾಳೆ.
ಮೊದಲ ಘಟನೆ
ಕಸ ಹಾಕಿ ಬರೋದಾಗಿ ಮನೆಯಿಂದ ಹೊರಗೆ ಬಂದ ಮಹಿಳೆ ಪ್ರಿಯಕರನ ಜೊತೆ ಪರಾರಿಯಾಗಿದ್ದಾರೆ. ಇತ್ತ ಗಂಡ ಎರಡು ಮಕ್ಕಳನ್ನು ಬಿಟ್ಟು ತನ್ನ ಪತ್ನಿ ಪರ ಪುರುಷನ ಜೊತೆ ಓಡಿ ಹೋಗಿದ್ದಾಳೆಂದು ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಬಾಗಲಗುಂಟೆಯಲ್ಲಿ ಈ ಘಟನೆ ನಡೆದಿದೆ. ನಾಪತ್ತೆಯಾದ ಪ್ರಿಯಾಂಕಾ ಮತ್ತು ಪತಿ ಶರತ್ ಕುಮಾರ್‌ಗೆ ಇಬ್ಬರು ಮಕ್ಕಳಿದ್ದು, ಬಾಗಲಗುಂಟೆಯಲ್ಲಿ (Bagalgunte) ವಾಸವಾಗಿದ್ದರು.
ಈ ಸಂಬಂಧ ಬಾಗಲಗುಂಟೆಯಲ್ಲಿ ಪತಿ ದೂರು ದಾಖಲಿಸಿದ್ದು, ಕಸ ಹಾಕಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಪರಪುರುಷನೊಂದಿಗೆ ಪರಾರಿಯಾಗಿದ್ದಾಳೆ. ನಾನು ಮನೆಯಲ್ಲಿರುವಾಗಲೇ ಪ್ರಿಯಾಂಕಾ ತನ್ನ ಪ್ರಿಯಕರ ಪ್ರಭು ಜೊತೆ ಹೋಗಿದ್ದಾಳೆ. ಅಷ್ಟೇ ಅಲ್ಲದೆ, ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಪರಾರಿಯಾಗಿದ್ದಾಳೆ ಎಂಬ ಆರೋಪಿಸಿದ್ದಾರೆ. ನಾನು ಕೆಲಸಕ್ಕೆ ಹೋದ ಸಮಯದಲ್ಲಿ ಏರಿಯಾದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನನ್ನು ಭೇಟಿಯಾಗುತ್ತಿದ್ದಳು. ಜೊತೆಗೆ ಪ್ರಭು ಪ್ರಿಯಾಂಕಾಗೆ ಮೊಬೈಲ್ ಕರೆನ್ಸಿ ಹಾಕಿಸುತ್ತಿದ್ದ. ಇದೇ ವಿಚಾರಕ್ಕಾಗಿ ನಡುವೆ ಆಗಾಗ ಜಗಳ ಆಗುತ್ತಿತ್ತು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಪತಿ ಶರತ್ ಪ್ರಿಯಾಂಕಾಗೆ ಹೀಗೆಲ್ಲ ಮಾಡಬೇಡ ಎಂದು ಬುದ್ಧಿವಾದ ಹೇಳಿ ವಾನ್ ಮಾಡಿದ್ದರು. ಆದರೆ ಏ.11ರ ರಾತ್ರಿ 11:57ರ ಸುಮಾರಿಗೆ ಪ್ರಿಯಾಂಕಾ ಮನೆ ಬಿಟ್ಟು ಹೋಗಿದ್ದಾರೆ. ಮಧ್ಯರಾತ್ರೀಲಿ ಕಸ ಎಸೆದು ಬರೋದಾಗಿ ಮನೆಯಿಂದ ಕಸದ ಬಕೆಟ್ ಹಿಡಿದು ಹೊರಟಿದ್ದಾಳೆ. ಮೊದಲೇ ರೆಡಿ ಮಾಡಿ ಇಟ್ಟಿದ್ದ ಬಟ್ಟೆ ಬ್ಯಾಗ್‌ನ್ನು ಮನೆಯಲ್ಲಿನ ಪತಿ, ಮಕ್ಕಳಿಗೆ ಕಾಣದಂತೆ ಕಸದ ಜೊತೆ ಬ್ಯಾಗ್ ಸಮೇತ ಹೊರಗೆ ಬಂದಿದ್ದಾಳೆ. ಒಂದು ಕೈಯಲ್ಲಿ ಕಸದ ಬಕೆಟ್ ಮತ್ತು ಮತ್ತೊಂದು ಕೈಯಲ್ಲಿ ಬ್ಯಾಗ್ ಹಿಡಿದು ಹೊರಟಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಡ್ಯದಲ್ಲಿ ಮತ್ತೊಂದು ಘಟನೆ
ಇನ್ನು ಮಂಡ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮನೆಯವರ ವಿರೋಧದ ನಡುವೆಯೂ ಅವನೇ ಬೇಕೆಂದು ಕಾಡಿಸಿ ಪೀಡಿಸಿ ಮದ್ವೆಯಾಗಿದ್ದ (Love Marriage) ಮಹಿಳೆ, ಈಗ ತಾಳಿಕಟ್ಟಿದ ಗಂಡನನ್ನ ಬಿಟ್ಟು ಮತ್ತೊಬ್ಬನ ಕೈಹಿಡಿದಿದ್ದಾಳೆ. ಮದುವೆಯಾದ 2 ವರ್ಷಕ್ಕೆ ಪ್ರೀತಿಸಿ ಗಂಡನನ್ನ ಬಿಟ್ಟು ತಂಗಿ ತಂಗಿ ಅಂತ ಕರೆಯುತ್ತಿದ್ದ ಗಂಡನ ಸ್ನೇಹಿತನನ್ನೇ ಪಟಾಯಿಸಿಕೊಂಡು ಓಡಿ ಹೋಗಿ ಮತ್ತೊಂದು ಮದುವೆಯಾಗಿದ್ದಾಳೆ. ಈ ಘಟನೆ ನಡೆದಿರೋದು ಮಂಡ್ಯದಲ್ಲಿ (Mandya)
ಹೌದು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನ್ನಂಗಾಡಿಯ ಸಾಗರ್ ಹಾಗೂ ಹರವು ಗ್ರಾಮದ ಮಹಿಳೆ. ಕಳೆದ 4-5 ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿ 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇದೀಗ ಮನೆಯಿಂದ ಎಸ್ಕೇಪ್ ಆಗಿ ಗಂಡನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡು 2ನೇ ಮದುವೆ ಆಗಿದ್ದಾಳೆ. ಸಾಗರ್ ವೃತ್ತಿಯಲ್ಲಿ ಆಟೋ ಚಾಲಕ. ತನ್ನೂರಿನಿಂದ ಪಾಂಡವಪುರಕ್ಕೆ ಆಟೋ ಓಡಿಸಿಕೊಂಡು ಜೀವನ ಮಾಡ್ತಿದ್ದ. ಆದ್ರೆ ಅದೇ ಮಾರ್ಗದಲ್ಲಿ ಕಾಲೇಜಿಗೆ ಹೋಗ್ತಿದ್ದ ಈಕೆ ಹದಿಹರೆಯದ ವಯಸ್ಸಿನಲ್ಲೆ ಪ್ರೀತಿ ಎಂದು ಈತನ ಹಿಂದೆ ಬಿದ್ದಿದ್ದಳು.
ಬೇರೆ ಆಟೋ ಇದ್ದರೂ ಈತನ ಆಟೋದಲ್ಲೆ ಹೋಗೋಕೆ ಕಾದು ಕುಳಿತುಕೊಳ್ತಿದ್ದಳು. ಹೀಗೆ ಆರಂಭವಾದ ಇವರ ಸ್ನೇಹ ಕೊನೆಗೆ ಪ್ರೀತಿಯಾಗಿ ಮದುವೆ ಹಂತಕ್ಕೂ ಹೋಗಿತ್ತು. ಸಾಗರ್ ನ ಮನೆಗೆ ಏಕಾಏಕಿ ಹೋದ ರಕ್ಷಿತ ಮದುವೆಯಾಗೋಣಾ ಬಾ ಎಂದು ಪಟ್ಟು ಹಿಡಿದ್ದಳು. ಅತ್ತ ತವರು ಮನೆಯವರು ಇಂತಹ ಮಗಳು ನಮಗೆ ಬೇಡ ಎಂದಿದ್ದರು. ರಕ್ಷಿತಾಗೆ 18 ವರ್ಷ ತುಂಬದ ಹಿನ್ನಲೆ ಸಾಗರ್ ಆಕೆಯನ್ನ ಅಕ್ಕನ ಮನೆಯಲ್ಲಿ ಇರಿಸಿ ಕೊನೆಗೆ 18 ವರ್ಷ ತುಂಬಿದ ಬಳಿಕ ದೇವಸ್ಥಾನದಲ್ಲಿ ಮದುವೆಯಾಗಿದ್ದ. ಕೆಲ ದಿನಗಳು ಸುಮ್ಮನಿದ್ದ ಆಕೆ ಮತ್ತೊಬ್ಬ ಯುವಕ ಇಂದ್ರ ಎಂಬಾತನ ಪ್ರೀತಿಯ ಗಾಳಕ್ಕೆ ಸಿಲುಕಿದ್ದಳು. ಇಂದ್ರ ಪೋನ್ ಕಾಲ್, ಮೆಸೇಜ್ ನಲ್ಲಿ ಆಕೆಗೆ ಚಂದ್ರಲೋಕ ತೋರಿಸಿ ಆಕೆಯನ್ನ ಪ್ರೀತಿ ಬಲೆಗೆ ಬೀಳಿಸಿದ್ದ.
ಇನ್ನೂ ಇಂದ್ರ, ಗೃಹಿಣಿಯ ಗಂಡ ಸಾಗರ್‌ನ ಆತ್ಮೀಯ ಸ್ನೇಹಿತನೇ. ಆತನೊಂದಿಗೆ ಆಟೋ ಓಡಿಸಿಕೊಂಡೆ ಜೀವನ ಮಾಡ್ತಿದ್ದ. ಇಂದ್ರ ಆಗಾಗ ಸಾಗರ್ ನ ಮನೆಗೆ ಬರ್ತಿದ್ದರಿಂದ ಸಾಗರ್‌ನ ಹೆಂಡತಿ ಕೂಡ ಆತನಿಗೆ ಪರಿಚಯ ಆಗಿದ್ದಳು. ಇನ್ನೂ ಮನೆಯವರ ಮುಂದೆಲ್ಲ ಆತ ಸಾಗರನ ಹೆಂಡ್ತಿಯನ್ನ ತಂಗಿ ತಂಗಿ ಅಂತಾನೆ ಅಂತಿದ್ದ. ನನಗೆ ತಂಗಿಯಿಲ್ಲ, ಇವಳೆ ನನಗೆ ತಂಗಿ ಅಂತಿದ್ದ. ರಕ್ಷಾ ಬಂಧನದ ಸಂದರ್ಭ ಆಕೆಗೆ ಶುಭಕೋರಿದ. ಆದ್ರೆ ಅದೆಲ್ಲ ಮನೆಯವರ ಮುಂದೆ ಆಡುತ್ತಿದ್ದ ನಾಟಕ. ಫೋನ್‌ನಲ್ಲಿ ಪ್ರೀತಿ ಪ್ರಣಯದ ಮಾತುಗಳನ್ನ ಆಡ್ತಿದ್ದ ಅವರಿಬ್ಬರು ಏಕಾಏಕಿ ಓಡಿ ಹೋಗಿ ಮದುವೆಯಾಗಿದ್ದಾರೆ.








