ಕಲಬುರಗಿ : ಜಿಲ್ಲೆಯ ಆಳಂದ ಬಸ್ ಡಿಪ್ಪೋ ದ ಬಳಿ ಇಬ್ಬರು ಮಕ್ಕಳ ಜತೆ ಬಾವಿಗೆ ಹಾರಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘೋರ ದುರಂತ ಘಟನೆ ಬೆಳಕಿಗೆ ಬಂದಿದೆ.
ಸಿದ್ದು ಮಹಾಮಲ್ಲಪ್ಪ (35), ಶ್ರೇಯಾ(11), ಮನೀಶ್(12) ಆತ್ಮಹತ್ಯೆಗೈದವರು ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬಾವಿಯಿಂದ ಮಕ್ಕಳ ಮೃತದೇಹ ಹೊರಗೆ ತೆಗೆಯಾಗಿದೆ. ತಂದೆ ಸಿದ್ದು ಮಹಾಮಲ್ಲಪ್ಪ ಶವಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಮೃತ ದುರ್ಧೈವಿಗಳು ಆಳಂದ ಪೊಟ್ಟಣದ ಶರಣ ನಗರ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ಘಟನೆ ಸಂಬಂದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.