ಬೆಳಗಾವಿ : ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಹೆತ್ತ ತಾಯಿ ಅಂತ್ಯಕ್ರಿಯೆಗೆ ಪಾಪಿ ಮಕ್ಕಳು ಬಾರದೆ ದುರಹಂಕಾರ ಮೆರೆದಿದ್ದಾರೆ. ಬೆಳಗಾವಿಯ ಶಾಹುನಗರದಲ್ಲಿ ಈ ಒಂದು ಮನಕಲಕುವ ಘಟನೆ ನಡೆದಿದೆ. ವಯೋಸಹಜ ಕಾಯಿಲೆಯಿಂದ ಅಂಜನಾಧಾಮನೆ ಎನ್ನುವ ವೃದ್ದೆ ಸಾವನಪ್ಪಿದ್ದಾರೆ.
ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಅಂಜನಾದಾಮನೆ ಸಾವನಪ್ಪಿದ್ದಾರೆ. ಕಳೆದ ಮೂರು ವರ್ಷಗಳಿಂದ ವೃದ್ಧಾಶ್ರಮದಲ್ಲಿ ಅಂಜನಾ ಇದ್ದರು ವೃದ್ದೆಗೆ ಇಬ್ಬರು ಮಕ್ಕಳಿದ್ದರೂ ನೋಡಿಕೊಳ್ಳದೆ ಅಮಾನವೀಯವಾಗಿ ವರ್ತಿಸಿದ್ದರು. ಬಳಿಕ ಅಂಜನಾ ಅವರ ಸ್ಥಿತಿ ಕಂಡು ಸಹೋದರ ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಇದೀಗ ಅಂಜನಾ ಅವರ ಸಾವಿನ ಸುದ್ದಿ ಆಶ್ರಮದ ಸಿಬ್ಬಂದಿಗಳು ಮಕ್ಕಳಿಗೆ ಕರೆ ಮಾಡಿ ತಿಳಿಸಿದ್ದಾರೆ.
ಆದರೆ ಅವರು ನೀವೇ ಅಂತ್ಯಕ್ರಿಯೆ ಮಾಡಿ ಎಂದು ಪಾಪಿ ಮಕ್ಕಳು ಕರೆ ಕಟ್ ಮಾಡಿದ್ದಾರೆ. ಬಳಿಕ ನಗರಸೇವಕ ಶಂಕರ್ ಪಾಟೀಲ್ ಮತ್ತು ಗಂಗಾಧರ್ ಪಾಟೀಲ್ ಗೆ ಕರೆ ಮಾಡಿದ್ದು ಆಶ್ರಮಕ್ಕೆ ತೆರಳಿ ವೃದ್ದೆ ಅಂಜನಾ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕೇವಲ 10 ಕಿ.ಮೀ ದೂರದಲ್ಲಿದ್ದರೂ ಪಾಪಿ ಮಕ್ಕಳು ಬಾರದೆ ದುರಹಂಕಾರ ತೋರಿದ್ದಾರೆ. ಅಂಜನಾ ಮಕ್ಕಳ ಶ್ರೀಕಾಂತ್ ವಿರುದ್ಧ ಇದೀಗ ಅಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕರು ತಾಯಿಯ ಅಂತ್ಯಕ್ರಿಯೆಗೆ ಬಾರದ ಮಕ್ಕಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.








