ನೋಯ್ಡಾ: ಬೈಕ್ ಚಕ್ರಗಳ ನಡುವೆ ಸಿಲುಕಿದ್ದ ಕೋತಿಯನ್ನು ರಕ್ಷಿಸಲು ಜನರ ಗುಂಪೊಂದು ಪ್ರಯತ್ನಿಸುತ್ತಿರುವ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಬಾರಾಬಂಕಿಯ ಬಡೋಸರಾಯ್ ಪ್ರದೇಶದಲ್ಲಿ ಕೋತಿ ರಸ್ತೆ ದಾಟಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ. ಘಟನೆಯ ವೀಡಿಯೊವನ್ನು ನೆಟ್ಟಿಗರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
#Viralvideo A monkey gets stuck in one of the wheels of a speeding motorcycle while crossing a road in UP's Barabanki. People rushed in to rescue the monkey immediately. pic.twitter.com/45WtQs53bD
— India.com (@indiacom) November 9, 2022
ಕೋತಿ ರಸ್ತೆಯನ್ನು ದಾಟಲು ಪ್ರಯತ್ನಿಸುತ್ತಿತ್ತು ಎಂದು ವರದಿಯಾಗಿದೆ ಆದರೆ ರಸ್ತೆಯ ಇನ್ನೊಂದು ಬದಿಗೆ ತಲುಪುವ ಬದಲು, ಪ್ರಾಣಿ ವೇಗವಾಗಿ ಚಲಿಸುತ್ತಿದ್ದ ಬೈಕಿನ ಚಕ್ರದಲ್ಲಿ ಸಿಕ್ಕಿಹಾಕಿಕೊಂಡಿತು. ಮತ್ತು, ಅದೃಷ್ಟವಶಾತ್, ಬೈಕನ್ನು ಚಲಾಯಿಸುತ್ತಿದ್ದ ವ್ಯಕ್ತಿಯು ಸರಿಯಾದ ಸಮಯದಲ್ಲಿ ಬ್ರೇಕ್ ಗಳನ್ನು ಹಾಕಿದನು ಮತ್ತು ಕೋತಿಗೆ ಯಾವುದೇ ಪ್ರಾಣಪಾಯದಿಂದ ಪಾರಾಗಿದೆ
ವೀಡಿಯೊದಲ್ಲಿ, ಕೋತಿ ಬೈಕ್ನ ಮುಂಭಾಗದ ಫೋರ್ಕ್ ಮತ್ತು ಟೈರ್ ನಡುವಿನ ಸಣ್ಣ ಅಂತರದಲ್ಲಿ ಸಿಕ್ಕಿಬಿದ್ದಿರುವುದನ್ನು ಕಾಣಬಹುದು. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ವೀಡಿಯೊದಲ್ಲಿ, ಕೋತಿಯನ್ನು ರಕ್ಷಿಸುವ ಸಲುವಾಗಿ ಸ್ಥಳೀಯರು ಬೈಕ್ನ ಟೈರ್ ಅನ್ನು ತೆಗೆಯುವುದನ್ನು ಕಾಣಬಹುದು.