ಗದಗ: ಕಾಡಿನ ಅಂಚಿನಲ್ಲಿದ್ದಂತ ಶಾಲೆಯ ಆವರಣಕ್ಕೆ ನರಿಯೊಂದು ನುಗ್ಗಿದ ಪರಿಣಾಮ, ಶಾಲೆಯ ವಿದ್ಯಾರ್ಥಿಗಳು ಹೆದರಿ ಧಿಕ್ಕಾಪಾಲಾಗಿ ಓಡಿರುವಂತ ಘಟನೆ ಗದಗದ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ರೈಲ್ವೆ ಸಿಬ್ಬಂದಿಗಳ ಗಮನಕ್ಕೆ: ಡಿ.15ರಂದು ಮೈಸೂರು ರೈಲ್ವೆ ವಿಭಾಗದಿಂದ ರಾಷ್ಟ್ರವ್ಯಾಪ್ತಿ ಪಿಂಚಣಿ ಅದಾಲತ್
ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿರುವಂತ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯು ಕಪ್ಪತ್ತುಗುಡ್ಡ ಸಮೀಪದಲ್ಲಿದೆ. ಹೀಗಾಗಿ ಇಂದು ನರಿಗಳು ಪ್ರೌಢ ಶಾಲೆಯ ಆವರಣಕ್ಕೆ ನುಗ್ಗಿದ್ದರಿಂದ ವಿದ್ಯಾರ್ಥಿಗಳು ಭಯಪಟ್ಟು ಕಂಗಾಲಾಗಿ ಓಡಿದ್ದಾರೆ.
ಸಾರ್ವಜನಿಕರೇ, ‘ಕರೆಂಟ್ ಬಿಲ್’ ಜಾಸ್ತಿ ಬರ್ತಿದ್ಯಾ.? ಚಿಂತಿಸ್ಬೇಡಿ, ನಿಮ್ಮ ಮನೆಲಿ ಈ ಸಾಧನ ಬಳಸಿ
ಈ ವಿಷಯವನ್ನು ತಿಳಿದಂತ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಶಾಲಾ ಅವರಣಕ್ಕೆ ದೌಡಾಯಿಸಿ, ನರಿಗಳನ್ನು ಹಿಡಿದು ತೆಗೆದುಕೊಂಡು ತೆರಳಿದ್ದಾರೆ. ಈ ಬಳಿಕ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.
BIGG NEWS: ಭಾರತ- ಚೀನಾ ಸಂಘರ್ಷಕ್ಕೆ ನೆಹರೂ ಅವರೇ ಕಾರಣ;ಸಿ.ಟಿ ರವಿ ಆರೋಪ