ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣುಬಿಗಿದುಕೊಂಡಿದ್ದಾಗಿ ಹೆದರಿಸಲು ಹೋಗಿ ಪತಿ ನಿಜವಾಗಿ ಕೂಡ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಿಹಾರ ಮೂಲದ ಅಮಿತ್ ಕುಮಾರ್(28) ಮೃತ ದುರ್ದೈವಿ. ಅಮಿತ್ ಕುಮಾರ್ ಜಿಮ್ ಟ್ರೈನರ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅಮಿತ್ ಒಂದು ವರ್ಷದ ಹಿಂದೆ ಜಿಮ್ ಸಮೀಪವೇ ಓರ್ವ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ.
ಈ ನಡುವೆ ಮದುವೆ ಬಳಿಕ ಅಮಿತ್ ಕುಮಾರ್ ಪತ್ನಿ ಫ್ರೆಂಡ್ಸ್ ಜೊತೆಗೆ ಪದೇ ಪದೆ ಫೋನ್ ಕರೆಯಲ್ಲಿ ಹೊತ್ತು ಕಳೆಯುತ್ತಿದ್ದಳು ಎನ್ನಲಾಗಿದೆ. ಇದಕ್ಕೇ ಸಂಬಂಧಪಟ್ಟಂತೆ ಇಬ್ಬರ ನಡುವೆ ಜಗಳ ನಡೆಯುತ್ತಿದೆಯಂತೆ ಇದಲ್ಲದೇ ಪತ್ನಿ ಬೇರೊಂದು ಕಡೆ ವಾಸವಾಗಿದ್ದಳು. ಅದರಂಥೆ ನಿನ್ನೆ ಅಮಿತ್ ಪದೇ ಪದೇ ಕರೆ ಮಾಡಿ ಮನವಿ ಮಾಡುತ್ತಿದ್ದ. ನಿನ್ನೆ ಕೂಡ ವಿಡಿಯೋ ಕಾಲ್ನಲ್ಲಿರುವಾಗಲೇ ನೇಣು ಬಿಗಿದುಕೊಂಡಂತೆ ಹೆದರಿಸಿದ್ದಾನೆ. ಈ ವೇಳೆ ಆತ ಈ ವೇಳೆ ಮೊಬೈಲ್ ಕೈ ಜಾರಿದ್ದು, ಅದನ್ನು ಹಿಡಿಯಲೆಂದು ಹೋದಾಗ ಅಚಾನಕ್ ಆಗಿ ಉರುಳು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಸದ್ಯ ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.