ನವದೆಹಲಿ : ಬಾಲಕಿಯೊಬ್ಬಳು ಬಿಜೆಪಿ (BJP) ಕುರಿತಂತೆ ಪದ್ಯವೊಂದನ್ನು ಹಾಡುತ್ತಾ, ಹೊಗಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋವನ್ನು ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಾಲಕಿ ಗುಜರಾತಿ ( Gujarati) ಭಾಷೆಯಲ್ಲಿ “ಬಿಜೆಪಿ ನಮ್ಮನ್ನು ಉಳಿಸುತ್ತಿದೆ, ಬಿಜೆಪಿ ಮತ್ತೆ ಬರುತ್ತದೆ ಎಂದು ಹೇಳಿರುವುದನ್ನು ಕೇಳಬಹುದಾಗಿದೆ.
ગુજરાતીઓ ના મન મસ્તીષ્ક પર છવાયો વિકાસ.
“અમને તો ફાવશે જ ભાજપ, ફરી આવશે જ ભાજપ..” #કમળ_સાથે_સમૃદ્ધ_ગુજરાત pic.twitter.com/hpVa9OSkyM— BJP (@BJP4India) November 21, 2022
57 ಸೆಕೆಂಡ್ಗಳಿರುವ ಈ ವೀಡಿಯೋದಲ್ಲಿ, ಬಿಜೆಪಿ, ಬಿಜೆಪಿ, ಬಿಜೆಪಿ, ಎಲ್ಲಿ ನೋಡಿದರೂ ಬಿಜೆಪಿ, ಪ್ರತಿಯೊಂದು ಚರ್ಚೆಯೂ ಬಿಜೆಪಿಯಿಂದಲೇ ಆರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ.
ಬಿಜೆಪಿಯನ್ನು ಸೋಲಿಸಲು ಜನ ನಾನಾ ಆಟಗಳನ್ನು ಆಡುತ್ತಿದ್ದಾರೆ ಎಂದು ಗುಜರಾತಿ ಭಾಷೆಯಲ್ಲಿ ಬಾಲಕಿ ಪದ್ಯ ಹಾಡಲು ಶುರು ಮಾಡಿದ್ದಾಳೆ. ಬಿಜೆಪಿಯನ್ನು ಪದ್ಯದ ಮೂಲಕ ಹೊಗಳುವುದನ್ನು ಕೇಳಿದ ಮೋದಿ ಅವರು ಕೊನೆಗೆ ಬಾಲಕಿಗೆ ಶಭಾಶ್ ಎಂದು ಮೆಚ್ಚುಗೆ ವ್ಯಕ್ತಪಡಿಸುವುದನ್ನು ಕಾಣಬಹುದಾಗಿದೆ.