ಕೊಡಗು : ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಇಂದು ನಸುಕಿನ ಜಾವ ವಸತಿ ಶಾಲೆಯಲ್ಲಿ 6 ವರ್ಷದ ಬಾಲಕ ಸಜೀವ ದಹನ ಆಗಿರುವ ಘಟನೆ ನಡೆದಿದ್ದು ಇನ್ನು ಶಾಲೆಯ ಇಬ್ಬರು ಬಾಲಕರು 51 ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ. ಜೀವದ ಹಂಗು ತೊರೆದು ಬಾಲಕರು ರಕ್ಷಣೆ ಮಾಡಿದ್ದಾರೆ 10 ವರ್ಷದ ಬಬಿನ್ ಮತ್ತು 11 ವರ್ಷದ ಯಶ್ವಿನ್ ಸಾಹಸಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತಿದೆ.
ಮಡಿಕೇರಿಯಲ್ಲಿರುವ ಹರಿಮಂದಿರ ವಸತಿ ಶಾಲೆಯಲ್ಲಿ ಇಂದು ಬೆಳಿಗ್ಗೆ ಈ ಒಂದು ಘಟನೆ ಸಂಭವಿಸಿದ್ದು, 2ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಪುಷ್ಪಕ್ ಈ ಒಂದು ಘಟನೆಯಲ್ಲಿ ಸಾವನಪ್ಪಿದ್ದಾನೆ. ಹರಿ ಮಂದಿರದ ವಸತಿ ಶಾಲೆಯಲ್ಲಿ ಬೆಳಗಿನ ಜಾವ ಈ ಒಂದು ಅಗ್ನಿ ಅವಘಡ ಸಂಭವಿಸಿದ್ದು 4:15 ರ ಸುಮಾರಿಗೆ ಹೊಗೆಯಿಂದ ಬಬೀನ್ ಗೆ ಎಚ್ಚರವಾಗಿದೆ. ಬೆಂಕಿ ಬಿದ್ದ ವಿಚಾರ ಅರಿತು ಆತ ಯಶ್ವಿನ್ ಗೆ ಕರೆದಿದ್ದಾನೆ. ಆಗ ಎಲ್ಲ ಮಕ್ಕಳನ್ನು ಕಿರುಚಿ ಇಬ್ಬರು ಬಾಲಕರು ಎಬ್ಬಿಸಿದ್ದಾರೆ.
ಬೆಂಕಿಯಿಂದಾಗಿ ಬಾಲಕರು ಬಾಗಿಲಿನತ್ತ ಓಡುವ ಪ್ರಯತ್ನ ವಿಫಲವಾಗಿದೆ. ಪ್ಲಾಸ್ಕನಿಂದ ಕಿಟಕಿ ಗಾಜನ್ನು ಒಡಿಯೋ ಪ್ರಯತ್ನ ಕೂಡ ವಿಫಲವಾಗುತ್ತದೆ. ಎಲ್ಲಾ ಬಾಲಕರು ಮತ್ತೊಂದು ಕೊನೆಗೆ ಓಡಿ ಸ್ಲೈಡ್ ಗ್ಲಾಸ್ ತೆಗೆದು ಒಬ್ಬೊಬ್ಬ ಮಕ್ಕಳನ್ನು ದಾಟಿಸಿದ್ದಾರೆ. ಈ ಇಬ್ಬರ ಬಾಲಕರು ಸಮಯಪ್ರಜ್ಞೆಯಿಂದ 51 ಪ್ರಾಣಗಳನ್ನು ಉಳಿಸಿದ್ದಾರೆ. ಇಬ್ಬರು ಬಾಲಕರ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.