ಉತ್ತರ ಕನ್ನಡ: ಮುರುಡೇಶ್ವರ ಕಡಲ ತೀರದಲ್ಲಿ ಇಬ್ಬರು ಕೊಚ್ಚಿ ಹೋಗಿದ್ದ ಇಬ್ಬರಲ್ಲಿ, ಓರ್ವ ಬಾಲಕ ಸಮುದ್ರಪಾಲಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರ್ಡೇಶ್ವರ ಕಡಲ ತೀರದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ 8 ವರ್ಷದ ಕೃತಿಕ್ ರೆಡ್ಡಿ ಸಮುದ್ರಪಾಲಾಗಿದ್ದಾರೆ. ಅದೃಷ್ಟವಶಾತ್ 27 ವರ್ಷದ ವಸಂತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ 8 ಜನರು ಮುರಡೇಶ್ವರ ಕಡಲ ತೀರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಬೆಳಗ್ಗೆ 6 ಗಂಟೆ ಸುಮಾರಿಗೆ ಮುರ್ಡೇಶ್ವರ ಕಡಲ ತೀರಕ್ಕೆ ತೆರಳಿದ್ದರು. ಸಮುದ್ರಕ್ಕೆ ಇಳಿದಿದ್ದ ಕೃತಿಕ್ ರೆಡ್ಡಿ ಸಾವನ್ನಪ್ಪಿದ್ದರೇ, ವಸಂತಾ ಅಪಾಯದಿಂದ ಪಾರಾಗಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಜೈನ ಮಂದಿರಗಳ ಅರ್ಚಕರಿಗೆ ಸಿಹಿಸುದ್ದಿ: ವೇತನ ನಿಗದಿ ಪಡಿಸಿ ಸರ್ಕಾರ ಅಧಿಕೃತ ಆದೇಶ
ದೇಶದ ಜನತೆಗೆ ‘ಭಾವನಾತ್ಮಕ ಪತ್ರ’ ಬರೆದ ಪ್ರಧಾನಿ ಮೋದಿ, ಈ ಶಪಥಕ್ಕೆ ಕರೆ | PM Modi Latter