ಬೆಂಗಳೂರು: ಬದುಕು – ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ‘ಜರ್ನಲಿಸ್ಟ್ಗಳಿಗಾಗಿ ಪರ್ಯಾಯ ಜೀವನೋಪಾಯ ಸಾಧ್ಯತೆಗಳು’ ವಿಷಯದ ಬಗ್ಗೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಬೆಂಗಳೂರು ಪ್ರೆಸ್ಕ್ಲಬ್ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘದ ಸಹಯೋದಲ್ಲಿ ಬೆಂಗಳೂರಿನ ಪ್ರೆಸ್ಕ್ಲಬ್ ( Bengaluru Press Club ) ಆವರಣದಲ್ಲಿ ಜುಲೈ 28 ಮತ್ತು 29ರಂದು ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಿದೆ.
ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದರ ಹಿಂದಿನ ಸ್ಪಷ್ಟ ಕಾರಣವೇನು.? ಬಿಜೆಪಿಗೆ ರಮೇಶ್ ಬಾಬು ಪ್ರಶ್ನೆ
ಜುಲೈ 28ರ ಗುರುವಾರ ಬೆಳಿಗ್ಗೆ 10.30ಕ್ಕೆ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಕೆ. ತೊಗರ್ಸಿ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮೊದಲ ದಿನ ‘ಡಿಜಿಟಲ್ ಜರ್ನಲಿಸಮ್ನ ಸಾಧ್ಯತೆಗಳು’ ವಿಷಯದ ಬಗ್ಗೆ ಕನ್ನಡನ್ಯೂಸ್ನೌ.ಕಾಮ್ ವೆಬ್ಸೈಟ್ನ ಸಂಪಾದಕ ವಸಂತ್ ಬಿ. ಈಶ್ವರಗೆರೆ ಪ್ರಾಯೋಗಿಕ ತರಗತಿ ನಡೆಸಿಕೊಡಲಿದ್ದಾರೆ. ಎರಡನೇ ದಿನ ‘ಪರ್ಯಾಯ ಜೀವನೋಪಾಯ ದಾರಿಗಳು’ ವಿಷಯದ ಬಗ್ಗೆ ಸಂವಾದ ಯುವಜನ ಕಾರ್ಯ ಮತ್ತು ಹಕ್ಕುಗಳ ಕೇಂದ್ರದ ತಂಡದ ಮುಖ್ಯಸ್ಥ ಜನಾರ್ದನ ಕೆಸರಗದ್ದೆ ಮಾತನಾಡಲಿದ್ದಾರೆ.
ನನ್ನ ಲೆವಲ್ ಗೆ ಮಾತನಾಡೋರು ಇದ್ದರೇ ನಾನು ಮಾತನ್ನಾಡುತ್ತೇನೆ, ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು – DKS
ಜುಲೈ 29ರ ಶುಕ್ರವಾರ ಸಂಜೆ 3 ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಬೆಂಗಳೂರು ಪ್ರೆಸ್ಕ್ಲಬ್ನ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಬಿ.ಪಿ. ಮತ್ತು ಹಿರಿಯ ಪರ್ತಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಖಜಾಂಚಿ ಮುಂಜಾನೆ ಸತ್ಯ ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಆಸಕ್ತರು ಈ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು: bit.ly/3aUL2tL ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9972089471, 9945065060, 9964601753