ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಹಮ್ಮಿಕೊಂಡಿರುವ ತುರ್ತು ಹಾಗೂ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಜೂನ್ 20ರ ಇಂದು ಬೆಂಗಳೂರಿನ 25ಕ್ಕೂ ಹೆಚ್ಚು ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ.
ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗುವ ಈ ವಿದ್ಯುತ್ ಕಡಿತವು ಸಂಜೆ 4 ಅಥವಾ 5 ಗಂಟೆಯವರೆಗೆ ಮುಂದುವರಿಯಲಿದೆ.
ಆರ್.ಆರ್.ನಗರ ಮತ್ತು ಬನಶಂಕರಿ ಉಪಕೇಂದ್ರಗಳಲ್ಲಿ ನಡೆಯಲಿರುವ ತುರ್ತು ಕಾಮಗಾರಿಗಳಿಂದಾಗಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಭಾರತ್ ಲೇಔಟ್, ಪಟಾಲಮ್ಮ ದೇವಸ್ಥಾನದ ಹಿಂಭಾಗ, ಹ್ಯಾಪಿ ವ್ಯಾಲಿ ಲೇಔಟ್, ವಿನಾಯಕ ಲೇಔಟ್, ಉತ್ತರಹಳ್ಳಿ, ಅಪ್ಪಯ್ಯ ಸ್ವಾಮಿ ಲೇಔಟ್, ವಡ್ಡರಪಾಳ್ಯ, ಬನಶಂಕರಿ 5ನೇ ಮತ್ತು 6ನೇ ಹಂತ, ಪೂರ್ಣಪ್ರಜ್ಞ ಲೇಔಟ್, ಮಂತ್ರಿ ಆಲ್‌ಫೈನ್ಸ್, ದ್ವಾರಕಾನಗರ, 80 ಅಡಿ ರಸ್ತೆ, ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜು ಸುತ್ತಮುತ್ತ, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಎನ್‌ಟಿವೈ ಲೇಔಟ್, ತ್ಯಾಗರಾಜನಗರ, ಬಸವನಗುಡಿ, ಬನಶಂಕರಿ 3ನೇ ಹಂತ, ಕಟ್ಟರಿಗುಪ್ಪೆ, ಗಿರಿನಗರ 4ನೇ ಹಂತ, ಐಟಿಐ ಲೇಔಟ್, 100 ಅಡಿ ರಿಂಗ್ ರಸ್ತೆ ಹಾಗೂ ಕಾಮಾಕ್ಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಇದೇ ವೇಳೆ ಮಲ್ಲೇಶ್ವರಂ ವಿಭಾಗ ಹಾಗೂ ಸಿ-6 ಉಪವಿಭಾಗದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೆಲಸಗಳಿಂದಾಗಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಎಂ.ಎಸ್. ರಾಮಯ್ಯ ಆಸ್ಪತ್ರೆ, ಪೈಪ್‌ಲೈನ್ ರಸ್ತೆ, ಎಂಎಸ್‌ಆರ್ ನಗರ, ಬಿಇಎಲ್ ರಸ್ತೆ, ಸಿಪಿಆರ್‌ಐ ಕ್ವಾರ್ಟರ್ಸ್, ಸದಾಶಿವನಗರ ಪೊಲೀಸ್ ಠಾಣೆ ಸುತ್ತಮುತ್ತ, ಎಜಿಎಸ್ ಲೇಔಟ್, ಜಲದರ್ಶಿನಿ ಲೇಔಟ್, ರಾಮಯ್ಯ ಬಾಯ್ಸ್ ಹಾಸ್ಟೆಲ್, ಎ.ಕೆ. ಕಾಲೋನಿ, ಶ್ರೀನಿಕೇತನ ಅಪಾರ್ಟ್‌ಮೆಂಟ್, ಕಾಫಿ ಡೇ, ರಾಮಯ್ಯ ಆಸ್ಪತ್ರೆ ಎದುರಿನ ಪಿಜ್ಜಾ ಹಟ್, ನಾರಾಯಣ ಪ್ರಸಾದ್ ಕಟ್ಟಡ, ಸೀನಪ್ಪ ಲೇಔಟ್, ಇಸ್ರೋ ಪ್ರದೇಶ, ಡಾಲರ್ಸ್ ಕಾಲೋನಿ, ಚಿಕ್ಕಮಾರನಹಳ್ಳಿ ಮತ್ತು ಗೌರಿ ಅಪಾರ್ಟ್‌ಮೆಂಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇದಲ್ಲದೆ 66/11 ಕೆವಿ ಅಮರಜ್ಯೋತಿ ಎಂಯುಎಸ್ಎಸ್‌ನಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳು ನಡೆಯಲಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜೋಗುಪಾಳ್ಯ, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಜೋಗುಪಾಳ್ಯ ಮುಖ್ಯರಸ್ತೆ, ರಂಕಾ ಕೋರ್ಟ್, ಆರ್ಟಿಲರಿ ರಸ್ತೆ, ಗೌತಂಪುರ, ಕ್ಯಾಂಬ್ರಿಡ್ಜ್ ರಸ್ತೆ, ಆರ್‌ಎಂಝೆಡ್ ಮಿಲೇನಿಯಾ, ಹಲಸೂರು, ಹಲಸೂರು ರಸ್ತೆ, ಅಜಂತಾ ಟ್ರಿನಿಟಿ ಸರ್ಕಲ್, ಎಚ್‌ಎಎಲ್ 2ನೇ ಹಂತ, ಬೆನ್ನಿಗಾನಹಳ್ಳಿ, ಎ. ನಾರಾಯಣಪುರ, ಬಿ. ನಾರಾಯಣಪುರ, ಕಗ್ಗದಾಸಪುರ, ಆಕಾಶನಗರ, ಉದಯನಗರ, ಬೈರಸಂದ್ರ, ಸಿ.ವಿ. ರಾಮನ್ ನಗರ, ಎನ್‌ಜಿಇಎಫ್ ಲೇಔಟ್ ಪೂರ್ವ ಭಾಗ, সদಾನಂದನಗರ, ಕಸ್ತೂರಿನಗರ, ಭುವನೇಶ್ವರಿ ನಗರ, ವರ್ತೂರು ರಸ್ತೆ, ನಾಗವಾರಪಾಳ್ಯ ಹಾಗೂ ಅಬ್ಬೆ ಲೇಔಟ್ ಸೇರಿದಂತೆ ಹಲವು ಸುತ್ತಮುತ್ತಲಿನ ಜಾಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ನಗರದ ಸಾರ್ವಜನಿಕರು ಈ ವಿದ್ಯುತ್ ವ್ಯತ್ಯಯದ ಸಮಯವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಮತ್ತು ತಮ್ಮ ದಿನನಿತ್ಯದ ಕೆಲಸಗಳನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.








