ಚಾಮರಾಜನಗರ : ಚಾಮರಾಜನಗರದಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು ಮನೆಯಲ್ಲಿ ಗ್ರೈಂಡರ್ ನಿಂದ ವಿದ್ಯುತ್ ಹರಿದು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಈ ಒಂದು ಘೋರ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಕಾಡಂಚಿನ ಗ್ರಾಮ ಕಲಿಗೌಡನಹಳ್ಳಿಯಲ್ಲಿ ನಡೆದಿದ್ದು, ಪುಟ್ಟಮ ಹಾಗೂ ಆನಂದ ದಂಪತಿಯ ನಾಲ್ಕು ವರ್ಷದ ಪುತ್ರಿ ಅದ್ವಿತ ಮನೆಯಲ್ಲಿ ಗ್ರೈಂಡರ್ ಆನ್ ಇದ್ದಾಗ ವಿದ್ಯುತ್ ಹರಿದು ಸಾವನಪ್ಪಿದ್ದಾಳೆ. ತಮ್ಮ ಕಣ್ಣೆದುರೇ ಮಗಳ ಸಾವನ್ನು ಕಂಡು ಪೋಷಕರ ಆಕ್ರಂದನ ಇದೀಗ ಮುಗಿಲು ಮುಟ್ಟಿದೆ.








