ಬೆಂಗಳೂರು: ರಾಜ್ಯ ಸರ್ಕಾರದ ಸುಸ್ಥಿರ ಆರ್ಥಿಕ ಅಭಿವೃದ್ಧಿ, ದೂರದೃಷ್ಟಿಯ ಕೈಗಾರಿಕಾ ನೀತಿ ಹಾಗೂ ಉದ್ಯಮ ಸ್ನೇಹಿ ಆಡಳಿತದ ಫಲವಾಗಿ ಭಾರತದ ರಫ್ತು ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದ ಆರ್ಥಿಕ ಪ್ರಗತಿಗೆ ಸಾಕ್ಷಿ ಎಂಬಂತೆ, 2025-26ರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಒಟ್ಟು ರಫ್ತು ಪ್ರಮಾಣವು ಶೇ. 9.5 ರಷ್ಟು ಗಮನಾರ್ಹ ವೃದ್ಧಿ ಸಾಧಿಸಿದೆ. ಈ ಮೂಲಕ ರಾಜ್ಯದ ಒಟ್ಟು ರಫ್ತು ವಹಿವಾಟು ಬರೋಬ್ಬರಿ ₹19.7 ಲಕ್ಷ ಕೋಟಿಗೆ ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ.
ರಾಜ್ಯವು ತನ್ನ ತಂತ್ರಜ್ಞಾನದ ಬಲವನ್ನು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಿದೆ. ಸಾಫ್ಟ್ವೇರ್ ಮತ್ತು ಸೇವಾ ವಲಯದ (Software and Service Sector) ರಫ್ತಿನಲ್ಲಿ ಕರ್ನಾಟಕವು ದೇಶದಲ್ಲೇ ನಂ.1 ಸ್ಥಾನಕ್ಕೆ ಜಿಗಿದು ಅತ್ಯುನ್ನತ ಸಾಧನೆ ಮಾಡಿದೆ. ಇನ್ನು ವಾಣಿಜ್ಯ ಉತ್ಪನ್ನಗಳ (Merchandise) ರಫ್ತು ವಲಯದಲ್ಲೂ ಸಹ ರಾಜ್ಯವು ದೇಶದಲ್ಲೇ ನಾಲ್ಕನೇ ಸ್ಥಾನವನ್ನು ಯಶಸ್ವಿಯಾಗಿ ಕಾಯ್ದುಕೊಂಡಿದೆ.
ಕರ್ನಾಟಕದ ಉತ್ಪನ್ನಗಳು, ಸೇವೆಗಳು ಮತ್ತು ಹೊಸ ಆವಿಷ್ಕಾರಗಳು ಇಂದು ಜಾಗತಿಕ ಮಟ್ಟವನ್ನು ತಲುಪಿವೆ. ಈ ಯಶಸ್ಸು ರಾಜ್ಯಕ್ಕೆ ಮತ್ತಷ್ಟು ಹೊಸ ಹೂಡಿಕೆಗಳನ್ನು ಆಕರ್ಷಿಸಲು, ನವೀನ ಉದ್ಯಮಗಳ ಸ್ಥಾಪನೆಗೆ ಮತ್ತು ಲಕ್ಷಾಂತರ ಯುವಕರಿಗೆ ಉದ್ಯೋಗ ಸೃಷ್ಟಿಸಲು ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಮ್ಮ ಸರ್ಕಾರದ ಸುಸ್ಥಿರ ಆರ್ಥಿಕ ಅಭಿವೃದ್ಧಿ, ದೂರದೃಷ್ಟಿಯ ಕೈಗಾರಿಕಾ ನೀತಿ, ಉದ್ಯಮ ಸ್ನೇಹಿ ಆಡಳಿತದ ಸಲುವಾಗಿ ಭಾರತದ ರಫ್ತು ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
2025-26ರ ಆರ್ಥಿಕ ವರ್ಷದಲ್ಲಿ ರಾಜ್ಯದ ಒಟ್ಟು ರಫ್ತು ಪ್ರಮಾಣವು ಶೇ. 9.5 ರಷ್ಟು ವೃದ್ಧಿಯಾಗಿದ್ದು, ಸುಮಾರು ₹19.7 ಲಕ್ಷ ಕೋಟಿಗೆ ತಲುಪಿದೆ. ಸಾಫ್ಟ್ವೇರ್ ಮತ್ತು… pic.twitter.com/5ySEIubvRX
— DIPR Karnataka (@KarnatakaVarthe) June 16, 2026








