Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸಿಎಂ ಹಾಗೂ 13 ಸಚಿವರ ಪದಗ್ರಹಣ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್!

‘ವಿದ್ಯುತ್ ಖಾಸಗೀಕರಣ ನೀತಿ’ಗೆ ರೈತ ಸಂಘದ ತೀವ್ರ ವಿರೋಧ: ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ

BREAKING : ಸುರ್ಜೆವಾಲಾ ಸಂಧಾನ ಯಶಸ್ವಿ : 13 ದಿನಗಳ ಬಳಿಕ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡ ಕೃಷ್ಣಭೈರೇಗೌಡ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ವಿದ್ಯುತ್ ಖಾಸಗೀಕರಣ ನೀತಿ’ಗೆ ರೈತ ಸಂಘದ ತೀವ್ರ ವಿರೋಧ: ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ
KARNATAKA

‘ವಿದ್ಯುತ್ ಖಾಸಗೀಕರಣ ನೀತಿ’ಗೆ ರೈತ ಸಂಘದ ತೀವ್ರ ವಿರೋಧ: ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ನೀತಿಯನ್ನು ಕರ್ನಾಟಕ ರಾಜ್ಯ ರೈತ ಸಂಘವು ಆರಂಭದಿಂದಲೂ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷರಾದ ಶಿವಾನಂದ ಕುಗ್ವೆ ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತ ಚಳುವಳಿಯ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪನಿಗಳ ಪರವಾಗಿದ್ದ ಮೂರು ಕೃಷಿ ಕಾಯ್ದೆಗಳ ಜೊತೆಗೆ ವಿದ್ಯುತ್ ಖಾಸಗೀಕರಣ ನೀತಿಯನ್ನೂ ಕೇಂದ್ರ ಸರ್ಕಾರ ಹಿಂಪಡೆಯುವುದಾಗಿ ಭರವಸೆ ನೀಡಿತ್ತು. ಆದರೆ, ಈಗ ಅದೇ ನೀತಿಯನ್ನು ಕದ್ದುಮುಚ್ಚಿ ಜಾರಿಗೆ ತರಲು ಸರ್ಕಾರ ಹೊರಟಿದೆ ಎಂದು ಅವರು ಆಕ್ಷೇಪಿಸಿದರು.

​ಟಾಟಾ ಕಂಪನಿಯಿಂದ ಜಾಹೀರಾತು: ಆಕ್ಷೇಪಣೆಗೆ ಜೂನ್ 23 ಕೊನೆ ದಿನ

​ಮುಂಬೈ ಮೂಲದ ಟಾಟಾ ಕಂಪನಿಯು ಕರ್ನಾಟಕದ ಸುಮಾರು 19 ಜಿಲ್ಲೆಗಳಲ್ಲಿ ಸಾರ್ವಜನಿಕ ವಿದ್ಯುತ್ ಪ್ರಸರಣ ಕಂಪನಿಗಳಿಗೆ (ಮೆಸ್ಕಾಂ, ಹೆಸ್ಕಾಂ, ಬೆಸ್ಕಾಂ ಇತ್ಯಾದಿ) ಪರ್ಯಾಯವಾಗಿ ತಾನೇ ವಿದ್ಯುತ್ ಸೇವೆ ಒದಗಿಸುವುದಾಗಿ ಜಾಹೀರಾತು ನೀಡಿದೆ. ಈ ಬಗ್ಗೆ ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆಗಳಿದ್ದರೆ, ಜೂನ್ 23ರ ಒಳಗಾಗಿ ಸಲ್ಲಿಸುವಂತೆ ಕೋರಿದೆ. ಇದರರ್ಥ ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಇಡೀ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಸಿದ್ಧತೆ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಶಿವಾನಂದ ಕುಗ್ವೆ ಆತಂಕ ವ್ಯಕ್ತಪಡಿಸಿದರು.

​ಖಾಸಗೀಕರಣದಿಂದಾಗುವ ತೊಂದರೆಗಳು:

  • ​ರೈತರ ಉಚಿತ ವಿದ್ಯುತ್‌ಗೆ ಕುತ್ತು: ಪ್ರಸ್ತುತ ರೈತರಿಗೆ 10 HP ವರೆಗಿನ ಪಂಪ್‌ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಇದರಿಂದಾಗಿ ರಾಜ್ಯದ ಕೃಷಿ ವಲಯ ಮತ್ತು ರೈತರು ಒಂದಿಷ್ಟು ಚೇತರಿಸಿಕೊಂಡಿದ್ದಾರೆ. ಖಾಸಗೀಕರಣವಾದರೆ ಈ ಎಲ್ಲಾ ರಿಯಾಯಿತಿಗಳು ರದ್ದಾಗಲಿವೆ.
  • ​ಬಡವರ ಯೋಜನೆಗಳಿಗೆ ಗಂಡಾಂತರ: ಸಾಮಾನ್ಯ ಜನರಿಗೆ ಸಿಗುತ್ತಿರುವ ಗ್ಯಾರಂಟಿ ಯೋಜನೆಗಳ ವಿದ್ಯುತ್ ರಿಯಾಯಿತಿ, ಭಾಗ್ಯಜ್ಯೋತಿ ಹಾಗೂ ಅತ್ಯೋದಯ ಯೋಜನೆಗಳು ಸಂಪೂರ್ಣವಾಗಿ ನಿಂತುಹೋಗಲಿವೆ. ಲಾಭದ ಹಪಾಹಪಿತನ ಹೊಂದಿರುವ ಖಾಸಗಿ ಕಂಪನಿಗಳು ಬಡವರ ಹಿತ ಕಾಯುವುದಿಲ್ಲ.
  • ​ನೌಕರರ ಉದ್ಯೋಗಕ್ಕೆ ಕಂಟಕ: ನಮ್ಮ ಸಾರ್ವಜನಿಕ ವಿದ್ಯುತ್ ಕಂಪನಿಗಳು ಉತ್ತಮ ಸೇವೆ ನೀಡುತ್ತಿವೆ ಮತ್ತು ಗ್ರಾಹಕರೊಂದಿಗೆ ಸೌಹಾರ್ದಯುತ ಬಾಂಧವ್ಯ ಹೊಂದಿವೆ. ಆದರೆ ಖಾಸಗೀಕರಣದಿಂದಾಗಿ ಲಕ್ಷಾಂತರ ಸ್ಥಳೀಯ ಕಾರ್ಮಿಕರು ಹಾಗೂ ನೌಕರರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುವ ಭೀತಿ ಎದುರಾಗಿದೆ. ಬಿಎಸ್ಎನ್‌ಎಲ್ ಸಂಸ್ಥೆಗೆ ಆದ ಗತಿಯೇ ಇವರಿಗೂ ಆಗಲಿದೆ.

​ಸಾರ್ವಜನಿಕ ಆಸ್ತಿಯ ದುರ್ಬಳಕೆ

​ನಮ್ಮ ದೇಶದಲ್ಲಿ ನೂರಾರು ವರ್ಷಗಳಿಂದ ಸಾರ್ವಜನಿಕರ ಸಾವಿರಾರು ಕೋಟಿ ರೂಪಾಯಿ ತೆರಿಗೆ ಹಣದಿಂದ ನಿರ್ಮಿಸಲಾದ ವಿದ್ಯುತ್ ಕಂಬಗಳು, ಕಚೇರಿಗಳು ಹಾಗೂ ಮೂಲಭೂತ ಸೌಕರ್ಯಗಳನ್ನು (Infrastructure) ಬಳಸಿಕೊಂಡೇ ಟಾಟಾ ಕಂಪನಿ ಇಲ್ಲಿ ವ್ಯಾಪಾರ ಮಾಡಲು ಹೊರಟಿದೆ. ಅವರದ್ದೇ ಆದ ಪ್ರತ್ಯೇಕ ಲೈನ್ ಅಥವಾ ಹೂಡಿಕೆ ಇದರಲ್ಲಿ ಇಲ್ಲ ಎಂದು ಅವರು ದೂರಿದರು.

​ಜೂನ್ 18ರಂದು ರಾಜ್ಯಾದ್ಯಂತ ಹಕ್ಕೊತ್ತಾಯ ಪ್ರತಿಭಟನೆ

​ವಿದ್ಯುತ್ ಖಾಸಗೀಕರಣದ ಈ ಜನವಿರೋಧಿ ಧೋರಣೆಯನ್ನು ಖಂಡಿಸಿ ಜೂನ್ 18ರಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ರೈತ ಸಂಘದ ನೇತೃತ್ವದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ವಿದ್ಯುತ್ ಕಾರ್ಮಿಕ ಸಂಘಟನೆಗಳು ಕೂಡ ಈ ಹೋರಾಟಕ್ಕೆ ಬೆಂಬಲ ನೀಡುತ್ತಿವೆ. ಸಾಗರದಲ್ಲಿ ಜೂನ್.18ರಂದು ಎಸಿ ಕಚೇರಿ ಬಳಿಯಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಖಾಸಗೀಕರಣ ಮಾಡದಂತ ಮನವಿ ಮಾಡುವುದಾಗಿ ತಿಳಿಸಿದರು.

​ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರೆ

​ಜೂನ್ 23ರ ಒಳಗಾಗಿ ವಿದ್ಯುತ್ ಖಾಸಗೀಕರಣದ ವಿರುದ್ಧ ಆನ್‌ಲೈನ್, ಪೋಸ್ಟ್ ಅಥವಾ ಖುದ್ದಾಗಿ ಕಚೇರಿಗಳಿಗೆ ತೆರಳಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ರೈತ ಸಂಘವು ಇದನ್ನು ಒಂದು ಅಭಿಯಾನದಂತೆ ಹಮ್ಮಿಕೊಂಡಿದ್ದು, ಸಾರ್ವಜನಿಕರು ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆ ಸಲ್ಲಿಸುವ ಮೂಲಕ ವಿದ್ಯುತ್ ಕಂಪನಿಗಳ ಖಾಸಗೀಕರಣವನ್ನು ತಡೆಯಬೇಕು ಎಂದು ಶಿವಾನಂದ ಕುಗ್ವೆ ಮನವಿ ಮಾಡಿದರು.

ಈ ಸುದ್ದಿಗೋಷ್ಠಿಯ ವೇಳೆ ಜಿಲ್ಲಾಧ್ಯಕ್ಷರಾದ ಓಟೂರು ಶಿವಪ್ಪ, ಸಾಗರ ತಾಲ್ಲೂಕು ತಾಲ್ಲೂಕು ಅಧ್ಯಕ್ಷ ಸುಂದರ್ ಸಿಂಗ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಮೇಶ್ ಐಗಿನಬೈಲು, ಸೊರಬ ತಾಲ್ಲೂಕು ಅಧ್ಯಕ್ಷ ವೇದಮೂರ್ತಿ ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

BIG NEWS : ಸಿಎಂ ಹಾಗೂ 13 ಸಚಿವರ ಪದಗ್ರಹಣ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್!

2 Mins Read

BREAKING : ಸುರ್ಜೆವಾಲಾ ಸಂಧಾನ ಯಶಸ್ವಿ : 13 ದಿನಗಳ ಬಳಿಕ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡ ಕೃಷ್ಣಭೈರೇಗೌಡ!

1 Min Read

BREAKING : ರಾಜಧಾನಿ ಬೆಂಗಳೂರಲ್ಲಿ ನಿಲ್ಲದ ಬೀದಿ ನಾಯಿಗಳ ಹಾವಳಿ : ಬೆಚ್ಚಿ ಬೀಳಿಸುತ್ತೆ ಆರೋಗ್ಯ ಇಲಾಖೆ ಅಂಕಿ ಅಂಶ!

2 Mins Read
Recent News

BIG NEWS : ಸಿಎಂ ಹಾಗೂ 13 ಸಚಿವರ ಪದಗ್ರಹಣ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್!

‘ವಿದ್ಯುತ್ ಖಾಸಗೀಕರಣ ನೀತಿ’ಗೆ ರೈತ ಸಂಘದ ತೀವ್ರ ವಿರೋಧ: ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ

BREAKING : ಸುರ್ಜೆವಾಲಾ ಸಂಧಾನ ಯಶಸ್ವಿ : 13 ದಿನಗಳ ಬಳಿಕ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡ ಕೃಷ್ಣಭೈರೇಗೌಡ!

BREAKING : ನೀಟ್ ಅಕ್ರಮ ತಡೆಯಲು ಟೆಲಿಗ್ರಾಂ ಆಪ್ ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

State News
KARNATAKA

BIG NEWS : ಸಿಎಂ ಹಾಗೂ 13 ಸಚಿವರ ಪದಗ್ರಹಣ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್!

By ಸುರೇಶ್‌ KARNATAKA 2 Mins Read

ಬೆಂಗಳೂರು: ಮುಖ್ಯಮಂತ್ರಿ ಹಾಗೂ 13 ಸಚಿವರ ಪದಗ್ರಹಣ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಅರ್ಜಿದಾರನಿಗೆ ಹೈಕೋರ್ಟ್…

‘ವಿದ್ಯುತ್ ಖಾಸಗೀಕರಣ ನೀತಿ’ಗೆ ರೈತ ಸಂಘದ ತೀವ್ರ ವಿರೋಧ: ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ

BREAKING : ಸುರ್ಜೆವಾಲಾ ಸಂಧಾನ ಯಶಸ್ವಿ : 13 ದಿನಗಳ ಬಳಿಕ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡ ಕೃಷ್ಣಭೈರೇಗೌಡ!

BREAKING : ರಾಜಧಾನಿ ಬೆಂಗಳೂರಲ್ಲಿ ನಿಲ್ಲದ ಬೀದಿ ನಾಯಿಗಳ ಹಾವಳಿ : ಬೆಚ್ಚಿ ಬೀಳಿಸುತ್ತೆ ಆರೋಗ್ಯ ಇಲಾಖೆ ಅಂಕಿ ಅಂಶ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.