Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `NEET UG’ ಮರುಪರೀಕ್ಷೆ : ವೈದ್ಯಕೀಯ ಕಾಲೇಜುಗಳಿಗೆ `NMC’ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ!

ಬೆಂಗಳೂರಿನಲ್ಲಿ ಕೂತರೆ ಸಾಗರದ ಜನರ ಕಷ್ಟ ತಿಳಿಯುವುದೇಗೆ?: ಶಾಸಕರ ವಿರುದ್ಧ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದೇವೇಂದ್ರಪ್ಪ ವಾಗ್ದಾಳಿ

BREAKING : ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರತಿಷ್ಠಿತ ಅಶೋಕ ವಿವಿ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕ; ಯಾರಿವರು?
KARNATAKA

ಪ್ರತಿಷ್ಠಿತ ಅಶೋಕ ವಿವಿ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕ; ಯಾರಿವರು?

By ಸುರೇಶ್‌

ಬೆಂಗಳೂರು : ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ ‘ಅಶೋಕ ವಿಶ್ವವಿದ್ಯಾಲಯ’ದ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕವಾಗಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ನಡೆಸಿದ ಕಟ್ಟುನಿಟ್ಟಿನ ಆಯ್ಕೆ ಪ್ರಕ್ರಿಯೆಯ ನಂತರ ಈ ನೇಮಕ ಮಾಡಲಾಗಿದೆ. ಪ್ರೊ. ರಿಷಿಕೇಶ ಅವರು 2026ರ ಆಗಸ್ಟ್ 1ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಮೂರು ವರ್ಷಗಳ ಕಾಲ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಉಪಕುಲಪತಿಯಾಗಿದ್ದ ಪ್ರೊ. ಸೋಮಕ್ ರಾಯ್‌ಚೌಧರಿ ಅವರ ಜಾಗಕ್ಕೆ ಪ್ರೊ. ರಿಷಿಕೇಶ ಟಿ. ಕೃಷ್ಣನ್ ಅವರು ಬರಲಿದ್ದಾರೆ.

ಯಾರು ಈ ಪ್ರೊ. ರಿಷಿಕೇಶ ಟಿ. ಕೃಷ್ಣನ್?

ಪ್ರೊ. ರಿಷಿಕೇಶ ಅವರು ಭಾರತದ ಪ್ರಸಿದ್ಧ ಹಾಗೂ ಗೌರವಾನ್ವಿತ ಶಿಕ್ಷಣ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ದಶಕಗಳ ಅನುಭವವನ್ನು ಇವರು ಹೊಂದಿದ್ದಾರೆ. ಕಾನ್ಪುರದ ಐಐಟಿಯಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್, ಮತ್ತು ಐಐಎಂ-ಅಹಮದಾಬಾದ್‌ನಿಂದ ಮ್ಯಾನೇಜ್ಮೆಂಟ್ ಹಾಗೂ ಪಬ್ಲಿಕ್ ಪಾಲಿಸಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

ಅವರು ಈ ಹಿಂದೆ ಐಐಎಂ-ಇಂದೋರ್ ಮತ್ತು ಐಐಎಂ-ಬೆಂಗಳೂರಿನ ನಿರ್ದೇಶಕರಾಗಿದ್ದರು. ಇದಿಷ್ಟೇ ಅಲ್ಲದೆ, ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ (ಎಚ್‌ಇಎಫ್‌ಎ) ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಆಡಳಿತ ಮಂಡಳಿಯಲ್ಲೂ ಸೇವೆ ಸಲ್ಲಿಸಿದ್ದರು. ಭಾರತಕ್ಕೆ ಡೇಟಾ ಸಂರಕ್ಷಣಾ ಚೌಕಟ್ಟನ್ನು ಪ್ರಸ್ತಾಪಿಸಿದ ‘ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಸಮಿತಿ’ಯ ಸದಸ್ಯರಾಗಿಯೂ ಇವರು ಕೆಲಸ ಮಾಡಿದ್ದರು.

“ಫ್ರಮ್‌ ಜುಗಾಡ್‌ ಟು ಸಿಸ್ಟಮ್ಯಾಟಿಕ್‌ ಇನ್ನೋವೇಶನ್”‌ ಎಂಬ ಇವರ ಪುಸ್ತಕ ವ್ಯಾಪಕ ಮನ್ನಣೆ ಗಳಿಸಿದೆ. 2025ರಲ್ಲಿ ಐಐಟಿ-ಕಾನ್ಪುರ ಇವರಿಗೆ ತನ್ನ ಅತ್ಯುನ್ನತ ಗೌರವವಾದ ‘ಡಿಸ್ಟಿಂಗ್ವಿಶ್ಡ್ ಅಲುಮ್ನಿ ಅವಾರ್ಡ್’ನ್ನು ನೀಡಿ ಗೌರವಿಸಿದೆ.

ಈ ನೇಮಕಾತಿಯ ಕುರಿತು ಹರ್ಷ ವ್ಯಕ್ತಪಡಿಸಿರುವ ಅಶೋಕ ವಿಶ್ವವಿದ್ಯಾಲಯದ ಕುಲಪತಿ ರುದ್ರಾಂಗ್ಶು ಮುಖರ್ಜಿ, “ಪ್ರೊ. ಕೃಷ್ಣನ್ ಅವರ ಅಪಾರ ಪಾಂಡಿತ್ಯ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಅನುಭವ ಅಶೋಕ ವಿವಿಯನ್ನು ಮುನ್ನಡೆಸಲು ಅತ್ಯಂತ ಸೂಕ್ತವಾಗಿದೆ. ಅವರನ್ನು ವಿವಿಯ ಕುಟುಂಬಕ್ಕೆ ಸ್ವಾಗತಿಸುತ್ತೇವೆ. ಇದೇ ವೇಳೆ, ವಿವಿಯ ಶೈಕ್ಷಣಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ ನಿರ್ಗಮಿತ ಉಪಕುಲಪತಿ ಪ್ರೊ. ಸೋಮಕ್ ರಾಯ್‌ಚೌಧರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ,” ಎಂದರು.

ಅಶೋಕ ವಿಶ್ವವಿದ್ಯಾಲಯದ ಸ್ಥಾಪಕ ಮತ್ತು ಟ್ರಸ್ಟಿ ಪ್ರಮಥ್ ರಾಜ್ ಸಿನ್ಹಾ ಮಾತನಾಡಿ, “ಪ್ರೊ. ರಿಷಿಕೇಶ ಅವರು ಭಾರತದ ಅತ್ಯಂತ ಗೌರವಾನ್ವಿತ ಶೈಕ್ಷಣಿಕ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರ ದೂರದೃಷ್ಟಿ ಮತ್ತು ನಾಯಕತ್ವವು ಅಶೋಕ ವಿಶ್ವವಿದ್ಯಾಲಯವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ನೇಮಕದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೊ. ರಿಷಿಕೇಶ ಟಿ. ಕೃಷ್ಣನ್, “ಹೊಸ ಪೀಳಿಗೆಯ ಸಂಶೋಧನಾ-ಆಧಾರಿತ ಸಂಸ್ಥೆಯಾಗಿ ಅಶೋಕ ವಿಶ್ವವಿದ್ಯಾಲಯವು ಅತ್ಯುನ್ನತ ಮಾನದಂಡಗಳನ್ನು ಹೊಂದಿದೆ. ಇಂತಹ ಪ್ರತಿಷ್ಠಿತ ವಿವಿಯನ್ನು ಮುನ್ನಡೆಸುವುದು ನನಗೆ ಸಿಕ್ಕ ದೊಡ್ಡ ಗೌರವ. ವಿಶ್ವವಿದ್ಯಾಲಯದ ನಿರಂತರ ಬೆಳವಣಿಗೆಗಾಗಿ ಬೋಧಕರು, ವಿದ್ಯಾರ್ಥಿಗಳು ಮತ್ತು ಎಲ್ಲಾ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ,” ಎಂದು ಹರ್ಷ ವ್ಯಕ್ತಪಡಿಸಿದರು.

ಇನ್ನು ನಿರ್ಗಮಿತ ಉಪಕುಲಪತಿ ಪ್ರೊ. ಸೋಮಕ್ ರಾಯ್‌ಚೌಧರಿ ಅವರ ಅವಧಿಯಲ್ಲಿ ಅಶೋಕ ವಿಶ್ವವಿದ್ಯಾಲಯವು ಭಾರಿ ಬೆಳವಣಿಗೆ ಕಂಡಿತ್ತು. ಅವರ ನಾಯಕತ್ವದಲ್ಲಿ ಮ್ಯಾನೇಜ್ಮೆಂಟ್, ಬಯೋಸೈನ್ಸ್, ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಸೇರಿದಂತೆ ಏಳು ಹೊಸ ವಿಭಾಗಗಳನ್ನು ಆರಂಭಿಸಲಾಗಿತ್ತು. ಜೊತೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಖಭೌತಶಾಸ್ತ್ರಜ್ಞರಾಗಿರುವ ಪ್ರೊ. ರಾಯ್‌ಚೌಧರಿ ಅವರು ಮುಂದೆಯೂ ಅಶೋಕ ವಿವಿಯಲ್ಲಿ ವಿಜ್ಞಾನಿ ಮತ್ತು ಪ್ರಾಧ್ಯಾಪಕರಾಗಿ ಮುಂದುವರೆಯಲಿದ್ದಾರೆ.

ದೆಹಲಿ-ಎನ್‌ಸಿಆರ್‌ನಲ್ಲಿ 2014ರಲ್ಲಿ ಸ್ಥಾಪನೆಯಾದ ಅಶೋಕ ವಿಶ್ವವಿದ್ಯಾಲಯವು ನೈಸರ್ಗಿಕ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳಲ್ಲಿ ವಿಶ್ವದರ್ಜೆಯ ಶಿಕ್ಷಣ ನೀಡುವ ಪ್ರಧಾನ ಸಂಸ್ಥೆಯಾಗಿದೆ. ಪ್ರಸ್ತುತ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಶೇ. 57ರಷ್ಟು ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಶೇ. 47ರಷ್ಟು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ.

Share. Facebook Twitter LinkedIn WhatsApp Email

Related Posts

ಬೆಂಗಳೂರಿನಲ್ಲಿ ಕೂತರೆ ಸಾಗರದ ಜನರ ಕಷ್ಟ ತಿಳಿಯುವುದೇಗೆ?: ಶಾಸಕರ ವಿರುದ್ಧ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದೇವೇಂದ್ರಪ್ಪ ವಾಗ್ದಾಳಿ

3 Mins Read

BREAKING : ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

1 Min Read

ಸಾರ್ವಜನಿಕರೇ ಗಮನಿಸಿ : ಸೈಬರ್ ವಂಚನೆಯಲ್ಲಿ ಹಣ ಕಳೆದುಕೊಂಡಿದ್ದೀರಾ? ಮನೆಯಿಂದಲೇ ಹಣ ವಾಪಸ್ ಪಡೆಯಲು ಈ ಕೆಲಸ ಮಾಡಿ!

2 Mins Read
Recent News

BREAKING : `NEET UG’ ಮರುಪರೀಕ್ಷೆ : ವೈದ್ಯಕೀಯ ಕಾಲೇಜುಗಳಿಗೆ `NMC’ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ!

ಬೆಂಗಳೂರಿನಲ್ಲಿ ಕೂತರೆ ಸಾಗರದ ಜನರ ಕಷ್ಟ ತಿಳಿಯುವುದೇಗೆ?: ಶಾಸಕರ ವಿರುದ್ಧ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದೇವೇಂದ್ರಪ್ಪ ವಾಗ್ದಾಳಿ

BREAKING : ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

ಸಾರ್ವಜನಿಕರೇ ಗಮನಿಸಿ : ಸೈಬರ್ ವಂಚನೆಯಲ್ಲಿ ಹಣ ಕಳೆದುಕೊಂಡಿದ್ದೀರಾ? ಮನೆಯಿಂದಲೇ ಹಣ ವಾಪಸ್ ಪಡೆಯಲು ಈ ಕೆಲಸ ಮಾಡಿ!

State News
KARNATAKA

ಬೆಂಗಳೂರಿನಲ್ಲಿ ಕೂತರೆ ಸಾಗರದ ಜನರ ಕಷ್ಟ ತಿಳಿಯುವುದೇಗೆ?: ಶಾಸಕರ ವಿರುದ್ಧ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದೇವೇಂದ್ರಪ್ಪ ವಾಗ್ದಾಳಿ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ಶಿವಮೊಗ್ಗ: ಸಾಗರ ತಾಲೂಕಿನಲ್ಲಿರುವ ಮಳೆ ಮಾಪನ ಕೇಂದ್ರಗಳು ದುರಸ್ತಿಯಿಲ್ಲದೆ ಸಂಪೂರ್ಣ ಹಾಳಾಗಿದ್ದು, ಇದರಿಂದ ರೈತರಿಗೆ ಬೆಳೆ ವಿಮೆ ಸಿಗದೆ ಭಾರಿ…

BREAKING : ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

ಸಾರ್ವಜನಿಕರೇ ಗಮನಿಸಿ : ಸೈಬರ್ ವಂಚನೆಯಲ್ಲಿ ಹಣ ಕಳೆದುಕೊಂಡಿದ್ದೀರಾ? ಮನೆಯಿಂದಲೇ ಹಣ ವಾಪಸ್ ಪಡೆಯಲು ಈ ಕೆಲಸ ಮಾಡಿ!

SHOCKING : ಬೆಂಗಳೂರಲ್ಲಿ ಮೊಬೈಲ್ ಕಸಿದು ಓಡುತ್ತಿದ್ದ ವೇಳೆ ಹೃದಯಾಘಾತದಿಂದ `ಕಳ್ಳ’ ಸ್ಥಳದಲ್ಲೇ ಸಾವು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.