ಬೆಳಗಾವಿ : ಬೆಳಗಾವಿಯಲ್ಲಿ 2 ಕೋಟಿ ವಿಮೆಗಾಗಿ ಪತ್ನಿಯಿಂದ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಾಜಿ ಸೈನಿಕನ ಕೊಲೆಯ ರಹಸ್ಯ ಬಯಲಾಗಿದೆ ಪತ್ನಿಯ ಪ್ರಿಯಕರನಿಂದ ಸ್ಪೋಟಕ ಹೇಳಿಕೆ ಒಂದು ಬಿಡುಗಡೆ ಆಗಿದೆ. ಕೊಲೆ ರಹಸ್ಯವನ್ನು ಮಾಜಿ ಸೈನಿಕನ ಪತ್ನಿಯ ಪ್ರಿಯಕರ ಬಿಚ್ಚಿಟ್ಟಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ಪ್ರಿಯಕರ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಮಾಜಿ ಸೈನಿಕನ ಪತ್ನಿಯ ಪ್ರಿಯಕರ ಕುಂಡಲಿಪುಂಡಲೀಕ ಗೋಡಗೇರಿಯಲ್ಲಿ ನಾನು ಎಗ್ ರೈಸ್ ಅಂಗಡಿ ಮಾಡಿಕೊಂಡಿದ್ದೆ. ಸುಮಾ ಗಂಡ ಮಾಜಿ ಸೈನಿಕ ಸಂದೀಪ್ ನಿತ್ಯ ಅಂಗಡಿಗೆ ಬರುತ್ತಿದ್ದರು. ಸಂದೀಪ್ ಕೂಡ ಟಿ ಅಂಗಡಿ ಓಪನ್ ಮಾಡಿದ್ದರು. ಸುಮಾ ಮನೆಯಲ್ಲಿ ಬಾಕ್ಸ್ ಗಟ್ಟಲೆ ಮದ್ಯ ಇಟ್ಟಿದ್ದಳು. ಮಧ್ಯಕ್ಕೆ ನಿದ್ದೆ ಮಾತ್ರೆ ಹಾಕಿ ನಿತ್ಯ ಗಂಡನಿಗೆ ಕುಡಿಸುತ್ತಿದ್ದಳು. ಈ ಬಗ್ಗೆ ಕೇಳಿದ್ರೆ ಗಂಡ ಸಾಯಲಿ ಅಂತ ಸುಮಾ ಹೇಳುತಿದ್ದಳು.
ಸಂದೀಪ್ಗೆ ಅಪಘಾತವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಸುಮಾ ಹುಳುವಿಗೆ ಹೊಡೆಯುವ ಔಷದ ತರಿಸಿಕೊಂಡಿದ್ದಳು. ನಾನು ಔಷದ ತಂದುಕೊಟ್ಟ ಮಾರನೇ ದಿನ ಸಂದೀಪ್ ಸತ್ತಿದ್ದ. ಮರುದಿನ ಔಷದ ಜೊತೆ ಬೇರೆ ಏನೇನು ತಂದು ಕೊಟ್ಟಿದ್ದಳು. ಔಷಧಿ ಸೇರಿ ಎಲ್ಲವನ್ನು ಎಲ್ಲಿಯಾದರೂ ಬಿಸಾಕು ಅಂತ ಹೇಳಿದಳು. ನನಗೆ ಮಾಜಿ ಸೈನಿಕ ಸಂದೀಪ್ ಸಾವಿನ ಬಗ್ಗೆ ಅನುಮಾನವಿದೆ ಎಂದು ಪುಂಡಲಿಕ ವಿಡಿಯೋ ಮಾಡಿದ್ದಾನೆ.
ಗಂಡನ ಹೆಸರಿನಲ್ಲಿ ಎರಡು ಕೋಟಿ ಇನ್ಸೂರೆನ್ಸ್ ಮಾಡಿಸಿದ್ದೇನೆ ಗಂಡ ಸತ್ತರೆ ಎರಡು ಕೋಟಿ ಹಣ ಬರುತ್ತೆ ಅಂತ ಸುಮಾ ಹೇಳಿದಳು. ನಿನ್ನ ಎರಡು ಮಕ್ಕಳು ಹಾಗೂ ನನ್ನ ಎರಡು ಮಕ್ಕಳು ಸೇರಿ ಊರು ಬಿಡೋಣ. ಇಬ್ಬರು ಮಕ್ಕಳ ಜೊತೆಗೆ ಬೆಳಗಾವಿಗೆ ಹೋಗೋಣ ಅಂತ ಹೇಳಿದಳು. ನಾನೇನಾದರೂ ಸುಳ್ಳು ಹೇಳಿದರು ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಸಂದೀಪ ಮೃತ ದೇಹದ ಮರು ಮರಣೋತ್ತರ ಪರೀಕ್ಷೆ ಆಗಬೇಕು. ಸತ್ಯ ಹೊರಗಡೆ ಬರಬೇಕು ಸಂದೀಪ್ ಪತ್ನಿ ಸುಮಾಗೆ ವಿಮೆ ಹಣ ಹೋಗಬಾರದು.
ಈ ಸಂದರ್ಭದಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಸುಮಾ ಮತ್ತು ಪುಂಡಲಿಕ ನಡುವೆ ವೈ ಮನಸು ಉಂಟಾಗಿದೆ. ಕೊಲೆ ವಿಷಯ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದು ಪ್ರಿಯಕರ ಪುಂಡಲಿಕ ಸುಮಾಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಮೂರು ಬಾರಿ ಪುಂಡಲೀಕ್ ಮತ್ತು ಸುಮಾ ನಡುವೆ ಹಣದ ವಿಚಾರವಾಗಿ ಗಲಾಟೆ ಆಗಿದೆ. ಸ್ನೇಹಿತರ ಬಳಿ ಸುಮಾ ಬಗ್ಗೆ ಪುಂಡಲೀಕ ಹೇಳಿಕೊಂಡಿದ್ದ. ಈ ವೇಳೆ ಪೊಲೀಸರ ಮುಂದೆ ಸತ್ಯ ಹೇಳುವಂತೆ ಸ್ನೇಹಿತರು ಸಲಹೆ ನೀಡಿದರು.
ಅವರ ಸಲಹೆಂತೆ ಪೊಲೀಸರನ್ನು ಪುಂಡಲೀಕ ಭೇಟಿಯಾಗಿದ್ದ ಮಾಡಿ ಸೈನಿಕರ ಸಾವಿನ ಬಗ್ಗೆ ಮತ್ತು ಪ್ರಿಯಾ ನಡೆಯ ಬಗ್ಗೆ ಆತ ಹೇಳಿಕೆ ನೀಡಿದ್ದಾನೆ. ಪೊಲೀಸರ ಬಳಿ ಎಲ್ಲವನ್ನು ಕುಂಡಲಿಕ ವಿವರಿಸಿದ್ದಾನೆ. ಬಳಿಕ ಯಮಕನಮರಡಿ ಪೊಲೀಸರು ತನಿಖೆ ಮುಂದುವರಿಸಿದಾಗ ವಿಚಾರಣೆ ವೇಳೆ ಕೊಲೆ ಮಾಡಿದ್ದಾಗಿ ಸುಮಾ ತಪ್ಪು ಒಪ್ಪಿಕೊಂಡಿದ್ದಾಳೆ ಪುಂಡಲೀಕ ಜೊತೆ ಸೇರಿ ಪತಿ ಹತ್ಯೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ . ಸದ್ಯ ಪೊಲೀಸರವಸೆದಲ್ಲಿ ಪ್ರಿಯಾ ಮತ್ತು ಪ್ರಿಯಕರ ಕುಂಡಲಿ ಇದ್ದಾರೆ.








