ಶಿವಮೊಗ್ಗ : ಮಹಿಳೆಗೆ ಬೆದರಿಸಲು ಬುರ್ಖಾ ಧರಿಸಿ ಬಂದಿದ್ದ ನಾಲ್ವರಿಗೆ ಹಿಗ್ಗಾ ಮುಗ್ಗಾ ಥಳಿಸಲಾಗಿದೆ. ಶಿವಮೊಗ್ಗದ ಕೆಆರ್ ಪುರಂ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ. ಮೂವರು ಬುರ್ಖಾದಾರಿಗಳು ಪೊಲೀಸ್ ವಶಕ್ಕೆ ಮತ್ತೊರವ ಪರಾರಿಯಾಗಿದ್ದಾನೆ ಮಹಿಳೆಯನ್ನು ಹೆದರಿಸಲು ನಾಲ್ವರು ಬುರ್ಖಾದಾರಿಗಳು ಬಂದಿದ್ದರು. ತನ್ನ ಪತ್ನಿಗೆ ಬೆದರಿಕೆ ಹಾಕಲು ವಿಚಾರಣಾದೀನ ಕೈದಿ ನಾಲ್ವರನ್ನು ಕಳುಹಿಸಿದ್ದ ಎನ್ನಲಾಗಿದೆ.
ಬೆದರಿಸಲು ಬಂದಿದ್ದ ನಾಲ್ವರು ಬುರ್ಖಾಧಾರಿಗಳಿಗೆ ಥಳಿಸಿ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೊಮ್ಮನಕಟ್ಟೆಯ ಅಸ್ಲಾಂ, ಮಹೇಶ್ ಮತ್ತು ದರ್ಶನ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ಮುನ್ನ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಶಿವಮೊಗ್ಗ ಜೈಲಲ್ಲಿ ಇರುವ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿ ತನ್ನ ಪತ್ನಿಗೆ ಬೆದರಿಕೆ ಹಾಕಲು ಕಳುಹಿಸಿದ್ದಾನೆ. ಶಿವಮೊಗ್ಗ ಕಾರಾಗೃಹದಲ್ಲಿರುವ ನನ್ನನ್ನು ನೋಡಲು ಬರುತ್ತಿಲ್ಲ, ಖರ್ಚಿಗೆ ಹಣ ನೀಡುತ್ತಿಲ್ಲ ಎಂದು ವಿಚಾರಣಾಧೀನ ಕೈದಿ ನೊಂದಿದ್ದಾನೆ. ಹಾಗಾಗಿ ಪತ್ನಿಗೆ ಹೆದರಿಸುವಂತೆ ಜೈಲಿನಲ್ಲಿ ಸಹಚರಿಗೆ ಸೂಚಿಸಿರುವ ಆರೋಪ ಕೇಳಿಬಂದಿದೆ. ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.








