Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿರುದ್ಯೋಗಿಗಳೇ ಎಚ್ಚರ : ಮನೆಯಿಂದಲೇ ಕೆಲಸ ಕೊಡುತ್ತೇವೆಂದು ₹10 ಕೋಟಿ ದೋಚಿದ ಖತರ್ನಾಕ್ ದಂಪತಿ.!

BREAKING : ಬೆಂಗಳೂರಿನ ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್ | Bengaluru Traffic

​ಯುವ ಭಾರತೀಯರಲ್ಲಿ ಹೆಚ್ಚುತ್ತಿದೆ ಸದ್ದಿಲ್ಲದ ಆಪತ್ತು: ದೇಶದ ಶೇ. 50 ರಷ್ಟು ಯುವಕರಲ್ಲಿ ‘ಫ್ಯಾಟಿ ಲಿವರ್’ ಸಮಸ್ಯೆ: ಅಧ್ಯಯನದಿಂದ ಆಘಾತಕಾರಿ ಸತ್ಯ ಬಹಿರಂಗ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನ ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್ | Bengaluru Traffic
KARNATAKA

BREAKING : ಬೆಂಗಳೂರಿನ ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್ | Bengaluru Traffic

By kannadanewsnow57

ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ಇಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಿದ್ದಾರೆ.

ಕರ್ನಾಟಕ ದಲಿತ ಸಂಘಟನಾ ಸಮಿತಿ ವತಿಯಿಂದ ಇಂದು (11.06.2026) ಬೆಳಗ್ಗೆ 08:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ಹೀಗಾಗಿ ವಾಹನ ಸವಾರರು ಕೆಳಕಂಡ ಸಂಚಾರ ಬದಲಾವಣೆಗಳನ್ನು ಗಮನಿಸಬೇಕಾಗಿ ಕೋರಲಾಗಿದೆ.

ಪ್ರಮುಖ ಸಂಚಾರ ಬದಲಾವಣೆಗಳು ಮತ್ತು ಪರ್ಯಾಯ ಮಾರ್ಗಗಳು:

ಮಹಾರಾಣಿ ಅಂಡರ್ ಪಾಸ್ ರಸ್ತೆ ಬಳಕೆ ಕಡ್ಡಾಯ: ಕೆ.ಜಿ. ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದಿಂದ ಬಲ ತಿರುವು ಪಡೆದು ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಪ್ಯಾಲೇಸ್ ಕ್ರಾಸ್ ರಸ್ತೆಯ ಮಹಾರಾಣಿ ಅಂಡರ್ ಪಾಸ್ ರಸ್ತೆಯನ್ನು ಬಳಸಬೇಕಾಗುತ್ತದೆ.

ಸಂಚಾರ ನಿಷೇಧ: ಫ್ರೀಡಂ ಪಾರ್ಕ್ ಜಂಕ್ಷನ್‌ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಈ ರಸ್ತೆಯಲ್ಲಿ ಸದ್ಯಕ್ಕೆ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ಹಳೇ ಜೆ.ಡಿ.ಎಸ್ ಕಚೇರಿ ರಸ್ತೆ ಬಳಸಿ: ಖೋದೇ ಜಂಕ್ಷನ್ ಕಡೆಯಿಂದ ಕೆ.ಆರ್. ಸರ್ಕಲ್ ಕಡೆಗೆ ಹೋಗುವ ಫ್ಲೈಓವರ್ ರಸ್ತೆಯಲ್ಲಿ, ರೈಲ್ವೇ ನಿಲ್ದಾಣದಿಂದ ಪ್ರತಿಭಟನಾಕಾರರು ಕಾಲ್ನಡಿಗೆಯಲ್ಲಿ ಬರುವುದರಿಂದ ವಾಹನ ದಟ್ಟಣೆ ಉಂಟಾಗಬಹುದು. ಇದನ್ನು ತಡೆಗಟ್ಟಲು ಸವಾರರು ಹಳೇ ಜೆ.ಡಿ.ಎಸ್ ಕಚೇರಿ ರಸ್ತೆಯನ್ನು ಬಳಸಬಹುದಾಗಿದೆ.

ದ್ವಿಮುಖ ಸಂಚಾರಕ್ಕೆ ಅವಕಾಶ: ಸುಬ್ಬಣ್ಣ ಜಂಕ್ಷನ್‌ನಿಂದ ಎಂ.ಟಿ.ಆರ್ ಜಂಕ್ಷನ್ ಕಡೆಗೆ ಬರುವ ಏಕಮುಖ ಸಂಚಾರದ ರಸ್ತೆಯನ್ನು ತಾತ್ಕಾಲಿಕವಾಗಿ ದ್ವಿಮುಖ (Two-way) ಸಂಚಾರ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಗಾಂಧಿನಗರ ಕಡೆಗೆ ಬರುವ ವಾಹನ ಸವಾರರು ಈ ರಸ್ತೆಯನ್ನು ಬಳಸಬಹುದು.

ಪಾರ್ಕಿಂಗ್ ನಿಷೇಧಿತ ರಸ್ತೆಗಳು:

ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಕೆಳಕಂಡ ರಸ್ತೆಗಳಲ್ಲಿ ಯಾವುದೇ ರೀತಿಯ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿರುವುದಿಲ್ಲ:

ಖೋದೇ ಜಂಕ್ಷನ್‌ನಿಂದ ಮಹಾರಾಣಿ ಜಂಕ್ಷನ್‌ವರೆಗೆ

ವೈ. ರಾಮಚಂದ್ರ ರಸ್ತೆ

ಕಾಳಿದಾಸ ರಸ್ತೆ

ಪ್ಯಾಲೇಸ್ ರಸ್ತೆ

ಕೆ.ಜಿ. ರಸ್ತೆ

ಗಮನಿಸಿ: ಸಾರ್ವಜನಿಕರು ಹಾಗೂ ವಾಹನ ಸವಾರರು ಈ ಸಂಚಾರ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕಾಗಿ ಮತ್ತು ಪೊಲೀಸರೊಂದಿಗೆ ಸಹಕರಿಸಬೇಕಾಗಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ವಿನಂತಿಸಿದೆ.

"ಸಂಚಾರ ಸಲಹೆ"/"Traffic advisory" pic.twitter.com/KytxNgvKQR

— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 10, 2026

BREAKING : Attention to Bangalore motorists : Traffic closed on these roads today
Share. Facebook Twitter LinkedIn WhatsApp Email

Related Posts

ನಿರುದ್ಯೋಗಿಗಳೇ ಎಚ್ಚರ : ಮನೆಯಿಂದಲೇ ಕೆಲಸ ಕೊಡುತ್ತೇವೆಂದು ₹10 ಕೋಟಿ ದೋಚಿದ ಖತರ್ನಾಕ್ ದಂಪತಿ.!

2 Mins Read

BREAKING : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ರೌಡಿಶೀಟರ್ ಕಾಲಿಗೆ ಪೊಲೀಸ್ ಫೈರಿಂಗ್.!

1 Min Read

ALERT : ಸ್ನೇಹಿತರಿಂದ ಸಾಲ ಪಡೆಯುವವರೇ ಎಚ್ಚರ : ₹20,000 ಮೀರಿದರೆ `IT’ ನೋಟಿಸ್ ಗ್ಯಾರಂಟಿ.!

2 Mins Read
Recent News

ನಿರುದ್ಯೋಗಿಗಳೇ ಎಚ್ಚರ : ಮನೆಯಿಂದಲೇ ಕೆಲಸ ಕೊಡುತ್ತೇವೆಂದು ₹10 ಕೋಟಿ ದೋಚಿದ ಖತರ್ನಾಕ್ ದಂಪತಿ.!

BREAKING : ಬೆಂಗಳೂರಿನ ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್ | Bengaluru Traffic

​ಯುವ ಭಾರತೀಯರಲ್ಲಿ ಹೆಚ್ಚುತ್ತಿದೆ ಸದ್ದಿಲ್ಲದ ಆಪತ್ತು: ದೇಶದ ಶೇ. 50 ರಷ್ಟು ಯುವಕರಲ್ಲಿ ‘ಫ್ಯಾಟಿ ಲಿವರ್’ ಸಮಸ್ಯೆ: ಅಧ್ಯಯನದಿಂದ ಆಘಾತಕಾರಿ ಸತ್ಯ ಬಹಿರಂಗ

BREAKING: ​ಹಸಿರು ಇಂಧನಕ್ಕೆ ಭಾರಿ ಉತ್ತೇಜನ: ಶೇ. 22 ರಿಂದ 30 ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಗೊಳಿಸಿದ ಕೇಂದ್ರ ಸರ್ಕಾರ!

State News
KARNATAKA

ನಿರುದ್ಯೋಗಿಗಳೇ ಎಚ್ಚರ : ಮನೆಯಿಂದಲೇ ಕೆಲಸ ಕೊಡುತ್ತೇವೆಂದು ₹10 ಕೋಟಿ ದೋಚಿದ ಖತರ್ನಾಕ್ ದಂಪತಿ.!

By kannadanewsnow57 KARNATAKA 2 Mins Read

ಹಾವೇರಿ: ಸ್ವಯಂ ಉದ್ಯೋಗ ಮತ್ತು ಮನೆಯಿಂದಲೇ ಪ್ಯಾಕಿಂಗ್ ಕೆಲಸ ನೀಡುವುದಾಗಿ ನಂಬಿಸಿ ನೂರಾರು ಮಹಿಳೆಯರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ದಂಪತಿಯೊಂದು…

BREAKING : ಬೆಂಗಳೂರಿನ ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್ | Bengaluru Traffic

BREAKING : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ರೌಡಿಶೀಟರ್ ಕಾಲಿಗೆ ಪೊಲೀಸ್ ಫೈರಿಂಗ್.!

ALERT : ಸ್ನೇಹಿತರಿಂದ ಸಾಲ ಪಡೆಯುವವರೇ ಎಚ್ಚರ : ₹20,000 ಮೀರಿದರೆ `IT’ ನೋಟಿಸ್ ಗ್ಯಾರಂಟಿ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.