ಕಲಬುರ್ಗಿ : ಕಲ್ಬುರ್ಗಿ ಜನತೆಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕಲ್ಬುರ್ಗಿ ಮತ್ತು ಬೆಂಗಳೂರು ನಡುವೆ ವಿಮಾನ ಸಂಚಾರ ಪುನಾರಂಭವಾಗಿದೆ. ಇಂದಿನಿಂದ ಸ್ಟಾರ್ ಏರ್ ವಿಮಾನ ಸಂಚರಿಸಲಿದೆ. ಶಾಸಕ ಎಂ.ವೈ ಪಾಟೀಲ್ ಹಾಗು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಇಂದು ಚಾಲನೆ ನೀಡಿದರು.
ಕೆಕೆಆರ್‌ಡಿಬಿ ಇಂದ ಆರ್ಥಿಕ ಸಹಾಯ ಹಿನ್ನೆಲೆ ಇಂದಿನಿಂದ ಸೇವೆ ಪುನರಂಭವಾಯಿತು ಅಂದಾಜು 28 ಕೋಟಿ ರೂಪಾಯಿ ಅನುದಾನ ನೀಡಿರುವ ಕೆಕೆಆರ್‌ಡಿಬಿ ಪ್ರತಿದಿನ ಬೆಳಿಗ್ಗೆ 7:30ಕ್ಕೆ ಕಲ್ಬುರ್ಗಿಗೆ ಸ್ಟಾರ್ ಏರ್ ವಿಮಾನ ಆಗಮಿಸಲಿದೆ. ಬೆಳಿಗ್ಗೆ 8:10ಕ್ಕೆ ಕಲಬುರ್ಗಿಯಿಂದ ಬೆಂಗಳೂರಿಗೆ ಈ ಒಂದು ಫ್ಲೈಟ್ ತೆರಳಲಿದೆ.








