ಕಲಬುರ್ಗಿ : ಕಲ್ಬುರ್ಗಿಯ ಪ್ರಾಣಿ ಸಂಗ್ರಹಾಲಯದಲ್ಲಿ ಅಪರೂಪದ ಘಟನೆ ನಡೆದಿದ್ದು, ಪ್ರಾಣಿ ಸಂಗ್ರಹಾಲಯದಿಂದಲೇ ಗೋಡೆಹಾರಿ ಜಿಂಕೆಗಳು ಎಸ್ಕೇಪ್ ಆಗಿವೆ. ಕಲ್ಬುರ್ಗಿ ನಗರದ ಪ್ರಾಣಿ ಸಂಗ್ರಹಾಲಯದಲ್ಲಿ ಈ ಒಂದು ಘಟನೆ ನಡೆದಿದ್ದು, ಗೋಡೆ ಹಾರಿ ಮೂರು ಚುಕ್ಕೆ ಜಿಂಕೆಗಳು ಹೊರಗೆ ಹೋಗಿದ್ದು ಮೂರು ಜಿಂಕೆಗಳ ಪೈಕಿ ಒಂದು ಚುಕ್ಕೆ ಜಿಂಕೆ ಮನೆಗೆ ನುಗ್ಗಿದೆ.
ವಿಠಲ ನಗರದ ಮನೆ ಒಳಗೆ ಚುಕ್ಕೆ ಜಿಂಕೆ ನುಗ್ಗಿದೆ. ಬಿಗಿ ಭದ್ರತೆ ನಡುವೆ ಕೂಡ ಚುಕ್ಕೆ ಜಿಂಕೆಗಳು ಗೋಡೆಹಾರಿ ಎಸ್ಕೇಪ್ ಆಗಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಬಲೆ ಮೂಲಕ ಜಿಂಕೆಯನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಮತ್ತೆ ಪ್ರಾಣಿ ಸಂಗ್ರಹಾಲಯಕ್ಕೆ ತಂದು ಬಿಟ್ಟಿದ್ದು ಇನ್ನೂ ಉಳಿದ ಎರಡು ಜಿಂಕೆಗಳು ಎಲ್ಲಿವೆ ಎಂದು ಇನ್ನೂ ಮಾಹಿತಿ ತಿಳಿದು ಬಂದಿಲ್ಲ ಇನ್ನು ಎರಡು ಕೆಜಿ ಗಳಿಗಾಗಿ ಅರಣ್ಯ ಸಿಬ್ಬಂದಿಗಳು ಶೋಧಕರೆ ಮುಂದುವರೆಸಿದ್ದಾರೆ.








