Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಮಲಿಂಗಾರೆಡ್ಡಿ ನಮ್ಮ ಸ್ನೇಹಿತರು, ಎಲ್ಲಾ ಸಮಸ್ಯೆ ಕ್ಲಿಯರ್: ಅವರ ರಾಜೀನಾಮೆ ಅಂಗಿಕರಿಸುವುದಿಲ್ಲ; ಸಿಎಂ ಡಿ.ಕೆ.ಶಿವಕುಮಾರ್

ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕೃತಜ್ಞತೆ ಸಲ್ಲಿಸಿದ ವಿವಿಧ ವಿಭಾಗದ ಅರಣ್ಯ ಸಿಬ್ಬಂದಿ

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕೃತಜ್ಞತೆ ಸಲ್ಲಿಸಿದ ವಿವಿಧ ವಿಭಾಗದ ಅರಣ್ಯ ಸಿಬ್ಬಂದಿ
KARNATAKA

ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕೃತಜ್ಞತೆ ಸಲ್ಲಿಸಿದ ವಿವಿಧ ವಿಭಾಗದ ಅರಣ್ಯ ಸಿಬ್ಬಂದಿ

By ವಸಂತ ಬಿ ಈಶ್ವರಗೆರೆ

ಬೆಂಗಳೂರು : ಅರಣ್ಯ, ಪ್ರಕೃತಿ, ಪರಿಸರ ಉಳಿಯದಿದ್ದರೆ ಮಾನವ ಕುಲವೇ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಈ ಜವಾಬ್ದಾರಿಯನ್ನು ಶುದ್ಧ ಅಂತಃಕರಣದಿಂದ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಅರಣ್ಯ ಸಚಿವರಾಗಿದ್ದ ತಮಗೆ ಕೃತಜ್ಞತೆ ಸಲ್ಲಿಸಲು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಲಯ ಅರಣ್ಯಾಧಿಕಾರಿಗಳಿಂದ ಗೌರವವಂದನೆ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ಸಮತೋಲನ ಕಾಪಾಡಲು, ವನ್ಯಜೀವಿ ಸಂರಕ್ಷಣೆ, ಅರಣ್ಯ ಮತ್ತು ಜೀವವೈವಿಧ್ಯ ಸಂರಕ್ಷಣೆಯ ಹೊಣೆ ಹೊತ್ತಿರುವ ನೀವು ಎಚ್ಚರ ತಪ್ಪದಂತೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಈಗ ಅರಣ್ಯ ಖಾತೆ ಸಚಿವನಲ್ಲದಿದ್ದರೂ ನನ್ನ ಮೇಲೆ ಅಭಿಮಾನವಿಟ್ಟು ಅಭಿನಂದಿಸಲು ಆಗಮಿಸಿರುವ ತಮ್ಮೆಲ್ಲರ ಅಭಿಮಾನದಿಂದ ಹೃದಯ ತುಂಬಿಬಂದಿದೆ. ನೀವು ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ಅರಣ್ಯ, ವನ್ಯಜೀವಿ ಸಂರಕ್ಷಣೆ ಮಾಡಿದರೆ ಅದುವೇ ನೀವು ನನಗೆ ತೋರುವ ಅಭಿಮಾನ ಎಂದು ತಿಳಿಸಿದರು.

ಇರುವುದೊಂದೇ ಭೂಮಿ, ಇದನ್ನು ಜತನವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಂದು ಅರಣ್ಯ, ಹಸಿರುಹೊದಿಕೆ ಉಳಿದಿದೆ ಎಂದರೆ ಅದಕ್ಕೆ ಗಸ್ತು ನಡೆಸುವ, ವನ್ಯಜೀವಿ ಹಿಮ್ಮೆಟ್ಟಿಸುವ ಮುಂಚೂಣಿ ಸಿಬ್ಬಂದಿ ಮತ್ತು ಅಧಿಕಾರಿಗಳ ಶ್ರಮವೇ ಕಾರಣ ಎಂದರು.

ನೀವೆಲ್ಲರೂ ನಿಮ್ಮ ನಿಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸರ್ಕಾರಕ್ಕೆ ಮತ್ತು ನನಗೆ ಉತ್ತಮ ಹೆಸರು ತಂದಿದ್ದೀರಿ. ನೀವು ಮುಂದೆಯೂ ನಿಮ್ಮ ಜವಾಬ್ದಾರಿಯನ್ನು ದಕ್ಷತೆ, ಪ್ರಾಮಾಣಿಕತೆಯಿಂದ ಮಾಡಿ. ನಿಮಗೆ ಆತ್ಮತೃಪ್ತಿ ಲಭಿಸುತ್ತದೆ ಎಂದರು.

ಅರಣ್ಯ, ವನ್ಯಜೀವಿ ಸಂರಕ್ಷಣೆಯ ನಿಟ್ಟಿನಲ್ಲಿ ನಿಮ್ಮ ಕರ್ತವ್ಯಕ್ಕೆ ಯಾವುದೇ ತೊಡಕು ಉಂಟಾದರೂ ಸರ್ಕಾರ ನಿಮ್ಮ ಜೊತೆ ನಿಲ್ಲುತ್ತದೆ. ಅರಣ್ಯ ಇಲಾಖೆ ಮಾಜಿ ಸಚಿವನಾಗಿ ನಾನೂ ಕೂಡ ಸರ್ಕಾರದ ಜೊತೆ ನಿಮ್ಮ ಪರ ನಿಲ್ಲುತ್ತೇನೆ ಎಂದರು.

ಅರಣ್ಯ ಸಿಬ್ಬಂದಿ ಮಾತನಾಡಿ, ತಾವು ಹಲವು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಿಬ್ಬಂದಿಯ ಸಂಕಷ್ಟಕ್ಕೆ ಸ್ಪಂದಿಸುವ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಿಸಲು ಇಷ್ಟು ಕಾಳಜಿಯಿಂದ ಕಾರ್ಯನಿರ್ವಹಿಸಿದ ಸಚಿವರನ್ನು ನೋಡಿರಲಿಲ್ಲ. ನಿಮ್ಮ ಸ್ಪಂದನೆ, ನಿಮ್ಮ ಟಿಪ್ಪಣಿ ನಮಗೆ ಕೆಲಸ ಮಾಡಲು ಪ್ರೇರಣೆ ನೀಡುತ್ತಿತ್ತು. ನಿಮ್ಮ ಬೆಂಬಲದಿಂದಲೇ ಒತ್ತುವರಿ ತೆರವು ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು. ಕೆಲವು ವಲಯ ಅರಣ್ಯಾಧಿಕಾರಿಗಳು ಭಾವುಕರಾಗಿ ಕಣ್ಣೀರು ಸುರಿಸಿದರು.

Share. Facebook Twitter LinkedIn WhatsApp Email

Related Posts

ರಾಮಲಿಂಗಾರೆಡ್ಡಿ ನಮ್ಮ ಸ್ನೇಹಿತರು, ಎಲ್ಲಾ ಸಮಸ್ಯೆ ಕ್ಲಿಯರ್: ಅವರ ರಾಜೀನಾಮೆ ಅಂಗಿಕರಿಸುವುದಿಲ್ಲ; ಸಿಎಂ ಡಿ.ಕೆ.ಶಿವಕುಮಾರ್

2 Mins Read

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

9 Mins Read

BIG NEWS : ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕಾರ ಮಾಡಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

2 Mins Read
Recent News

ರಾಮಲಿಂಗಾರೆಡ್ಡಿ ನಮ್ಮ ಸ್ನೇಹಿತರು, ಎಲ್ಲಾ ಸಮಸ್ಯೆ ಕ್ಲಿಯರ್: ಅವರ ರಾಜೀನಾಮೆ ಅಂಗಿಕರಿಸುವುದಿಲ್ಲ; ಸಿಎಂ ಡಿ.ಕೆ.ಶಿವಕುಮಾರ್

ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕೃತಜ್ಞತೆ ಸಲ್ಲಿಸಿದ ವಿವಿಧ ವಿಭಾಗದ ಅರಣ್ಯ ಸಿಬ್ಬಂದಿ

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

BIG NEWS : ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕಾರ ಮಾಡಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

State News
KARNATAKA

ರಾಮಲಿಂಗಾರೆಡ್ಡಿ ನಮ್ಮ ಸ್ನೇಹಿತರು, ಎಲ್ಲಾ ಸಮಸ್ಯೆ ಕ್ಲಿಯರ್: ಅವರ ರಾಜೀನಾಮೆ ಅಂಗಿಕರಿಸುವುದಿಲ್ಲ; ಸಿಎಂ ಡಿ.ಕೆ.ಶಿವಕುಮಾರ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು : “ರಾಮಲಿಂಗಾರೆಡ್ಡಿ ಅವರು ನನ್ನ ಸ್ನೇಹಿತರು, ಅವರೊಂದಿಗೆ ಮಾತನಾಡಿದ್ದು, ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ. ಯಾವುದೇ ಕಾರಣಕ್ಕೂ ಅವರ ರಾಜಿನಾಮೆ…

ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕೃತಜ್ಞತೆ ಸಲ್ಲಿಸಿದ ವಿವಿಧ ವಿಭಾಗದ ಅರಣ್ಯ ಸಿಬ್ಬಂದಿ

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

BIG NEWS : ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕಾರ ಮಾಡಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.