Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

ಸೇನಾ ಕ್ಯಾಪ್ಟನ್ ಪ್ರೇಯಸಿಗೆ ಮಾಡಿದ ಪ್ರಪೋಸ್ ಪುಲ್ ವೈರಲ್; ನೆಟ್ಟಿಗರ ಕಾಮೆಂಟ್ ಸುರಿಮಳೆ

​ನಾರ್ವೆ ಚೆಸ್: ಗುಕೇಶ್ ವಿರುದ್ಧ ರೋಚಕ ಜಯ ಸಾಧಿಸಿದ ಪ್ರಜ್ಞಾನಂದ; ಪ್ರಶಸ್ತಿ ರೇಸ್‌ನಲ್ಲಿ ಮುನ್ನಡೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾನು ಸಿಎಂ ಆದ್ಮೇಲೆ ರಾಮಲಿಂಗಾರೆಡ್ಡಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡ್ತೀನಿ ಅಂದಿದ್ದು ನಿಜ: ಡಿ.ಕೆ. ಶಿವಕುಮಾರ್!
KARNATAKA

ನಾನು ಸಿಎಂ ಆದ್ಮೇಲೆ ರಾಮಲಿಂಗಾರೆಡ್ಡಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡ್ತೀನಿ ಅಂದಿದ್ದು ನಿಜ: ಡಿ.ಕೆ. ಶಿವಕುಮಾರ್!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: “ನಾನು ಮುಖ್ಯಮಂತ್ರಿಯಾದ ಮೇಲೆ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಇಲಾಖೆಯ ಉಸ್ತುವಾರಿಯನ್ನು ನೀಡುತ್ತೇನೆ ಎಂದು ಮಾತು ಕೊಟ್ಟಿದ್ದು ನಿಜ” ಎಂಬುದನ್ನು ಸಿಎಂ ಡಿ.ಕೆ. ಶಿವಕುಮಾರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ನೂತನ ಸಚಿವ ಸಂಪುಟದಲ್ಲಿ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮಗೆ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಅವರ ನಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಅಧಿಕೃತ ಪ್ರತಿಕ್ರಿಯೆ ನೀಡಿದ್ದಾರೆ.

ವರಿಷ್ಠರ ತೀರ್ಮಾನಕ್ಕೆ ಬದ್ಧ, ರಾಮಲಿಂಗಾರೆಡ್ಡಿ ಜೊತೆ ಮಾತನಾಡ್ತೇನೆ:

ಈ ಕುರಿತು ವಿವರಣೆ ನೀಡಿದ ಡಿ.ಕೆ. ಶಿವಕುಮಾರ್, “ಹಿಂದೆ ಅವರಿಗೆ ಸಾರಿಗೆ ಇಲಾಖೆ ನೀಡಿದಾಗ ನಾನು ಮತ್ತು ನನ್ನ ಸಹೋದರ (ಡಿ.ಕೆ. ಸುರೇಶ್) ಹೋಗಿ ಅವರ ಮನವೊಲಿಸಿದ್ದೆವು. ನಂತರ ಕೆ. ಸುಧಾಕರ್ ಅವರ ಬಳಿ ಇದ್ದ ಮುಜರಾಯಿ ಇಲಾಖೆಯನ್ನೂ ತೆಗೆದುಕೊಟ್ಟಿದ್ದು ನಿಜ. ಆದರೆ ಈ ಬಾರಿ ಹೈಕಮಾಂಡ್ ವರಿಷ್ಠರು ತೀರ್ಮಾನ ಕೈಗೊಂಡಿದ್ದು, ಕೃಷ್ಣಬೈರೇಗೌಡ ಅವರಿಗೆ ಬೆಂಗಳೂರು ಅಭಿವೃದ್ಧಿ ಇಲಾಖೆಯನ್ನು ಹಂಚಿಕೆ ಮಾಡಿದ್ದಾರೆ” ಎಂದರು.

“ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡಿಸಲು ನಾನು ಹೈಕಮಾಂಡ್ ಬಳಿ ಪ್ರಯತ್ನ ಪಟ್ಟಿದ್ದೆ. ಆದರೆ ಈಗ ಆಗಿರುವುದು ಆಗಿದೆ. ರಾಮಲಿಂಗಾರೆಡ್ಡಿ ಅವರು ಸದ್ಯ ಬೇರೆ ಕಡೆಗೆ ಹೋಗಿದ್ದರು, ಈಗ ವಾಪಸ್ ಬರುತ್ತಿದ್ದಾರೆ. ನಾನು ಖುದ್ದಾಗಿ ಅವರ ಬಳಿ ಹೋಗಿ ಮಾತನಾಡುತ್ತೇನೆ” ಎಂದು ಸಿಎಂ ತಿಳಿಸಿದರು.

ಅವರು ಕೇಳುವುದರಲ್ಲಿ ತಪ್ಪಿಲ್ಲ:

ಪ್ರಸ್ತುತ ರಾಮಲಿಂಗಾರೆಡ್ಡಿ ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ (ಜಲಸಂಪನ್ಮೂಲ) ಇಲಾಖೆಯನ್ನು ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಸಿಎಂ, “ಜಲಸಂಪನ್ಮೂಲ ಕೂಡ ದೊಡ್ಡ ಇಲಾಖೆಯೇ. ಆದರೆ ರಾಮಲಿಂಗಾರೆಡ್ಡಿ ಅವರು ‘ನಾನು ನಗರದಲ್ಲೇ ಇರುವವನು, ಇಲ್ಲೇ ನನ್ನ ಬದುಕು ಮತ್ತು ರಾಜಕೀಯವನ್ನು ಮಾಡಿದ್ದೇನೆ, ಹಾಗಾಗಿ ಬೆಂಗಳೂರು ಉಸ್ತುವಾರಿಯನ್ನೇ ಕೊಡಿ’ ಎಂದು ಕೇಳಿದ್ದಾರೆ. ಅವರು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಏನೇ ಮಾಡಿದರೂ ಪಕ್ಷದ ವರಿಷ್ಠರನ್ನು ಬಿಟ್ಟು ಮಾಡಲು ಸಾಧ್ಯವಿಲ್ಲ, ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಸಮಜಾಯಿಷಿ ನೀಡಲಾಗುವುದು” ಎಂದು ಸ್ಪಷ್ಟಪಡಿಸಿದರು.

ಹೈಕಮಾಂಡ್ ಖಡಕ್ ಟಾಸ್ಕ್: ‘ಒಪ್ಪದಿದ್ದರೆ ರಾಜೀನಾಮೆ ಅಂಗೀಕರಿಸಿ’ ಎಂದ ರಾಹುಲ್ ಗಾಂಧಿ!

ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಂದ ರಾಮಲಿಂಗಾರೆಡ್ಡಿ ಅವರ ಅಸಮಾಧಾನದ ಸಂಪೂರ್ಣ ವಿವರಗಳನ್ನು ಆಲಿಸಿರುವ ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ ಅವರು ರಾಜ್ಯ ನಾಯಕತ್ವಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.

ರಾಮಲಿಂಗಾರೆಡ್ಡಿ ಅವರ ಮನವೊಲಿಸುವ ಜವಾಬ್ದಾರಿಯನ್ನು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿರುವ ರಾಹುಲ್ ಗಾಂಧಿ, “ಮೊದಲು ಅವರ ಮನವೊಲಿಸಲು ಪ್ರಯತ್ನಿಸಿ, ಒಂದು ವೇಳೆ ಅವರು ಒಪ್ಪದೇ ಇದ್ದರೆ ಅವರ ರಾಜೀನಾಮೆಯನ್ನು ಅಂಗೀಕರಿಸಿ” ಎಂದು ಹೈಕಮಾಂಡ್ ಪರವಾಗಿ ಒಂದು ಸಾಲಿನ ಖಡಕ್ ತೀರ್ಮಾನವನ್ನು ತಿಳಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ವರದಿ ಮಾಡಿವೆ.

ಸಚಿವ ಸ್ಥಾನಕ್ಕೆ ಕೆ.ಜೆ ಜಾರ್ಜ್ ರಾಜೀನಾಮೆ ವದಂತಿಗಳ ಬಗ್ಗೆ ಹೇಳಿದ್ದೇನು ಗೊತ್ತಾ?

BREAKING: ನಾಳೆ ಯುಜಿಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ; ಕೆಇಎ ಘೋಷಣೆ | UGCET Exam Results

Share. Facebook Twitter LinkedIn WhatsApp Email

Related Posts

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

1 Min Read

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

1 Min Read

BREAKING: ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಕಣಕ್ಕೆ ಇಳಿಸಿದ ಕಾಂಗ್ರೆಸ್

1 Min Read
Recent News

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

ಸೇನಾ ಕ್ಯಾಪ್ಟನ್ ಪ್ರೇಯಸಿಗೆ ಮಾಡಿದ ಪ್ರಪೋಸ್ ಪುಲ್ ವೈರಲ್; ನೆಟ್ಟಿಗರ ಕಾಮೆಂಟ್ ಸುರಿಮಳೆ

​ನಾರ್ವೆ ಚೆಸ್: ಗುಕೇಶ್ ವಿರುದ್ಧ ರೋಚಕ ಜಯ ಸಾಧಿಸಿದ ಪ್ರಜ್ಞಾನಂದ; ಪ್ರಶಸ್ತಿ ರೇಸ್‌ನಲ್ಲಿ ಮುನ್ನಡೆ!

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

State News
KARNATAKA

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು : ಇಂಧನ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ನೇಮಕ ಹಾಗೂ ಖಾತೆ ಹಂಚಿಕೆ ಕುರಿತು ಅಸಮಾಧಾನ ಇಲ್ಲ ಎಂದಿರುವ ಇಂಧನ…

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

BREAKING: ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಕಣಕ್ಕೆ ಇಳಿಸಿದ ಕಾಂಗ್ರೆಸ್

BREAKING: ಧಾರವಾಡ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗೆ ಪ್ರಾಧ್ಯಾಪಕನಿಂದಲೇ ಕಿರುಕುಳ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.