Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ : ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ

ಬದುಕಿಗೆ ಬೆಳಕು ತೋರಿದ ಗುರುವರೇಣ್ಯರು ರಾಘವೇಂದ್ರರು ನಂಬಿಕೆಯ ಶಕ್ತಿ

BREAKING : ಬೀದರ್ ನಲ್ಲಿ ನೇಣು ಬಿಗಿದುಕೊಂಡು, ಗ್ರಾಮ ಆಡಳಿತಾಧಿಕಾರಿ ಆತ್ಮಹತ್ಯೆಗೆ ಶರಣು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬದುಕಿಗೆ ಬೆಳಕು ತೋರಿದ ಗುರುವರೇಣ್ಯರು ರಾಘವೇಂದ್ರರು ನಂಬಿಕೆಯ ಶಕ್ತಿ
KARNATAKA

ಬದುಕಿಗೆ ಬೆಳಕು ತೋರಿದ ಗುರುವರೇಣ್ಯರು ರಾಘವೇಂದ್ರರು ನಂಬಿಕೆಯ ಶಕ್ತಿ

By ಸುರೇಶ್‌

ತಪ:ಶಕ್ತಿಯಿಂದ ಸಾಧನೆಗೈದು ಜನರ ಬದುಕು ಬದಲಿಸಿದ ಅನೇಕ ಸಾಧಕರಾದ, ಸಮರ್ಥ ರಾಮದಾಸರಿಂದ ಹಿಡಿದು ಶಂಕರಾಚಾರ್ಯರು- ರಮಣ ಮಹರ್ಷಿಗಳು, ಶ್ರೀಧರ ಸ್ವಾಮಿಗಳು, ನಾರಾಯಣ ಗುರು, ಕನಕ- ಪುರಂದರರು, ಉತ್ತರ ಭಾರತದ ಯೋಗಿನಾಥರು, ಭಕ್ತ ಕಬೀರ, ತುಕಾರಾಂ ಮಹಾರಾಜರು, ರಾಮಕೃಷ್ಣರು, ಶಿರಡಿ ಸಾಯಿಬಾಬಾ, ಶಂಕರ ದೇವ, ಇನ್ನು ಹಲವು ಸಾಧು ಸಂತರು ಭಕ್ತರ ಕಷ್ಟ ನಿವಾಣೆ ಗೆ ಸದಾ ಕರುಣೆಯಿಂದ ನಡೆದುಕೊಂಡವರು. ಇವರಂತೆ ಕಲಿಯುಗದ ಕಲ್ಪತರು “ರಾಘವೇಂದ್ರ ಸ್ವಾಮಿಗಳು” ಇವರು ಕಷ್ಟಕಾಪಣ್ಯದಿಂದ ಬಳಲುತ್ತಿರುವವರ ತೊಂದರೆಗಳನ್ನು ನಿವಾರಿಸಿ, ಪವಾಡಗಳ ಮೂಲಕ ಅವರ ಬದುಕಿಗೆ ಬೆಳಕು ತೋರಿದ ಗುರುವರೇಣ್ಯರು ರಾಘವೇಂದ್ರರು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ

ಇವರು ಮಾಡಿದ ಪವಾಡಗಳಲ್ಲಿ ಒಂದಾದ, ದಾಮೋದರ ಶೆಟ್ಟಿ ಎಂಬ ಶ್ರೀಮಂತ ವ್ಯಾಪಾರಿ ಇದ್ದನು. ಇವನು ತುಂಬಾ ಬುದ್ಧಿವಂತ ತನ್ನ ಬುದ್ಧಿಗೆವಂತಿಕೆಯಿಂದ ವ್ಯಾಪಾರವನ್ನು ಹೆಚ್ಚಿಸಿಕೊಂಡು ಆಗರ್ಭ ಶ್ರೀಮಂತನಾಗಿದ್ದನು. ಎಷ್ಟೇ ಶ್ರೀಮಂತ ನಾಗಿದ್ದರೂ ಗುರುರಾಯರಲ್ಲಿ ಭಕ್ತಿಯುಳ್ಳವನಾಗಿದ್ದು, ವ್ಯಾಪಾರಕ್ಕೆ ಹೊರಡುವ ಮುನ್ನ ರಾಯರಿಗೆ ನಮಸ್ಕರಿಸಿ ಯಾವ ತೊಂದರೆ, ಅಡೆತಡೆಗಳು ಆಗದಂತೆ ಕಾಪಾಡು ಎಂದು ಬೇಡಿಕೊಂಡೆ ಹೊರಡುತ್ತಿದ್ದ.

ಆದರೆ ಇವನ ಮನಸ್ಸಿನಲ್ಲಿ ಒಂದು ಭಯವಿತ್ತು. ತಾನು ಇಷ್ಟೆಲ್ಲಾ ಸಂಪಾದಿಸಿದ ಧನ ಕನಕ ಸಂಪತ್ತನ್ನು ಯಾರಾದರೂ ಕಳ್ಳತನ ಮಾಡಿದರೆ, ತನಗೆ ಗೊತ್ತಿಲ್ಲದಂತೆ ಅಪಹರಿಸಿದರೆ, ಗತಿ ಏನು? ಈ ತರಹ ಹೆದರಿಕೆ ಅವನನ್ನು ಬಿಟ್ಟೂ ಬಿಡದಂತೆ ಕಾಡುತ್ತಿತ್ತು. ವೃತ್ತಿಯೇ ವ್ಯಾಪಾರ ಆದುದರಿಂದ ದೂರ ದೂರ ಪ್ರದೇಶಗಳಿಗೆ ಹೋಗುತ್ತಿದ್ದ. ಹೀಗೊಮ್ಮೆ ದೂರ ಪ್ರದೇಶಕ್ಕೆ ತುಂಬಾ ಲಾಭ ತರುವ ವ್ಯಾಪಾರಕ್ಕೆ ಹೊರಡುವ ಅವಕಾಶ ಬಂದಿತು. ಅಂತಿಂಥ ವ್ಯಾಪಾರವಲ್ಲ ಇಲ್ಲಿ ತನಕ ಮಾಡಿದ ಎಲ್ಲಾ ವ್ಯಾಪಾರಗಳಿಗಿಂತಲೂ ಇದು ಹೆಚ್ಚು ಲಾಭ ಬರುವ ವ್ಯಾಪಾರವಾಗಿತ್ತು. ಇದಕ್ಕೆ ಬೇಕಾಗುವ ಹೂಡಿಕೆ ಹಣವನ್ನು ತೆಗೆದುಕೊಂಡು ಹೋಗಬೇಕಿತ್ತು. ಆಗ ಬ್ಯಾಂಕು- ಪೋಸ್ಟ್ ಆಫೀಸ್ – ಕ್ರೆಡಿಟ್ ಕಾರ್ಡು- ಎ. ಟಿ.ಎಮ್ ಇವೆಲ್ಲ ಇರಲಿಲ್ಲ. ಕೈಯಲ್ಲಿ ಹಣದ ತೈಲಿ ಹಿಡಿದುಕೊಂಡು ಹೋಗಬೇಕು. ಅಂದಿನ ಶ್ರೀಮಂತರು ದೂರ ಪ್ರಯಾಣಕ್ಕೆಲ್ಲ ಕುದುರೆ ಗಾಡಿಯಲ್ಲಿ ಹೋಗುತ್ತಿದ್ದರಾದರೂ ಕಾಡಿನ ನಡುವೆ ಹಾದು ಹೋಗಲೇಬೇಕಿತ್ತು. ಈ ಸಲದ ಪ್ರಯಾಣವಂತು ಕಳ್ಳ ಕಾಕರ ಹಾವಳಿ ಹೆಚ್ಚಾಗಿರುವ ಕಾಡಿನ ಮಧ್ಯ ಹೋಗಬೇಕಾಗಿತ್ತು. ಆ ದೊಡ್ಡ ಕಾಡಿನಲ್ಲಿ ಹಗಲು ರಾತ್ರಿ ಕೂಡಿ ಪ್ರಯಾಣ ಮಾಡಬೇಕಿತ್ತು.

ದಾಮೋದನ ಮನಸ್ಸಿನಲ್ಲಿ, ಲಾಭ ಬರುವ ಈ ವ್ಯಾಪಾರದಿಂದ ತಾನು ಮತ್ತಷ್ಟು ಶ್ರೀಮಂತನಾಗಬಹುದು ಎಂಬ ಸಂತೋಷವಾದರೆ, ಕಾಡಿನ ಮಧ್ಯ ಕಳ್ಳ ಕಾಕರು ತನ್ನ ಹಣವನ್ನು ದೋಚಲು ಬರುವ ಕಳ್ಳರು, ಹಣದ ಜೊತೆಗೆ ತನ್ನ ಪ್ರಾಣವನ್ನೇ ತೆಗೆದರೆ ತಾನು ಪಟ್ಟ ಶ್ರಮದ ಸಾರ್ಥಕತೆ ಏನು? ಒಂದು ತರ ಇಬ್ಬಂದಿ ಸಂಕಟಕ್ಕೆ ಒಳಗಾಗಿದ್ದನು. ಆದರೂ ಹೋಗಲೇ ಬೇಕಾಗಿತ್ತು. ದೊಣ್ಣೆ- ಕತ್ತಿ, ಆಹಾರ- ನೀರು ಎಲ್ಲಾ ಸಿದ್ಧತೆ ಗಳೊಂದಿಗೆ ಪ್ರಯಾಣ ಹೊರಟನು. ವ್ಯಾಪಾರದ ಖರ್ಚಿಗೆ ಸಾಕಷ್ಟು ಹಣವನ್ನು ಭದ್ರವಾಗೇ ಇಟ್ಟುಕೊಂಡಿದ್ದನು. ಪ್ರಯಾಣ ಮಾಡುತ್ತಾ ಕತ್ತಲಾಗುತ್ತಿತ್ತು. ಆಕಾಶದಲ್ಲಿ ನಕ್ಷತ್ರಗಳು ಮೂಡಿದವು. ದಟ್ಟ ಕಾಡಿನ ಸುತ್ತಲೂ “ಗೌವ್” ಎನ್ನುವ ಕತ್ತಲು ಆವರಿಸಿದೆ.‌ ಎದೆಯಲ್ಲಿ ಡವ-ಡವ. ಭಯದಿಂದಲೇ ಗಾಡಿ ಓಡಿಸುತ್ತಿದ್ದನು. ಅವನ ಭಯ ಹೆಚ್ಚಾಗುತ್ತಿತ್ತು ಆತಂಕ- ಒಂಟಿತನ ಕಾಡುತ್ತಿತ್ತು. ಆ ಸಮಯದಲ್ಲಿ ತನ್ನ ಆರಾಧ್ಯ ದೇವರಾದ ರಾಘವೇಂದ್ರ ಗುರುಗಳನ್ನು ಸ್ವಾಮಿ ಗುರು ರಾಘವೇಂದ್ರ ನಾನು ಒಬ್ಬಂಟಿ ನನ್ನನ್ನು ಕಾಪಾಡಬೇಕು ಎಂದು ಪ್ರಾರ್ಥಿಸಿ ನೀನೇ ಗತಿ ತಂದೆ ಎಂದು ಮುನ್ನಡೆಯುತ್ತಿದ್ದನು.

ಅವನು ಭಯದಂತೆ, ಎಲ್ಲಿಂದಲೋ 10 -12 ಜನ ಗಟ್ಟಿ ಮುಟ್ಟಾದ ಕಳ್ಳರು ಕೈಯಲ್ಲಿ ದೊಣ್ಣೆ- ಕತ್ತಿ ಹಿಡಿದುಕೊಂಡು ಅವನ ಕುದುರೆ ಗಾಡಿ ಎದುರಾಗಿಯೇ ಬರುತ್ತಿದ್ದರು. ವ್ಯಾಪಾರಿ ಕೈ ಕಾಲು ನಡುಗುತ್ತಿತ್ತು. ಅವನಿಗೆ ಅನ್ನಿಸಿತು ನನ್ನ ಹಣ ಹೋದರೆ ಹೋಗಲಿ, ಬದುಕಿದರೆ ಮತ್ತೆ ಗಳಿಸಬಹುದು, ಆದರೆ ಜೀವವೇ ಹೋದರೆ “ಅಯ್ಯೋ ರಾಘವೇಂದ್ರ ನೀನೇ ದಾರಿ ತೋರೋ ಗುರುವೇ” ಭಯ ದಿಂದ ಹೆಚ್ಚು ಕಡಿಮೆ ಚೀರಿದನು. ಕಳ್ಳರು ಕುದುರೆ ಗಾಡಿ ಸಮೀಪಕ್ಕೆ ಬಂದರು ಗಾಡಿ ಮುಂದೆ ಹೋಗದೆ ನಿಂತಿತು. ವ್ಯಾಪಾರಿ ಜೀವ ಬಾಯಿಗೆ ಬಂದಿತು. ಧಡೂತಿ ಕಳ್ಳರು ಏ ಮನುಷ್ಯ ನಿನ್ನಲ್ಲಿರುವ ಹಣ,ಗಾಡಿಯಲ್ಲಿರುವ ಧಾನ್ಯದ ಮೂಟೆಗಳು
ಎಲ್ಲವನ್ನು ನಮಗೆ ಕೊಡು ತುಟಿ -ಪಿಟ್ ಅಂದು ಏನಾದರೂ ಬುದ್ದಿವಂತಿಕೆ ತೋರಿಸಿದರೆ, ನಿನ್ನನ್ನು ಕಡಿದು ಕೊಚ್ಚಿ ನಾಯಿ ನರಿಗಳಿಗೆ ಹಾಕುತ್ತೇವೆ ಎಂದು ಕಳ್ಳರೆಲ್ಲ ಒಟ್ಟಾಗಿ ಅಬ್ಬರಿಸಿದರು, ಅವರನ್ನು ನೋಡಿದ- ಕೂಗಿದ ಭಯಕ್ಕೆ ಭಯದಿಂದ ಬೆವರಿದ್ದ ವ್ಯಾಪಾರಿ, ರಾಘವೇಂದ್ರ ನೀನೇ ಕಾಪಾಡು ತಂದೆ ಎಂದು ಕೂಗಿ ಎಚ್ಚರ ತಪ್ಪಿದನು.

ಕಳ್ಳರು ಗಾಡಿಯ ಮುಂದೆ ಬಂದರು. ಇನ್ನೇನು ವ್ಯಾಪಾರಿಯನ್ನು ಎಳೆದು ವ್ಯಾಪಾರಿಯ ದವಸ ಧಾನ್ಯ ಎಲ್ಲವನ್ನು ದೋಚಬೇಕಿತ್ತು, ಆದರೆ ಕಳ್ಳರು ಕುದುರೆ ಕಟ್ಟಿದ ನೊಗದಿಂದ ಗಾಡಿ ಒಳಗಿದ್ದ ವ್ಯಾಪಾರಿ ಬಳಿ ಬರಲು ಆಗಲೇ ಇಲ್ಲ. ಕಳ್ಳರು ವ್ಯಾಪಾರಿ ಸಮೀಪ ಬರಬೇಕೆಂದು ಮುಂದೆ ಹೆಜ್ಜೆ ಇಟ್ಟರು ಅಷ್ಟೇ. ಆಗ ವ್ಯಾಪಾರಿ
ಹಿಂದೆ ಕೆಂಡದುಂಡೆಗಳಂತ ಕಣ್ಣುಗಳನ್ನು ಅರಳಿಸಿ ಕಮಂಡಲ ಜಪಮಣಿ ಹಿಡಿದ ಒಬ್ಬ ಯತಿವರ್ಯರು ಕೋಪದಿಂದ ನಿಂತಿದ್ದು ಹೆದರಿಸುವಂತೆ ಕಾಣುತ್ತಿದ್ದರು. ಅವರನ್ನು ನೋಡಿ ಕಳ್ಳರಿಗೆ ಭಯವಾಯಿತು. ಆ ಪ್ರಭೆ ಕಳ್ಳರ ಕಣ್ಣುಗಳನ್ನು ಚುಚ್ಚುತ್ತಿತ್ತು. ಉರಿ ತಾಳಲಾರದೆ ಕಣ್ಣನ್ನು ಮುಚ್ಚಿಕೊಂಡರು. ಮುಂದೆ ಒಂದು ಹೆಜ್ಜೆ ಇಡಲು ಆಗಲಿಲ್ಲ. ಭಯದಿಂದ ಎಲ್ಲರೂ ಓಡಿ ಹೋದರು. ಹೆದರಿ ಅರೆ ಪ್ರಜ್ಞಾವಸ್ಥೆ ಯಲ್ಲಿದ್ದ ವ್ಯಾಪಾರಿಗೆ ಏನು ನಡೆಯುತ್ತಿದೆ ಎಂದು ಅರ್ಥವಾಗಲಿಲ್ಲ. ಕಳ್ಳರೇಕೆ ಹೆದರಿ ಓಡಿದರು, ಅವನಿಗೆ ತಿಳಿಯಲಿಲ್ಲ, ಗುರುಗಳು ಅವನ ಹಿಂದೆ ನಿಂತಿದ್ದು ಗೊತ್ತಾಗಲಿಲ್ಲ. ಎಲ್ಲ ಗುರುಗಳ ದಯೆ, ಅವರೇ ನನ್ನನ್ನು ರಕ್ಷಿಸಿದ್ದಾರೆ ಎಂದು ಮನದಲ್ಲೇ ನಮಸ್ಕರಿಸಿದ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ವ್ಯಾಪಾರವೆಲ್ಲ ಸಸೂತ್ರವಾಗಿ ನಡೆದು ಅವನು ಅಂದುಕೊಂಡು ಲಾಭಕ್ಕಿಂತ ಹೆಚ್ಚಾಗಿಯೇ ಬಂದಿತು. ಕಳ್ಳರಿಂದ ತನ್ನನ್ನು ರಕ್ಷಣೆ ಮಾಡಿದ್ದು ಗುರುಗಳು ಎಂದು ಅವನಿಗೆ ನಂಬಿಕೆ ಬಂದಿತ್ತು. ಆ ನಂಬಿಕೆ ಅವನಿಗೆ ಕೆಲವೇ ದಿನಗಳಲ್ಲಿ ಗೋಚರ ವಾಯಿತು. ಅವನು ಊರಿಗೆ ಬಂದಮೇಲೆ ತಾನು ಅಂದುಕೊಂಡಂತೆ ಗುರುಗಳ ದರ್ಶನ ಮಾಡಲು ಮಂತ್ರಾಲಯಕ್ಕೆ ಬಂದನು. ಮಾಡಬೇಕೆಂದುಕೊಂಡ ಸೇವೆ ಎಲ್ಲ ಮಾಡಿ ಕೊನೆಯಲ್ಲಿ ರಾಯರಿಗೆ ನಮಸ್ಕರಿಸಿ ಸ್ವಾಮಿ ನೀವೇ ನನ್ನನ್ನು ರಕ್ಷಿಸಿದಿರಿ. ನಾನು ಎಂದೆಂದೂ ನಿಮ್ಮ ಸೇವಕ ಎಂದು ಪ್ರಾರ್ಥಿಸಿ ಕಣ್ತುಂಬ ರಾಯರನ್ನು ನೋಡಿದಾಗ ಅವನಿಗೆ ಆಶ್ಚರ್ಯ ಕಾದಿತ್ತು ಏಕೆಂದರೆ, ಗುರುಗಳ ಕಮಂಡಲಕ್ಕೆ ಅಲ್ಲಲ್ಲೇ ಹಸಿ ಮಣ್ಣು ಮೆತ್ತಿಕೊಂಡಿತ್ತು.‌ ಹಸ್ತ ಮತ್ತು ಪಾದಗಳ ಮೇಲೆಲ್ಲಾ ಹಸಿರು ಹುಲ್ಲು, ಕೆಸರು ಅಂಟಿತ್ತು. ಇದನ್ನು ನೋಡಿದ ವ್ಯಾಪಾರಿಯ ಸ್ಮೃತಿ ಪಟಲದಲ್ಲಿ ಒಂದೊಂದೇ ಹಾದುಹೋಯಿತು.‌ ಅಂದು ರಾಯರು ತನ್ನನ್ನು ಕಾಪಾಡಿದ್ದಾರೆ ಎಂದು ಖಚಿತವಾಯಿತು. ಅವನ ನಂಬಿಕೆ ಹುಸಿಯಾಗಲಿಲ್ಲ. ಗದ್ಗತಿತನಾಗಿ ಸಾಕಷ್ಟು ಹೊತ್ತು ಕಣ್ಣೀರು ಹಾಕಿದನು.

ತೃಪ್ತಿಯಿಂದ ಊರಿಗೆ ಬಂದನು ಅವನು ಯೋಚಿಸಿದ ಇಷ್ಟೆಲ್ಲ ಸಂಪತ್ತು ಕೂಡಿಟ್ಟು ಕಾಪಾಡಿಕೊಳ್ಳುವುದೇ ಕಷ್ಟ. ಅದಕ್ಕಿಂತ ರಾಯರನ್ನೇ ನಂಬಿ ನಡೆದರೆ ಅವರೇ ನನ್ನನ್ನು ರಕ್ಷಿಸುತ್ತಾರೆ ಎಂದುಕೊಂಡಾಗ ಅವನಲ್ಲಿದ್ದ ಧನದ ವ್ಯಾಮೋಹ- ಪ್ರಾಣ ಭಯ ಹೋಯಿತು. ತನ್ನ ಅಪಾರ ಸಂಪತ್ತನ್ನು ಐದು ಭಾಗ ಮಾಡಿ ಒಂದು ಭಾಗ ಕುಟುಂಬದ ಭವಿಷ್ಯಕ್ಕೆ ಮತ್ತೊಂದು ಭಾಗ ಕುಟುಂಬದ ನಿರ್ವಹಣೆಗೆ ಮೀಸಲಿಟ್ಟ ನು. ಇನ್ನೊಂದು ಭಾಗ ತೀರ್ಥ ಯಾತ್ರೆ ಖರ್ಚಿಗೆ, ಉಳಿದ ಎರಡು ಭಾಗದಲ್ಲಿ ಒಂದನ್ನು ದಾನ- ಧರ್ಮಗಳಿಗೆ ಉಪಯೋಗಿಸಿದರೆ. ಮತ್ತೊಂದು ಭಾಗವನ್ನು ದೇವಾಲಯಗಳ ಅಭಿವೃದ್ಧಿಗೆ ವ್ಯಯ ಮಾಡಿದನು. ಈಗ ಅವನ ಪ್ರಾಣ ಭಯ ಸಂಪತ್ತಿನ ರಕ್ಷಣೆಯ ಜವಾಬ್ದಾರಿ ಎಲ್ಲವೂ ದೂರವಾಯಿತು ಮನಸ್ಸಿನ ಆತಂಕಗ ಳೆಲ್ಲ ನಿವಾರಣೆಯಾಗಿ ಗುರು ರಾಘವೇಂದ್ರರ ಅನುಯಾಯಿಯಾಗಿ ಬದುಕಿನಲ್ಲಿ ಸಾರ್ಥಕತೆ ಪಡೆದನು.

ಶ್ರೀ ರಾಘವೇಂದ್ರ! ಕರುಣಾಕರ ಸಾರ್ವಭೌಮ
ಶ್ರೀ ದಾರಪಾದ ಸರಸೀರುಹ ಮತ್ತ ಭೃಂಗ!
ಶ್ರೀ ಜ್ಞಾನಭಕ್ತಿ ಸುವಿರಕ್ತಿ ಸಮೇತ ಸೇವಾಂ
ಶ್ರೀ ರಾಘವೇಂದ್ರ ಮಮದೇಹಿ ಕರಾವಲಂಬಮ್!!

Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ : ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ

2 Mins Read

BREAKING : ಬೀದರ್ ನಲ್ಲಿ ನೇಣು ಬಿಗಿದುಕೊಂಡು, ಗ್ರಾಮ ಆಡಳಿತಾಧಿಕಾರಿ ಆತ್ಮಹತ್ಯೆಗೆ ಶರಣು!

1 Min Read

BREAKING : ಬೆಂಗಳೂರಲ್ಲಿ ಕಸ ಆಯುವ ವ್ಯಕ್ತಿಯಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ : ಆರೋಪಿ ಅರೆಸ್ಟ್!

1 Min Read
Recent News

BIG NEWS: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ : ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ

ಬದುಕಿಗೆ ಬೆಳಕು ತೋರಿದ ಗುರುವರೇಣ್ಯರು ರಾಘವೇಂದ್ರರು ನಂಬಿಕೆಯ ಶಕ್ತಿ

BREAKING : ಬೀದರ್ ನಲ್ಲಿ ನೇಣು ಬಿಗಿದುಕೊಂಡು, ಗ್ರಾಮ ಆಡಳಿತಾಧಿಕಾರಿ ಆತ್ಮಹತ್ಯೆಗೆ ಶರಣು!

BREAKING : ಬೆಂಗಳೂರಲ್ಲಿ ಕಸ ಆಯುವ ವ್ಯಕ್ತಿಯಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ : ಆರೋಪಿ ಅರೆಸ್ಟ್!

State News
KARNATAKA

BIG NEWS: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ : ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿಕೆ ಶಿವಕುಮಾರ್ ವಿದ್ಯಾರ್ಥಿ ಸಮುದಾಯಕ್ಕೆ ಮಹತ್ವದ ಉಡುಗೊರೆಯೊಂದನ್ನು ಘೋಷಿಸಿದ್ದಾರೆ. ರಾಜ್ಯದ ಶಾಲೆ…

ಬದುಕಿಗೆ ಬೆಳಕು ತೋರಿದ ಗುರುವರೇಣ್ಯರು ರಾಘವೇಂದ್ರರು ನಂಬಿಕೆಯ ಶಕ್ತಿ

BREAKING : ಬೀದರ್ ನಲ್ಲಿ ನೇಣು ಬಿಗಿದುಕೊಂಡು, ಗ್ರಾಮ ಆಡಳಿತಾಧಿಕಾರಿ ಆತ್ಮಹತ್ಯೆಗೆ ಶರಣು!

BREAKING : ಬೆಂಗಳೂರಲ್ಲಿ ಕಸ ಆಯುವ ವ್ಯಕ್ತಿಯಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ : ಆರೋಪಿ ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.