ಮಂಡ್ಯ : ನಾನು ಮೊದಲ ಬಾರಿಗೆ ಗೆದ್ದಿದ್ದೇನೆ ನನಗೆ ಸಚಿವ ಸ್ಥಾನದ ಆಸೆ ಇಲ್ಲ. ಹಿರಿಯರು ಮತ್ತು ಅರ್ಹ ಹೊಸಬರಿಗೂ ಅವಕಾಶ ಸಿಗಬೇಕು ಎಂದು ಮಂಡ್ಯದಲ್ಲಿ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಹೇಳಿಕೆ ನೀಡಿದರು.
ಅಶೋಕ್ ರೈ ಬಸವರಾಜ್ ಶಿವಗಂಗಾ ಭರತರೆಡ್ಡಿ ಅಂತಹವರಿಗೂ ಅವಕಾಶ ಸಿಗಲಿ ನನ್ನ ಕ್ಷೇತ್ರಕ್ಕೆ ಈಗಾಗಲೇ ಸಾಕಷ್ಟು ಅನುದಾನ ಸಿಕ್ಕಿದೆ ಅಭಿವೃದ್ಧಿ ಕೆಲಸ ಮಾಡಬೇಕು. ಡಿಕೆ ಶಿವಕುಮಾರ್ ಗೆ ಅಧಿಕಾರ ಸಿಕ್ಕರೆ ನನಗೆ ಸಿಕ್ಕಂತೆ. ಮಂಡ್ಯ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಗಲಿ ಎಂಬುವುದು ಬೇಡಿಕೆ ಇದೆ. ಸಚಿವರಾಗಿ ಚೆಲುವರಾಯಸ್ವಾಮಿ ಉತ್ತಮ ಕೆಲಸ ಮಾಡಿದ್ದಾರೆ. ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿಗೆ ಬೇರೆ ಕೋಟ ಇದೆ. ಆದರೆ ರಮೇಶ್ ಬಂಡಿಸಿದ್ದೇಗೌಡ ಮೂರು ಬಾರಿ ಗೆದ್ದಿದ್ದಾರೆ. ಮತ್ತೊಂದು ಸಚಿವ ಸ್ಥಾನ ಸಿಕ್ಕರೆ ಇನ್ನಷ್ಟು ಅಭಿವೃದ್ಧಿ ಆಗಲಿದೆ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿಕೆ ನೀಡಿದರು.








