ಕಲಬುರಗಿ: ಆಳಂದ ಪಟ್ಟಣದ ರಾಘವ ಚೈತನ್ಯ ಶಿವಲಿಂಗ ಮೂರ್ತಿ ಪೂಜೆಗೆ ಅಡ್ಡಿಪಡಿಸಿದ ಗುಂಡಾಗಳ ಮೇಲಿನ ಕೇಸ್ ವಾಪಸ್ಸು ಪಡೆದಿರುವುದನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಜೂನ್ 1ರಂದು ಕಲಬೂರಗಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಆಳಂದ ಪಟ್ಟಣದಲ್ಲಿ ರಾಘವ ಚೈತನ್ಯ ಶಿವಲಿಂಗ ಮೂರ್ತಿಗೆ ಪೂಜೆ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಆಗ ಕೇಂದ್ರದ ಸಚಿವರಾಗಿದ್ದ ಭಗವಂತ ಖೂಬಾ, ಆಂದೋಲಾ ಸಿದ್ದಲಿಂಗ ಸ್ವಾಮಿ ಸೇರಿ ಅದರಲ್ಲೂ ಜಿಲ್ಲಾಧಿಕಾರಿ ಕಾರಿನ ಮೇಲೆ ಕೆಲವು ಗುಂಡಾಗಳು ಕಲ್ಲೂ ತೂರಾಟ ನಡೆಸಿದ್ದರ ಹಿನ್ನೆಲೆಯಲ್ಲಿ 13 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 8 ಪ್ರಕರಣಗಳು ಸಚಿವರ, ಶಾಸಕರ ಹಾಗೂ ಇತರರ ಮೇಲೆ ಕಲ್ಲೂ ತೂರಾಟ ನಡೆಸಿದ್ದಲ್ಲದೇ ಮಾರಕಾಸ್ತ್ರದಿಂದ ಹಿಡಿದು ಭಯದ ವಾತಾವರಣ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಾಗಿದ್ದವು. 5 ಪ್ರಕರಣಗಳು ಖಾಸಗಿಯಾಗಿ ದಾಖಲಾಗಿದ್ದವು. ಆದರೆ ಸರ್ಕಾರ ಗೂಂಡಾಗಳಿಗೆ ಪ್ರಚೋದನೆ ನೀಡುವ ನಿಟ್ಟಿನಲ್ಲಿ ಅವರ ಮೇಲಿನ ಪ್ರಕರಣಗಳನ್ನು ವಾಪಸ್ಸು ಪಡೆದಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.
ಸ್ಪೀಕರ್ ಆಗಿದ್ದ ಯು ಟಿ ಖಾದರ್ ಅವರ ಶಿಪಾರಸ್ಸಿನ ಮೇರೆಗೆ ಗೂಂಡಾಗಳ ಮೇಲಿನ ಪ್ರಕರಣಗಳನ್ನು ವಾಪಸ್ಸು ಪಡೆಯಲಾಗಿದೆ. ಡಿಸಿ ಕಾರಿನ ಮೇಲೆ ಕಲ್ಲು ಹೊಡೆದವರ ಮೇಲಿನ ಕೇಸ್ ಗಳನ್ನು ವಾಪಸ್ಸು ಪಡೆದಿರುವುದು ದೇಶದಲ್ಲೇ ಪ್ರಥಮವಾಗಿದೆ. ಹೀಗಿದ್ದ ಮೇಲೂ ರಾಜ್ಯ ಸರ್ಕಾರ ಕೇಸ್ ವಾಪಸ್ಸು ಪಡೆಯುವ ಮೂಲಕ ಸಮಾಜದಲ್ಲಿ ದೊಂಬಿ, ಗಲಭೆಗಳಿಗೆ ತಮ್ಮದೇನು ತಕರಾರಿಲ್ಲ ಎಂದು ಸಂದೇಶ ನೀಡಲು ಹೊರಟಿದೆ ಎಂದು ತೇಲ್ಕೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಅಭಿವೃದ್ಧಿ ಸಂಪೂರ್ಣ ಮರೆತ್ತಿದ್ದು, ಯಾವುದೇ ಕಾರ್ಯಗಳಿಗೂ ಅನುದಾನ ಇಲ್ಲದಿರುವುದು ಎಲ್ಲರಿಗೂ ತಿಳಿದ ವಿಷಯ. ಬೆಲೆ ಹೆಚ್ಚಳದಿಂದ ಬಡವರ ಬದುಕು ನಡೆಸುವುದು ದುಸ್ಥರವಾಗಿದೆ. ಇದನ್ನು ಮರೆ ಮಾಚಲು ಸರ್ಕಾರ ಇನ್ನಿಲ್ಲದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜೂನ್ 1ರಂದು ಬೆಳಿಗ್ಗೆ 9ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಇತರ ನಾಯಕರು ಹಾಗೂ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯ ಬಿಜೆಪಿ ಪಕ್ಷದ ಸಂಸದರು, ಮಾಜಿ ಸಂಸದರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿ ಇತರ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ತಿಳಿಸೀದರು.
ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ಮುಖಂಡ ಅಶೋಕ್ ಬೇಳೂರು ಆಗ್ರಹ
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








