ಬೆಂಗಳೂರು: ಸಿದ್ಧರಾಮಯ್ಯ ನಂತ್ರದ ಉತ್ತರಾಧಿಕಾರಿಯಾಗಿ ಡಿಕೆ ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಇಂದಿನ ಸಿಎಲ್ ಪಿ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಪರವಾಗಿ ಶಾಸಕರು ಭರ್ಜರಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಸಿಎಲ್ ಪಿ ಸಭೆಗೆ ಹಾಜರಾಗಿದ್ದಂತ ಬಹುತೇಕ ಶಾಸಕರು ಡಿ.ಕೆ ಶಿವಕುಮಾರ್ ಅವರನ್ನು ನೂತನ ಶಾಸಕಾಂಗ ಪಕ್ಷದ ನಾಯಕನಾಗಿ, ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಗೆ ಕೈ ಎತ್ತಿ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದ ಮಹತಕ್ವದ ಶಾಸಕಾಂಕ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಶಾಸಕರು, ರಾಜ್ಯ ಸಭೆ ಸದಸ್ಯರು ಭಾಗಿಯಾಗಿದ್ದರು. ಸಿದ್ಧರಾಮಯ್ಯ ತರುವಾಯ ಮುಂದಿನ ಮುಖ್ಯಮಂತ್ರಿ ಆಯ್ಕೆಗಾಗಿ, ಶಾಸಕಾಂಗ ಪಕ್ಷದ ನೂತನ ನಾಯಕನನ್ನಾಗಿ ಆಯ್ಕೆಗೆ ಶಾಸಕರನ್ನು ಕೋರಲಾಯಿತು. ಈ ವೇಳೆ ಸಭೆಯಲ್ಲಿ ಹಾಜರಿದ್ದಂತ ಬಹುತೇಕರು ಕೈ ಎತ್ತಿ ಡಿ.ಕೆ ಶಿವಕುಮಾರ್ ಗೆ ಬೆಂಬಲ ಸೂಚಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಸಿಎಲ್ ಪಿ ನಾಯಕ, ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯ ಬಗ್ಗೆ ಕೈ ಎತ್ತಿ ಬೆಂಬಲಿಸಿರುವಂತ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದಾವೆ. ಆ ಮೂಲಕ ಕನಕಪುರದ ಬಂಡೆಗೆ ಸಿಎಲ್ ಪಿ ಸಭೆಯಲ್ಲಿ ಶಾಸಕರು ಭರ್ಜರಿ ಬೆಂಬಲ ನೀಡಿರೋದಾಗಿ ತಿಳಿದು ಬಂದಿದೆ.
CUET (UG) 2026 ಪರೀಕ್ಷೆಯಲ್ಲಿ ತಾಂತ್ರಿಕ ದೋಷ: ಸಂತ್ರಸ್ತ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯ ಅವಕಾಶ ಪ್ರಕಟಿಸಿದ NTA








