Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಶುಭಮನ್ ಗಿಲ್ ಭರ್ಜರಿ ಶತಕ: ರಾಜಸ್ಥಾನ್ ರಾಯಲ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಗುಜರಾತ್ ಟೈಟನ್ಸ್!

BIG NEWS : ಸೇವಾನಿರತ ಶಿಕ್ಷಕರು `TET’ ಪಾಸಾಗುವುದು ಕಡ್ಡಾಯ : ಸುಪ್ರೀಂಕೋರ್ಟ್ ಪುನರುಚ್ಚಾರ

ALERT :ಟೂತ್‌ ಬ್ರಷ್ ತೊಳೆಯುವಾಗ ನೀವೂ ಈ ತಪ್ಪು ಮಾಡ್ತಿದ್ದೀರಾ? ನಿಮ್ಮ ದೇಹ ಸೇರುತ್ತಿದೆ ಕೋಟ್ಯಂತರ ಬ್ಯಾಕ್ಟೀರಿಯಾ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸೇವಾನಿರತ ಶಿಕ್ಷಕರು `TET’ ಪಾಸಾಗುವುದು ಕಡ್ಡಾಯ : ಸುಪ್ರೀಂಕೋರ್ಟ್ ಪುನರುಚ್ಚಾರ
INDIA

BIG NEWS : ಸೇವಾನಿರತ ಶಿಕ್ಷಕರು `TET’ ಪಾಸಾಗುವುದು ಕಡ್ಡಾಯ : ಸುಪ್ರೀಂಕೋರ್ಟ್ ಪುನರುಚ್ಚಾರ

By kannadanewsnow57

ನವದೆಹಲಿ: ಶಾಲಾ ಶಿಕ್ಷಕರ ಅರ್ಹತೆಗೆ ಸಂಬಂಧಿಸಿದಂತೆ ದೇಶದ ಅತ್ಯುನ್ನತ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ. ಪ್ರಸ್ತುತ ಸೇವೆಯಲ್ಲಿರುವ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯ ಎಂದು ಸುಪ್ರೀಂಕೋರ್ಟ್‌ ಮತ್ತೊಮ್ಮೆ ಖಡಕ್ ಆಗಿ ಹೇಳಿದೆ. ಆದರೆ, ಶಿಕ್ಷಕರಿಗೆ ಕೊಂಚ ನಿರಾಳತೆ ತರುವ ಸುದ್ದಿಯೆಂದರೆ, ಪರೀಕ್ಷೆ ಪಾಸ್ ಮಾಡಲು ನೀಡಲಾಗಿದ್ದ ಸಮಯವನ್ನು 2028ರ ಆಗಸ್ಟ್‌ 31ರವರೆಗೆ ವಿಸ್ತರಿಸಲಾಗಿದೆ.

‘ಅಂಜುಮಾನ್‌ ಇಶಾತ್‌ ಇ-ತಲೀಮ್‌ ಟ್ರಸ್ಟ್‌’ ಪ್ರಕರಣದ ಹಳೆಯ ತೀರ್ಪನ್ನು ಪ್ರಶ್ನಿಸಿ ವಿವಿಧ ರಾಜ್ಯ ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಸಂಘಟನೆಗಳು ಒಟ್ಟು 65 ಪುನರ್‌ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದವು. ಈ ಎಲ್ಲಾ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ದೀಪಾಂಕರ್‌ ದತ್ತಾ ಮತ್ತು ಮನಮೋಹನ್‌ ಸಿಂಗ್‌ ಅವರಿದ್ದ ದ್ವಿಸದಸ್ಯ ಪೀಠವು ಸಾರಾಸಗಟಾಗಿ ವಜಾಗೊಳಿಸಿದೆ. ಅಲ್ಲದೆ, ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಟಿಇಟಿ ಕಡ್ಡಾಯ ಎಂಬ ತನ್ನ ಹಳೆಯ ಆದೇಶವನ್ನು ಎತ್ತಿ ಹಿಡಿದಿದೆ.

2009ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (RTE) ಜಾರಿಗೆ ಬರುವ ಮುನ್ನವೇ ಶಿಕ್ಷಕರಾಗಿ ಕೆಲಸಕ್ಕೆ ಸೇರಿದವರಿಗೂ ಟಿಇಟಿ ಕಡ್ಡಾಯ ಮಾಡಲಾಗಿತ್ತು. ಹಾಗೆಯೇ 2025ರ ಸೆಪ್ಟೆಂಬರ್ 1ರ ವೇಳೆಗೆ ನಿವೃತ್ತಿಗೆ 5 ವರ್ಷ ಬಾಕಿ ಇರುವ ಶಿಕ್ಷಕರೂ ಈ ಪರೀಕ್ಷೆ ಬರೆಯಬೇಕು ಎಂದು 2025ರಲ್ಲಿ ಕೋರ್ಟ್ ಆದೇಶಿಸಿತ್ತು. ಈ ನಿಯಮಗಳನ್ನು ಸಡಿಲಗೊಳಿಸುವಂತೆ ಶಿಕ್ಷಕರು ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್‌ ಒಪ್ಪಿಲ್ಲ.

ಲಭ್ಯವಿರುವ ಸಮಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಸಂಬಂಧಪಟ್ಟ ಇಲಾಖೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಆದಷ್ಟು ಬೇಗ ಟಿಇಟಿ ಪರೀಕ್ಷೆಗಳನ್ನು ನಡೆಸಬೇಕು. ಸದ್ಯಕ್ಕೆ ಗಡುವನ್ನು 2028ರ ಆಗಸ್ಟ್‌ 28ರವರೆಗೆ (ಅಂತಿಮವಾಗಿ ಆಗಸ್ಟ್ 31) ವಿಸ್ತರಿಸಲಾಗುತ್ತಿದ್ದು, ಇದಾದ ನಂತರ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಕಾಲಾವಕಾಶ ನೀಡುವುದಿಲ್ಲ.” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟ್‌ನ ಈ ಹೊಸ ಆದೇಶದಿಂದಾಗಿ ಟಿಇಟಿ ಪಾಸ್ ಮಾಡದ ಶಿಕ್ಷಕರು ತಮ್ಮ ಉದ್ಯೋಗ ಉಳಿಸಿಕೊಳ್ಳಲು 2028ರ ಒಳಗಾಗಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

BIG NEWS : Retired teachers must pass `TET’: Supreme Court reiterates
Share. Facebook Twitter LinkedIn WhatsApp Email

Related Posts

​ಶುಭಮನ್ ಗಿಲ್ ಭರ್ಜರಿ ಶತಕ: ರಾಜಸ್ಥಾನ್ ರಾಯಲ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಗುಜರಾತ್ ಟೈಟನ್ಸ್!

2 Mins Read

​ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: LPG ದಾಸ್ತಾನು ಹೆಚ್ಚಿಸಲು ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ

1 Min Read

ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದರೂ ಭಾರತೀಯ ನೌಕೆಗಳ ಸುರಕ್ಷಿತ ಸಂಚಾರದ ಹಿಂದಿರುವ ‘ಸೀಕ್ರೆಟ್’ ತಂತ್ರ ಬಹಿರಂಗ!

2 Mins Read
Recent News

​ಶುಭಮನ್ ಗಿಲ್ ಭರ್ಜರಿ ಶತಕ: ರಾಜಸ್ಥಾನ್ ರಾಯಲ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಗುಜರಾತ್ ಟೈಟನ್ಸ್!

BIG NEWS : ಸೇವಾನಿರತ ಶಿಕ್ಷಕರು `TET’ ಪಾಸಾಗುವುದು ಕಡ್ಡಾಯ : ಸುಪ್ರೀಂಕೋರ್ಟ್ ಪುನರುಚ್ಚಾರ

ALERT :ಟೂತ್‌ ಬ್ರಷ್ ತೊಳೆಯುವಾಗ ನೀವೂ ಈ ತಪ್ಪು ಮಾಡ್ತಿದ್ದೀರಾ? ನಿಮ್ಮ ದೇಹ ಸೇರುತ್ತಿದೆ ಕೋಟ್ಯಂತರ ಬ್ಯಾಕ್ಟೀರಿಯಾ!

ಹಸಿಮೆಣಸಿನಕಾಯಿ Vs ಒಣಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?ತಿಳಿಯಿರಿ

State News
KARNATAKA

ALERT :ಟೂತ್‌ ಬ್ರಷ್ ತೊಳೆಯುವಾಗ ನೀವೂ ಈ ತಪ್ಪು ಮಾಡ್ತಿದ್ದೀರಾ? ನಿಮ್ಮ ದೇಹ ಸೇರುತ್ತಿದೆ ಕೋಟ್ಯಂತರ ಬ್ಯಾಕ್ಟೀರಿಯಾ!

By kannadanewsnow57 KARNATAKA 2 Mins Read

ಆರೋಗ್ಯಕರ ಹಲ್ಲು ಮತ್ತು ಒಸಡುಗಳಿಗಾಗಿ ನಾವು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಬ್ರಷ್ ಮಾಡುತ್ತೇವೆ. ಆದರೆ, ನಮ್ಮ ಬಾಯಿ ಸ್ವಚ್ಛಗೊಳಿಸುವ…

ಹಸಿಮೆಣಸಿನಕಾಯಿ Vs ಒಣಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?ತಿಳಿಯಿರಿ

ಹುಡುಗರು ಕಿವಿ ಚುಚ್ಚಿಸಿಕೊಳ್ಳಬಹುದೇ? ಹಿಂದೂ ಸಂಪ್ರದಾಯದ ಹಿಂದಿರುವ ಅಸಲಿ ಕಾರಣಗಳಿವು!

ALERT : ತಂಬಾಕು ಪ್ರಿಯರೇ ಎಚ್ಚರ : ಯುವ ಜನರಲ್ಲಿ ಹೆಚ್ಚುತ್ತಿದೆ `ಕ್ಯಾನ್ಸರ್’ ಕಂಟಕ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.