Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ `E.D’ ದಾಳಿ | ED Raid

ರೈತರೇ ಗಮನಿಸಿ : ಹೆಚ್ಚಿನ ದರ ವಸೂಲಿ, ಕಳಪೆ ಬೀಜ ಮಾರಾಟ ಕಂಡುಬಂದರೆ ತಕ್ಷಣ ಈ ನಂಬರ್‌ಗಳಿಗೆ ಕರೆ ಮಾಡಿ!

21 ದಿನಗಳ ಒಳಗಾಗಿ ಜನನ-ಮರಣ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರೇ ಗಮನಿಸಿ : ಹೆಚ್ಚಿನ ದರ ವಸೂಲಿ, ಕಳಪೆ ಬೀಜ ಮಾರಾಟ ಕಂಡುಬಂದರೆ ತಕ್ಷಣ ಈ ನಂಬರ್‌ಗಳಿಗೆ ಕರೆ ಮಾಡಿ!
KARNATAKA

ರೈತರೇ ಗಮನಿಸಿ : ಹೆಚ್ಚಿನ ದರ ವಸೂಲಿ, ಕಳಪೆ ಬೀಜ ಮಾರಾಟ ಕಂಡುಬಂದರೆ ತಕ್ಷಣ ಈ ನಂಬರ್‌ಗಳಿಗೆ ಕರೆ ಮಾಡಿ!

By kannadanewsnow57

ರೈತರು ಕೃಷಿ ಪರಿಕರಗಳನ್ನು ಖರೀದಿಸುವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೃಷಿ ಇಲಾಖೆಯಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
ಈ ವರ್ಷದ ಮುಂಗಾರು ಹಂಗಾಮು ಉತ್ತಮವಾಗಿ ಪ್ರಾರಂಭಗೊಂಡಿದೆ. ಇಲ್ಲಿಯವರೆಗೆ ವಾಡಿಕೆ ಮಳೆಯ ಪ್ರಮಾಣ 64.30 ಮಿ.ಮೀ. ಇದ್ದು, ವಾಸ್ತವಿಕ ಮಳೆಯ ಪ್ರಮಾಣ 92.00 ಮಿ.ಮೀ. ದಾಖಲಾಗಿದೆ. 43% ಹೆಚ್ಚಿನ ಮಳೆಯಾಗಿದ್ದು, ಮಳೆಯು ಪ್ರಾರಂಭವಾಗಿರುವುದರಿಂದ ಈ ಹಂಗಾಮು ಆಶಾದಾಯಕವಾಗಿರುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ರೈತರು ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

ಅಧೀಕೃತ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳಿಂದ ಮಾತ್ರ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಖರೀದಿಸಬೇಕು. ಬಿಡಿ (ಲೂಸ್) ಬಿತ್ತನೆ ಬೀಜಗಳನ್ನು ಖರೀದಿಸಬಾರದು. ಖರೀದಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಬಿಲ್ ಪಡೆದುಕೊಳ್ಳಬೇಕು ಹಾಗೂ ಬಿಲ್ಲಿನಲ್ಲಿ ಉಲ್ಲೇಖಿತ ವಿವರಗಳನ್ನು ಪರಿಶೀಲಿಸಬೇಕು. ಬಿಲ್‌ನಲ್ಲಿ ಲಾಟ್ ಸಂಖ್ಯೆ ಅಥವಾ ಬ್ಯಾಚ್ ಸಂಖ್ಯೆ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ತಮ್ಮ ಜಮೀನಿನ ಸ್ವರೂಪಕ್ಕೆ (ಖುಷ್ಕಿ ಅಥವಾ ನೀರಾವರಿ) ಅನುಗುಣವಾಗಿ ಶಿಫಾರಸ್ಸು ಮಾಡಿದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ರೈತರು ಯೂರಿಯಾ ರಸಗೊಬ್ಬರ ಖರೀದಿಸಲು ಎಫ್‌ಐಡಿ ಕಡ್ಡಾಯವಾಗಿದ್ದು, ಆಧಾರ್ ಕಾರ್ಡ್ ನೊಂದಿಗೆ ಮಾರಾಟ ಮಳಿಗೆ ಅಥವಾ ಸೊಸೈಟಿಗಳಿಗೆ ಭೇಟಿ ನೀಡಿ ಖರೀದಿ ಮಾಡಬೇಕು. ರೈತರು ತಾವು ಬೆಳೆಯುವ ಬೆಳೆಯ ಪ್ರಕಾರ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಖರೀದಿಸಬೇಕು ಹಾಗೂ ಕಡ್ಡಾಯವಾಗಿ ಖರೀದಿ ಬಿಲ್ ಪಡೆಯಬೇಕು. ಡಿ.ಎ.ಪಿ. ರಸಗೊಬ್ಬರದ ಪರ್ಯಾಯವಾಗಿ 20:20:0:13, ನ್ಯಾನೋ ಡಿಎಪಿ, ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ನ್ಯಾನೋ ಯೂರಿಯಾ ರಸಗೊಬ್ಬರಗಳನ್ನು ಬಳಸಬಹುದು.

ಬೆಳೆಗಳಿಗೆ ಶಿಫಾರಸ್ಸು ಮಾಡಿರುವ ಪೀಡೆನಾಶಕಗಳನ್ನು ಮಾತ್ರ ಬಳಸಬೇಕು. ಕಳೆನಾಶಕಗಳ ಬಳಕೆಯ ವೇಳೆ ಎಚ್ಚರಿಕೆಯಿಂದಿರಬೇಕು. ಪೀಡೆನಾಶಕ ಸಿಂಪಡನೆ ಮಾಡುವ ವೇಳೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳನ್ನು ಖರೀದಿಸುವ ಸಮಯದಲ್ಲಿ ಮಾರಾಟಗಾರರು ದಾಸ್ತಾನು ಹಾಗೂ ದರಪಟ್ಟಿ ಪದರ್ಶಿಸಿರುವುದು ಕಂಡು ಬಂದಿಲ್ಲದಿದ್ದಲ್ಲಿ, ಖರೀದಿ ಬಿಲ್‌ನ್ನು ನೀಡದೇ ಇದಲ್ಲಿ ಅಥವಾ ಕೃಷಿ ಪರಿಕರಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಥವಾ ಕಳಪೆ ಗುಣಮಟ್ಟದ ಬೀಜ, ರಸಗೊಬ್ಬರ ಅಥವಾ ಕೀಟನಾಶಕ ಕಂಡುಬಂದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಾದ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ ಜೀವನಸಾಬ ಮೊ.ಸಂ: 8277922143, ಕುಷ್ಟಗಿ ಸಹಾಯಕ ಕೃಷಿ ನಿರ್ದೇಶಕರಾದ ನಾಗರಾಜ ಕಾತರಕಿ ಮೊ.ಸಂ: 8277922109, ಯಲಬುರ್ಗಾ ಕೃಷಿ ನಿರ್ದೇಶಕರಾದ ಪ್ರಮೋದ ತುಂಬಾಳ ಮೊ.ಸಂ: 8277922107, ಗಂಗಾವತಿ ಸಹಾಯಕ ಕೃಷಿ ನಿರ್ದೇಶಕರಾದ ಸಿ.ಆರ್.ಅಭಿಲಾಷ ಮೊ.ಸಂ: 8277922106, ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ (ಜಾರಿದಳ) ಎಂ.ಟಿ.ಸುನೀಲ್ ಕುಮಾರ ಮೊ.ಸಂ: 8277932117 ಮತ್ತು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ (ಜಾರಿದಳ) ಎ.ನಾರನಗೌಡ ಮೊ.ಸಂ: 8277932103 ಇವರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

call these numbers immediately! Farmers take note: If you notice high prices being charged or poor seed sales
Share. Facebook Twitter LinkedIn WhatsApp Email

Related Posts

21 ದಿನಗಳ ಒಳಗಾಗಿ ಜನನ-ಮರಣ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ.!

2 Mins Read

ALERT : ಮೂತ್ರ ವಿಸರ್ಜನೆ ವೇಳೆ ಈ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ : ಇದು ಪ್ರಾಣಾಂತಕ ಕ್ಯಾನ್ಸರ್ ಇರಬಹುದು.!

2 Mins Read

BIG NEWS : ರಾಜ್ಯದ ಉಪನೋಂದಣಾಧಿಕಾರಿಗಳ ಅಧಿಕಾರ & ಕರ್ತವ್ಯಗಳೇನು? ಇಲ್ಲಿದೆ ಮಾಹಿತಿ

2 Mins Read
Recent News

BREAKING : ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ `E.D’ ದಾಳಿ | ED Raid

ರೈತರೇ ಗಮನಿಸಿ : ಹೆಚ್ಚಿನ ದರ ವಸೂಲಿ, ಕಳಪೆ ಬೀಜ ಮಾರಾಟ ಕಂಡುಬಂದರೆ ತಕ್ಷಣ ಈ ನಂಬರ್‌ಗಳಿಗೆ ಕರೆ ಮಾಡಿ!

21 ದಿನಗಳ ಒಳಗಾಗಿ ಜನನ-ಮರಣ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ.!

​ಸಿಬಿಎಸ್‌ಇ 12ನೇ ತರಗತಿ ಮೌಲ್ಯಮಾಪನ: ‘OSM’ ವ್ಯವಸ್ಥೆಯ ಅವ್ಯವಸ್ಥೆಗೆ ಆಕ್ರೋಶ, ತಜ್ಞರ ಸಲಹೆಗಳನ್ನು ಕಡೆಗಣಿಸಿದ ಮಂಡಳಿ!

State News
KARNATAKA

ರೈತರೇ ಗಮನಿಸಿ : ಹೆಚ್ಚಿನ ದರ ವಸೂಲಿ, ಕಳಪೆ ಬೀಜ ಮಾರಾಟ ಕಂಡುಬಂದರೆ ತಕ್ಷಣ ಈ ನಂಬರ್‌ಗಳಿಗೆ ಕರೆ ಮಾಡಿ!

By kannadanewsnow57 KARNATAKA 2 Mins Read

ರೈತರು ಕೃಷಿ ಪರಿಕರಗಳನ್ನು ಖರೀದಿಸುವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೃಷಿ ಇಲಾಖೆಯಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ. ಈ ವರ್ಷದ…

21 ದಿನಗಳ ಒಳಗಾಗಿ ಜನನ-ಮರಣ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ.!

ALERT : ಮೂತ್ರ ವಿಸರ್ಜನೆ ವೇಳೆ ಈ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ : ಇದು ಪ್ರಾಣಾಂತಕ ಕ್ಯಾನ್ಸರ್ ಇರಬಹುದು.!

BIG NEWS : ರಾಜ್ಯದ ಉಪನೋಂದಣಾಧಿಕಾರಿಗಳ ಅಧಿಕಾರ & ಕರ್ತವ್ಯಗಳೇನು? ಇಲ್ಲಿದೆ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.