Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವೃದ್ದೆಯನ್ನ ಡಿಜಿಟಲ್ ಅರೆಸ್ಟ್ ಮಾಡಿ 24 ಕೋಟಿ ವಂಚನೆ ಕೇಸ್ : ಆರೋಪಿಗಳ ಹಿನ್ನೆಲೆ ತಿಳಿದು ಪೊಲೀಸರೆ ಶಾಕ್!

ವಿಶೇಷಚೇತನರ ಅಗತ್ಯ ಸಾಧನಗಳ ಮೇಲಿನ GST ಕೈಬಿಡಿ: ಪತ್ರದಲ್ಲಿ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ ಸಚಿವ ಸಂತೋಷ್ ಲಾಡ್

ಜೂನ್.1ರಿಂದ ರಾಜ್ಯಾಧ್ಯಂತ ಶಾಲಾ ಪ್ರಾರಂಭೋತ್ಸವ: ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಶೇಷಚೇತನರ ಅಗತ್ಯ ಸಾಧನಗಳ ಮೇಲಿನ GST ಕೈಬಿಡಿ: ಪತ್ರದಲ್ಲಿ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ ಸಚಿವ ಸಂತೋಷ್ ಲಾಡ್
KARNATAKA

ವಿಶೇಷಚೇತನರ ಅಗತ್ಯ ಸಾಧನಗಳ ಮೇಲಿನ GST ಕೈಬಿಡಿ: ಪತ್ರದಲ್ಲಿ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ ಸಚಿವ ಸಂತೋಷ್ ಲಾಡ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ವಿಶೇಷಚೇತನರು ಸ್ವತಂತ್ರ ಜೀವನ ನಡೆಸಲು ಸಹಾಯವಾಗುವ ಎಲ್ಲಾ ಸಾಧನ, ಸಲಕರಣೆಗಳ ಮೇಲಿನ ಜಿಎಸ್‌ಟಿ ವಿನಾಯಿತಿ ನೀಡುವಂತೆ ಇಲ್ಲವೇ ಜಿಎಸ್‌ಟಿಯನ್ನು ಸಂಪೂರ್ಣ ಮನ್ನಾ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಪತ್ರ ಬರೆದಿದ್ದಾರೆ.

ವಿಶೇಷಚೇತನರಿಗೆ ಅಗತ್ಯವಾದ ಸಹಾಯಕ ಸಾಧನಗಳು, ಪುನರ್ವಸತಿ ಸಾಧನಗಳು, ಸಲಕರಣೆಗಳ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತದೆ. ಈ ಸಾಧನಗಳು ಐಷಾರಾಮಿ ವಸ್ತುಗಳಲ್ಲ, ಬದಲಾಗಿ ಅನಿವಾರ್ಯ ಅವಶ್ಯಕತೆಗಳಾಗಿದ್ದು ಜಿಎಸ್‌ಟಿ ವಿನಾಯಿತಿ ಅಥವಾ ಸಂಪೂರ್ಣ ಜಿಎಸ್‌ಟಿ ತೆಗೆದುಹಾಕಿದರೆ ಅನುಕೂಲವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ವಿಶೇಷಚೇತನರ ಬೆಂಬಲ ಸಾಧನಗಳನ್ನು ಶೂನ್ಯ ತೆರಿಗೆ ಅಥವಾ ವಿನಾಯಿತಿ ಪಡೆದ ವರ್ಗದ ಅಡಿಯಲ್ಲಿ ಸೇರಿಸಬೇಕು, ಈ ಪ್ರಯೋಜನಗಳನ್ನು ಪಡೆಯಲು ಪ್ರಮಾಣೀಕರಣ ಮತ್ತು ಖರೀದಿ ವಿಧಾನಗಳನ್ನು ಸರಳಗೊಳಿಸಬೇಕು, ಸಾಧನಗಳು ಕೈಗೆಟುಕುವ ರೀತಿ ತಯಾರಾಗಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ವಿಶೇಷಚೇತನರಿಗೆ ಸರ್ಕಾರ ಈ ನಿಟ್ಟಿನಲ್ಲಿ ಸಹಾಯ ಮಾಡಿದರೆ ದೇಶದಾದ್ಯಂತ ಲಕ್ಷಾಂತರ ವಿಭಿನ್ನ ಸಾಮರ್ಥ್ಯ ಹೊಂದಿರುವ ನಾಗರಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.

ವಿಶೇಷಚೇತನರು ಬಳಸುವ ಸಾಧನಗಳ ಮೇಲೆ ತೆರಿಗೆ ವಿನಾಯಿತಿ ನೀಡಿದರೆ ಅವರ ಶಿಕ್ಷಣ, ಉದ್ಯೋಗ, ಆರೋಗ್ಯ ರಕ್ಷಣೆ ಮತ್ತು ದೈನಂದಿನ ಸಾಮಾಜಿಕ ಜೀವನದಲ್ಲಿ ಭಾಗವಹಿಸಲು ಹೆಚ್ಚಿನ ಅನುವು ಮಾಡಿಕೊಡುತ್ತದೆ. ಅವರ ಸಲಕರಣೆಗಳ ಮೇಲೆ ಜಿಎಸ್‌ಟಿ ವಿಧಿಸಿದರೆ ವಿಶೇಷಚೇತನರು ಮತ್ತು ಅವರ ಕುಟುಂಬಗಳ ಮೇಲೆ ಅಧಿಕ ಆರ್ಥಿಕ ಹೊರೆ ಬೀಳುತ್ತದೆ. ಅವರಲ್ಲಿ ಅನೇಕರು ಈಗಾಗಲೇ ಹೆಚ್ಚಿನ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮನವಿಯನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.

ವಿಭಿನ್ನ ದರಗಳಲ್ಲಿ ಜಿಎಸ್‌ಟಿಗೆ ಒಳಪಡುವ ಸಾಧನಗಳು

ಚಲನೆಯ ಸಾಧನಗಳು, ಸೆರೆಬ್ರಲ್ ಪಾಲ್ಸಿ ಹೊಂದಿರುವ ವ್ಯಕ್ತಿಗಳ ಉತ್ಪನ್ನಗಳು, ದೃಷ್ಟಿಹೀನರ ಉತ್ಪನ್ನಗಳು, ಬರವಣಿಗೆ ಸಾಧನಗಳು (ದೃಷ್ಟಿಹೀನರಿಗೆ), ವಿವಿಧ ರೀತಿಯ ಶ್ರವಣ ಸಾಧನಗಳು, ಬೌದ್ಧಿಕ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಉತ್ಪನ್ನಗಳು, ಕುಷ್ಠರೋಗದಿಂದ ಗುಣಮುಖರಾದವರು ಬಳಸುವ ಉತ್ಪನ್ನಗಳು, ಕೃತಕ ಅಂಗಗಳು, ಕ್ಯಾಲಿಪರ್‌ಗಳು, ವಿವಿಧ ರೀತಿಯ ವಾಕಿಂಗ್ ಸ್ಟಿಕ್‌ಗಳು, ಕೃತಕ ದಂತಗಳು, ಕನ್ನಡಕಗಳು, ಕಮೋಡ್‌ನೊಂದಿಗೆ ಕುರ್ಚಿ/ಸ್ಟೂಲ್, ಕಮೋಡ್‌ನೊಂದಿಗೆ ವ್ಹೀಲ್‌ಚೇರ್, ಸಿಲಿಕಾನ್ ಫೋಮ್ ಕುಶನ್, ಮೊಣಕಾಲು ಬ್ರೇಸ್, ಗರ್ಭಕಂಠದ ಕಾಲರ್, ಲುಂಬೊಸರಲ್ (ಎಲ್‌ಎಸ್‌) ಬೆಲ್ಟ್, ಪಾದ ಆರೈಕೆ ಕಿಟ್, ಕೃತಕ ಅಂಗಗಳು, ಪ್ರಾಸ್ಥೆಟಿಕ್ ಮತ್ತು ಆರ್ಥೋಟಿಕ್ ಸಾಧನಗಳು ಹಾಗೂ ಭಾಷಣ ಸಹಾಯ ಸಾಧನಗಳು.

ಜೂನ್.1ರಿಂದ ರಾಜ್ಯಾಧ್ಯಂತ ಶಾಲಾ ಪ್ರಾರಂಭೋತ್ಸವ: ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ

Share. Facebook Twitter LinkedIn WhatsApp Email

Related Posts

ವೃದ್ದೆಯನ್ನ ಡಿಜಿಟಲ್ ಅರೆಸ್ಟ್ ಮಾಡಿ 24 ಕೋಟಿ ವಂಚನೆ ಕೇಸ್ : ಆರೋಪಿಗಳ ಹಿನ್ನೆಲೆ ತಿಳಿದು ಪೊಲೀಸರೆ ಶಾಕ್!

2 Mins Read

ಜೂನ್.1ರಿಂದ ರಾಜ್ಯಾಧ್ಯಂತ ಶಾಲಾ ಪ್ರಾರಂಭೋತ್ಸವ: ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ

3 Mins Read

ಜೂ.1ರಿಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭ: ಮಕ್ಕಳಿಗೆ ಮೊದಲ ದಿನವೇ ಸಿಹಿಯೂಟದ ಬಿಸಿಊಟ, ಉಚಿತ ಪಠ್ಯಪುಸ್ತಕ ವಿತರಣೆ

4 Mins Read
Recent News

ವೃದ್ದೆಯನ್ನ ಡಿಜಿಟಲ್ ಅರೆಸ್ಟ್ ಮಾಡಿ 24 ಕೋಟಿ ವಂಚನೆ ಕೇಸ್ : ಆರೋಪಿಗಳ ಹಿನ್ನೆಲೆ ತಿಳಿದು ಪೊಲೀಸರೆ ಶಾಕ್!

ವಿಶೇಷಚೇತನರ ಅಗತ್ಯ ಸಾಧನಗಳ ಮೇಲಿನ GST ಕೈಬಿಡಿ: ಪತ್ರದಲ್ಲಿ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ ಸಚಿವ ಸಂತೋಷ್ ಲಾಡ್

ಜೂನ್.1ರಿಂದ ರಾಜ್ಯಾಧ್ಯಂತ ಶಾಲಾ ಪ್ರಾರಂಭೋತ್ಸವ: ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ

ಜೂ.1ರಿಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭ: ಮಕ್ಕಳಿಗೆ ಮೊದಲ ದಿನವೇ ಸಿಹಿಯೂಟದ ಬಿಸಿಊಟ, ಉಚಿತ ಪಠ್ಯಪುಸ್ತಕ ವಿತರಣೆ

State News
KARNATAKA

ವೃದ್ದೆಯನ್ನ ಡಿಜಿಟಲ್ ಅರೆಸ್ಟ್ ಮಾಡಿ 24 ಕೋಟಿ ವಂಚನೆ ಕೇಸ್ : ಆರೋಪಿಗಳ ಹಿನ್ನೆಲೆ ತಿಳಿದು ಪೊಲೀಸರೆ ಶಾಕ್!

By ಸುರೇಶ್‌ KARNATAKA 2 Mins Read

ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿರುವ ವೃದ್ಧೆಯೊಬ್ಬರ ‘ಡಿಜಿಟಲ್ ಅರೆಸ್ಟ್’ ಮತ್ತು 24 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್…

ವಿಶೇಷಚೇತನರ ಅಗತ್ಯ ಸಾಧನಗಳ ಮೇಲಿನ GST ಕೈಬಿಡಿ: ಪತ್ರದಲ್ಲಿ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ ಸಚಿವ ಸಂತೋಷ್ ಲಾಡ್

ಜೂನ್.1ರಿಂದ ರಾಜ್ಯಾಧ್ಯಂತ ಶಾಲಾ ಪ್ರಾರಂಭೋತ್ಸವ: ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ

ಜೂ.1ರಿಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭ: ಮಕ್ಕಳಿಗೆ ಮೊದಲ ದಿನವೇ ಸಿಹಿಯೂಟದ ಬಿಸಿಊಟ, ಉಚಿತ ಪಠ್ಯಪುಸ್ತಕ ವಿತರಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.