ಹಾವೇರಿ : ಹಾವೇರಿಯಲ್ಲಿ ಭೀಕರವಾದ ಕೊಲೆ ನಡೆದಿದ್ದು , ಅಂಗನವಾಡಿ ಕೇಂದ್ರದಲ್ಲಿ ಮಚ್ಚಿನಿಂದ ಕೊಚ್ಚಿ ಆಯಾಳನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹಾವೇರಿಯ ಶಿಗ್ಗಾವಿ ಪಟ್ಟಣದ ಗುಡ್ಡದ ಓಣಿ ಕೇಂದ್ರದಲ್ಲಿ ಈ ಒಂದು ಭೀಕರವಾದ ಕೊಲೆ ನಡೆದಿದೆ.
ಅಂಗನವಾಡಿ ಆಯಾ ಪ್ರೇಮ ಎಂಬಾಕೆಯನ್ನು ಒಡಹುಟ್ಟಿದ ತಮ್ಮನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಪ್ರೇಮಳ ಚಿರಾಟ ಕೇಳಿ ಸ್ಥಳಕ್ಕೆ ಸ್ಥಳೀಯರು ಓಡೋಡಿ ಬಂದಿದ್ದಾರೆ. ಆರೋಪಿ ಸಂಜೀವನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಯಾಕೆ ಆರೋಪಿ ಸಂಜೀವ್ ತನ್ನ ಅಕ್ಕನ್ನ ಈ ರೀತಿ ಭೀಕರವಾಗಿ ಕೊಲೆ ಮಾಡಿದ ಎನ್ನುವುದು ತಿಳಿದುಬಂದಿಲ್ಲ.








