Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

BIG NEWS: ‘ಒಡೆದ ಮನೆ’ಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ!

BIG NEWS : ಕರ್ನಾಟಕದಲ್ಲಿ 2025-26 ನೇ ಸಾಲಿನಲ್ಲಿ 377 ರೈತರ ಆತ್ಮಹತ್ಯೆ : ಹೀಗಿದೆ ಜಿಲ್ಲಾವಾರು ಮಾಹಿತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಒಡೆದ ಮನೆ’ಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ!
KARNATAKA

BIG NEWS: ‘ಒಡೆದ ಮನೆ’ಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ಅಂಗಸಂಸ್ಥೆಯಾದ ಯೂಥ್ ಕಾಂಗ್ರೆಸ್ (ಯುವ ಕಾಂಗ್ರೆಸ್) ಈಗ ಸಂಪೂರ್ಣವಾಗಿ ಒಡೆದ ಮನೆಯಾಗಿದೆ. ಆಂತರಿಕ ಬೇಗುದಿ, ನಾಯಕರ ನಡುವಿನ ಪ್ರತಿಷ್ಠೆಯ ಜಗಳದಿಂದಾಗಿ ಸಂಘಟನೆ ಎರಡು ಬಣಗಳಾಗಿ ಹೋಳಾಗಿದ್ದು, “ಮನೆಯೊಂದು ಮೂರು ಬಾಗಿಲು” ಎಂಬಂತಾಗಿದೆ.

ರಾಜ್ಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಹಾಗೂ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ನಡುವಿನ ಬಣ ರಾಜಕೀಯ ಈಗ ಬೀದಿಗೆ ಬಂದಿದ್ದು, ಉಭಯ ನಾಯಕರ ಬೆಂಬಲಿಗರ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಎರಡು ಬಣಗಳ ಪದಾಧಿಕಾರಿಗಳು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು ಎನ್ನಲಾಗಿದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಈ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ನಾಂದಿ ಹಾಡಿದೆ.

ಏಕಪಕ್ಷೀಯ ತೀರ್ಮಾನ: ಸಂಘರ್ಷಕ್ಕೆ ಮುಖ್ಯ ಕಾರಣ!

ಯೂಥ್ ಕಾಂಗ್ರೆಸ್‌ನಲ್ಲಿ ಈ ಮಟ್ಟದ ಬಿರುಕು ಮೂಡಲು ಅಧ್ಯಕ್ಷ ಮಂಜುನಾಥ್ ಅವರ ಏಕಪಕ್ಷೀಯ ನಡೆಗಳೇ ಕಾರಣ ಎಂದು ಹೇಳಲಾಗುತ್ತಿದೆ. ಸಂಘಟನೆಯಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂಬ ನೆಪವೊಡ್ಡಿ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಹಾಗೂ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ಹಲವು ಪದಾಧಿಕಾರಿಗಳನ್ನು ಮಂಜುನಾಥ್ ಜಂಟಿ ಸಭೆಯಲ್ಲೇ ವಜಾಗೊಳಿಸಿದ್ದರು. ಅಧ್ಯಕ್ಷರ ಈ ದಿಢೀರ್ ಮತ್ತು ಏಕಪಕ್ಷೀಯ ನಿರ್ಧಾರ ದೀಪಿಕಾ ರೆಡ್ಡಿ ಬಣವನ್ನು ಕೆರಳಿಸಿತು.

ರಾಷ್ಟ್ರೀಯ ನಾಯಕರ ಸಮ್ಮುಖದಲ್ಲೇ ಈ ಅಸಮಾಧಾನ ಸ್ಫೋಟಗೊಂಡಿದೆ. ಯೂಥ್ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಅವರ ಮುಂದೆಯೇ ದೀಪಿಕಾ ರೆಡ್ಡಿ ಅವರು ಅಧ್ಯಕ್ಷ ಮಂಜುನಾಥ್ ವಿರುದ್ಧ ತಿರುಗಿಬಿದ್ದು, ಖಾರವಾಗಿಯೇ ಕೌಂಟರ್ ನೀಡಿದ್ದರು. ಇದಾದ ಬಳಿಕ ಜಗಳ ಶಮನವಾಗುವ ಬದಲಿಗೆ ಮತ್ತಷ್ಟು ತೀವ್ರಗೊಂಡಿತು.

ಡಿಕೆಶಿ ಅಂಗಳದಿಂದ ಎಐಸಿಸಿಗೆ ತಲುಪಿದ ಪಂಚಾಯಿತಿ

ರಾಜ್ಯ ಮಟ್ಟದಲ್ಲಿ ಜಗಳ ತಾರಕಕ್ಕೇರುತ್ತಿದ್ದಂತೆ ದೀಪಿಕಾ ರೆಡ್ಡಿ ನೇತೃತ್ವದ ನಿಯೋಗವು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಮಂಜುನಾಥ್ ಅವರ ಸರ್ವಾಧಿಕಾರಿ ಧೋರಣೆ ಹಾಗೂ ಏಕಪಕ್ಷೀಯ ನಡೆಗಳ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿತ್ತು.

ರಾಜ್ಯ ನಾಯಕರ ಹಂತದಲ್ಲಿ ಬಗೆಹರಿಯದ ಈ ಒಳಜಗಳ ಕೊನೆಗೆ ದೆಹಲಿಯ ಎಐಸಿಸಿ (AICC) ಅಂಗಳ ತಲುಪಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರಾಷ್ಟ್ರೀಯ ಯೂಥ್ ಕಾಂಗ್ರೆಸ್ ನಾಯಕತ್ವ, ಎರಡೂ ಬಣಗಳ ಅಹವಾಲು ಮತ್ತು ದೂರುಗಳನ್ನು ಆಲಿಸಿತು. ಸದ್ಯ ಈ ಬಿಕ್ಕಟ್ಟನ್ನು ಶಮನಗೊಳಿಸಲು ಹಾಗೂ ವಸ್ತುಸ್ಥಿತಿಯ ವರದಿ ಪಡೆಯಲು ಹೈಕಮಾಂಡ್ ವಿಶೇಷ ಸಮಿತಿಯೊಂದನ್ನು ರಚಿಸಿ ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ. ಆದರೂ ಪದಾಧಿಕಾರಿಗಳ ನಡುವೆ ಪರಸ್ಪರ ಕತ್ತಿ ಮಸಿಯುವ ಕೆಲಸ ನಿಂತಿಲ್ಲ.

ಯಾರು ಯಾವ ಬಣದಲ್ಲಿದ್ದಾರೆ? – ಪದಾಧಿಕಾರಿಗಳ ಒಳಜೀವನ

ರಾಜ್ಯ ಯೂಥ್ ಕಾಂಗ್ರೆಸ್‌ನಲ್ಲಿ ಸದ್ಯ ಒಟ್ಟು 11 ಜನ ಉಪಾಧ್ಯಕ್ಷರಿದ್ದಾರೆ. ಈ ಪೈಕಿ ಬಹುತೇಕರು ಸ್ಪಷ್ಟವಾಗಿ ಎರಡು ಬಣಗಳಾಗಿ ವಿಭಜನೆಗೊಂಡಿದ್ದಾರೆ.

ಮಂಜುನಾಥ್ (ಅಧ್ಯಕ್ಷರ) ಬಣ:

ಅಧ್ಯಕ್ಷ ಮಂಜುನಾಥ್ ಅವರ ಬೆನ್ನಿಗೆ ಐದು ಜನ ಉಪಾಧ್ಯಕ್ಷರು ಗಟ್ಟಿಯಾಗಿ ನಿಂತಿದ್ದಾರೆ. ಅಬ್ದುಲ್ಲಾ ದೇಸಾಯಿ, ದಿವ್ಯಾ ಕೆ.ಆರ್, ಚೈತ್ರಾ ಗೌಡ, ಪರೋಮಿತ ದಾಸ್ ಮತ್ತು ಬಾಲಪ್ರದೀಪ್ ಅವರು ಅಧ್ಯಕ್ಷರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ದೀಪಿಕಾ ರೆಡ್ಡಿ (ಉಪಾಧ್ಯಕ್ಷೆ) ಬಣ:

ಅಧ್ಯಕ್ಷರ ವಿರುದ್ಧ ಬಂಡಾಯ ಎದ್ದಿರುವ ದೀಪಿಕಾ ರೆಡ್ಡಿ ಅವರಿಗೆ ನಾಲ್ವರು ಉಪಾಧ್ಯಕ್ಷರ ಬೆಂಬಲವಿದೆ. ಉಪಾಧ್ಯಕ್ಷರಾದ ಮಂಜುನಾಥ್ ಮಣಿ ಚಟ್ಟಿ, ಸಂದೀಪ್, ಲಾವಣ್ಯ ಮತ್ತು ಸಿರಿಲ್ ಪ್ರಭು ಅವರು ದೀಪಿಕಾ ರೆಡ್ಡಿ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ.

ತಟಸ್ಥರಾಗಿ ಉಳಿದ ನಿಖಿಲ್ ವಿ. ಶಂಕರ್!

ಈ ಇಡೀ ರಾಜಕೀಯ ಹಗ್ಗಜಗ್ಗಾಟ, ಬಣ ರಾಜಕೀಯದ ನಡುವೆ ಯೂಥ್ ಕಾಂಗ್ರೆಸ್‌ನ ಮತ್ತೊಬ್ಬ ಉಪಾಧ್ಯಕ್ಷ ನಿಖಿಲ್ ವಿ. ಶಂಕರ್ ಮಾತ್ರ ಸಂಪೂರ್ಣ ತಟಸ್ಥ ಧೋರಣೆ ತಳೆದಿದ್ದಾರೆ. 11 ಜನ ಉಪಾಧ್ಯಕ್ಷರ ಪೈಕಿ ನಿಖಿಲ್ ಮಾತ್ರ ಯಾವುದೇ ಬಣಕ್ಕೂ ಸೇರದೆ ದೂರ ಉಳಿದಿರುವುದು ವಿಶೇಷ.

ಬೆಂಗಳೂರು ನಗರ ಜಿಲ್ಲೆಯ ನಿವೃತ್ತ ಜಿಲ್ಲಾಧಿಕಾರಿ (IAS ಅಧಿಕಾರಿ) ವಿ. ಶಂಕರ್ ಅವರ ಪುತ್ರರಾಗಿರುವ ನಿಖಿಲ್ ವಿ. ಶಂಕರ್, ಉಭಯ ಬಣಗಳ ಕಿತ್ತಾಟದಿಂದ ಅಂತರ ಕಾಯ್ದುಕೊಂಡು ಸಂಘಟನೆಯಲ್ಲಿ ತಟಸ್ಥರಾಗಿ ಉಳಿದಿದ್ದಾರೆ.

ಒಟ್ಟಿನಲ್ಲಿ, ಸಮಿತಿ ರಚನೆಯಾಗಿದ್ದರೂ ಯೂಥ್ ಕಾಂಗ್ರೆಸ್ ಒಳಗಿನ ಆಂತರಿಕ ಬೇಗುದಿ ಹಾಗೂ ಶೀತಲ ಸಮರ ಮಾತ್ರ ಕಮ್ಮಿಯಾಗಿಲ್ಲ. ಈ ಬಣ ರಾಜಕೀಯ ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share. Facebook Twitter LinkedIn WhatsApp Email

Related Posts

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

2 Mins Read

BIG NEWS : ಕರ್ನಾಟಕದಲ್ಲಿ 2025-26 ನೇ ಸಾಲಿನಲ್ಲಿ 377 ರೈತರ ಆತ್ಮಹತ್ಯೆ : ಹೀಗಿದೆ ಜಿಲ್ಲಾವಾರು ಮಾಹಿತಿ

2 Mins Read

BREAKING : ಮಂಡ್ಯ ಕಂದಾಯ ಇಲಾಖೆಯಲ್ಲಿ ಭಾರಿ ಅಕ್ರಮ : 1000 ಎಕರೆ ಭೂಮಿ ಅಕ್ರಮವಾಗಿ ಹಂಚಿಕೆ, ತನಿಖೆಯಲ್ಲಿ ಬಯಲು!

2 Mins Read
Recent News

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

BIG NEWS: ‘ಒಡೆದ ಮನೆ’ಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ!

BIG NEWS : ಕರ್ನಾಟಕದಲ್ಲಿ 2025-26 ನೇ ಸಾಲಿನಲ್ಲಿ 377 ರೈತರ ಆತ್ಮಹತ್ಯೆ : ಹೀಗಿದೆ ಜಿಲ್ಲಾವಾರು ಮಾಹಿತಿ

SHOCKING : ದಂತ ವೈದ್ಯನ ಘೋರ ಎಡವಟ್ಟು: ಹುಳುಕು ಹಲ್ಲು ಬಿಟ್ಟು, ಚೆನ್ನಾಗಿದ್ದ ಹಲ್ಲನ್ನೇ ಕಿತ್ತ ಡಾಕ್ಟರ್ | WATCH VIDEO

State News
KARNATAKA

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

By kannadanewsnow57 KARNATAKA 2 Mins Read

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಮುಂಜಾನೆಯ ಆಫೀಸ್ ಗಡಿಬಿಡಿ ಮತ್ತು ಮನೆಯ ಕೆಲಸಗಳ ಒತ್ತಡದಿಂದಾಗಿ ಅನೇಕರು ಉಪಾಹಾರ (Breakfast) ಸೇವಿಸದೆ…

BIG NEWS: ‘ಒಡೆದ ಮನೆ’ಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ!

BIG NEWS : ಕರ್ನಾಟಕದಲ್ಲಿ 2025-26 ನೇ ಸಾಲಿನಲ್ಲಿ 377 ರೈತರ ಆತ್ಮಹತ್ಯೆ : ಹೀಗಿದೆ ಜಿಲ್ಲಾವಾರು ಮಾಹಿತಿ

BREAKING : ಮಂಡ್ಯ ಕಂದಾಯ ಇಲಾಖೆಯಲ್ಲಿ ಭಾರಿ ಅಕ್ರಮ : 1000 ಎಕರೆ ಭೂಮಿ ಅಕ್ರಮವಾಗಿ ಹಂಚಿಕೆ, ತನಿಖೆಯಲ್ಲಿ ಬಯಲು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.