Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಚ್ಚರ! ನಿಮ್ಮ ಜೀವನಶೈಲಿ ನಿಮ್ಮ ಹೃದಯವನ್ನು ನಿಮಗಿಂತ ಮುಂಚಿತವಾಗಿಯೇ ಮುದುಕರನ್ನಾಗಿಸಬಹುದು!

Happy Marriage: ಸುಖಿ ದಾಂಪತ್ಯಕ್ಕೆ ಗಂಡ-ಹೆಂಡತಿ ನಡುವೆ ಎಷ್ಟು ವಯಸ್ಸಿನ ಅಂತರ ಇರಬೇಕು? ವಿಜ್ಞಾನ ಹೇಳುವ ಅಸಲಿ ಸತ್ಯ ಇಲ್ಲಿದೆ!

​’ಕಾಕ್ರೋಚ್ ಜನತಾ ಪಾರ್ಟಿ’ ಸಂಸ್ಥಾಪಕ ಅಭಿಜೀತ್ ದಿಪ್ಕೆಗೆ ನಿರಂತರ ಬೆದರಿಕೆ; ಭಾರತದಲ್ಲಿರುವ ಕುಟುಂಬದ ಸುರಕ್ಷತೆ ಬಗ್ಗೆ ಆತಂಕ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಾಯಿ ಮಾತಿನ ಲೆಕ್ಕ ಬಿಟ್ಟು ದಾಖಲೆ ಬಿಡುಗಡೆ ಮಾಡಿ: ಮಧು ಬಂಗಾರಪ್ಪ, ಗೋಪಾಲಕೃಷ್ಣಗೆ ಹರತಾಳು ಹಾಲಪ್ಪ ಸವಾಲ್
KARNATAKA

ಬಾಯಿ ಮಾತಿನ ಲೆಕ್ಕ ಬಿಟ್ಟು ದಾಖಲೆ ಬಿಡುಗಡೆ ಮಾಡಿ: ಮಧು ಬಂಗಾರಪ್ಪ, ಗೋಪಾಲಕೃಷ್ಣಗೆ ಹರತಾಳು ಹಾಲಪ್ಪ ಸವಾಲ್

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಅಣ್ಣ-ಬಾವ (ಮಧು ಬಂಗಾರಪ್ಪ ಮತ್ತು ಬೇಳೂರು ಗೋಪಾಲಕೃಷ್ಣ) ಇಬ್ಬರೂ ಒಟ್ಟಾಗಿ ಸೇರಿ ಮುಖ್ಯಮಂತ್ರಿಗಳ ಮನವೊಲಿಸಿ ಒಂದಷ್ಟು ನೈಜ ಅನುದಾನ ತರಲಿ. ಅದನ್ನು ಬಿಟ್ಟು ಬಾಯಿ ಮಾತಿನಲ್ಲಿ ಇಷ್ಟೊಂದು ಕೋಟಿ ರೂಪಾಯಿ ಬಂದಿದೆ ಎಂದು ಜನರಿಗೆ ತಪ್ಪು ಲೆಕ್ಕ ನೀಡುವ ಬದಲು, ದಾಖಲೆ ಸಹಿತ ಸತ್ಯಾಂಶವನ್ನು ಜನರ ಮುಂದೆ ಇಡಲಿ,” ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ಸವಾಲು ಹಾಕಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೂರು ವರ್ಷಗಳಲ್ಲಿ ಶೂನ್ಯ ಅಭಿವೃದ್ಧಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದ್ದರೂ, ಯಾವುದೇ ತಾಲ್ಲೂಕಿನಲ್ಲಿ ಪ್ರಗತಿ ಕೆಲಸಗಳು ನಡೆದಿಲ್ಲ ಎಂದು ಹಾಲಪ್ಪ ಆರೋಪಿಸಿದರು. “ರಾಜ್ಯದ ಪರಿಸ್ಥಿತಿ ಹೀಗಿರುವಾಗ, ನಮ್ಮ ತಾಲ್ಲೂಕಿನಲ್ಲಿ ಮಾತ್ರ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ಬಂದಿದೆ ಎಂದು ಆಡಳಿತ ಪಕ್ಷದವರು ಹೇಳಿಕೊಳ್ಳುತ್ತಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ,” ಎಂದು ಅವರು ಲೇವಡಿ ಮಾಡಿದರು.

ಶಿಕ್ಷಣ ಸಚಿವರ ಭರವಸೆಗಳು ಕೇವಲ ಗಿಮಿಕ್

ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂತ್ರಿಯಾದ ತಕ್ಷಣ ನೀಡಿದ್ದ ಯಾವುದೇ ಭರವಸೆಗಳು ಈಡೇರಿಲ್ಲ. ಈಗ ಹೊಸದಾಗಿ ಒಂದು ಸಾವಿರ ಕೆಪಿಎಸ್‌ಸಿ (KPSC) ಶಾಲೆಗಳನ್ನು ತೆರೆದು ಬಸ್ ಸೌಲಭ್ಯ ನೀಡುತ್ತೇವೆ ಎನ್ನುತ್ತಿದ್ದಾರೆ. ಒಂದು ಶಾಲೆಗೆ ಕನಿಷ್ಠ 25 ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ಬೃಹತ್ ಮೊತ್ತದ ಹಣವನ್ನು ಎಲ್ಲಿಂದ ತರುತ್ತಾರೆ? ಮೊದಲು ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲಿ. ಇನ್ನು 1 ಸಾವಿರ ಬಸ್‌ಗಳನ್ನು ತಂದರೂ ಅವುಗಳಿಗೆ ಚಾಲಕರ ನೇಮಕಾತಿ ಮಾಡುವುದು ಹೇಗೆ? ಎಂದು ಹಾಲಪ್ಪ ಪ್ರಶ್ನಿಸಿದರು.

ಅಧಿಕಾರಿಗಳಿಲ್ಲದೆ ಸಾಗರ ಕ್ಷೇತ್ರಕ್ಕೆ ಹಿನ್ನಡೆ

ಸಾಗರ ವಿಧಾನಸಭಾ ಕ್ಷೇತ್ರವು ಪ್ರಸ್ತುತ ಅಭಿವೃದ್ಧಿಯಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ತಾಲ್ಲೂಕಿನ ಯಾವುದೇ ಇಲಾಖೆಯಲ್ಲೂ ಕಾಯಂ ಅಧಿಕಾರಿಗಳಿಲ್ಲದೆ, ಪ್ರಮುಖ ಸ್ಥಾನಗಳೆಲ್ಲವೂ ‘ಪ್ರಭಾರಿ’ (In-charge) ಅಧಿಕಾರಿಗಳ ವಶದಲ್ಲಿವೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ ಅವರು ಎಲ್ಲ ಅಧಿಕಾರಿಗಳೂ ಇದ್ದಾರೆ ಎಂದು ವಾದಿಸುತ್ತಿದ್ದಾರೆ. ಹಾಗಿದ್ದರೆ ಯಾವ್ಯಾವ ಇಲಾಖೆಯಲ್ಲಿ ಕಾಯಂ ಅಧಿಕಾರಿಗಳಿದ್ದಾರೆ ಎಂಬುದನ್ನು ಅವರು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಹಾಲಪ್ಪ ಸವಾಲು ಎಸೆದರು.

ಒಳಚರಂಡಿ ಕಾಮಗಾರಿ ತನಿಖೆಗೆ ಪತ್ರ

ತಾಲ್ಲೂಕಿನ ಪ್ರಮುಖ ಯೋಜನೆಗಳ ವಿಳಂಬದ ಕುರಿತು ಮಾತನಾಡಿದ ಹಾಲಪ್ಪ ಅವರು ಕೆಳಗಿನ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದರು:

  • ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್: “ನಾನು ಶಾಸಕನಾಗಿದ್ದ ಅವಧಿಯಲ್ಲಿ ಈ ಸಂಕೀರ್ಣ ನಿರ್ಮಾಣಕ್ಕೆ 4.80 ಕೋಟಿ ರೂ. ಅನುದಾನ ತರಲಾಗಿತ್ತು. ಆ ಹಣ ಇಷ್ಟು ದಿನ ಬ್ಯಾಂಕಿನಲ್ಲೇ ಕೊಳೆಯುತ್ತಿತ್ತು. ಈಗಿನ ಶಾಸಕರು ಮೂರು ವರ್ಷಗಳಿಂದ ಯಾವುದೇ ಪ್ರಯತ್ನ ಮಾಡದೆ, ಈಗ ರಂಗಮಂದಿರ ನಿರ್ಮಾಣಕ್ಕೆ ಸಾರ್ವಜನಿಕರ ಸಲಹೆ ಕೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ.”

  • ಒಳಚರಂಡಿ ಕಾಮಗಾರಿ ಅಕ್ರಮದ ಶಂಕೆ: “ಒಳಚರಂಡಿ ಕಾಮಗಾರಿಗೆ ಈ ಹಿಂದೆ 71 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈಗಿನ ಶಾಸಕರು ಮತ್ತೆ 20 ಕೋಟಿ ರೂ. ತಂದಿದ್ದೇನೆ ಎನ್ನುತ್ತಿದ್ದಾರೆ. ಆದರೆ ನೆಲದ ಮೇಲೆ ಯಾವುದೇ ಕಾಮಗಾರಿ ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಡೀ ಒಳಚರಂಡಿ ಯೋಜನೆಯನ್ನು ಸಮಗ್ರ ತನಿಖೆಗೆ ಒಳಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.”

ಸೇತುವೆ ಕಾಮಗಾರಿಗಳ ವಿಳಂಬ

ಹಸಿರುಮಕ್ಕಿ ಸೇತುವೆ ಕಾಮಗಾರಿ ನಿಲ್ಲಲು ಹಾಲಪ್ಪ ಅವರೇ ಕಾರಣ ಎಂದು ಈ ಹಿಂದೆ ಆಡಳಿತ ಪಕ್ಷದವರು ದೂಷಿಸಿದ್ದರು. ಸಿಗಂದೂರು ಸೇತುವೆ ಲೋಕಾರ್ಪಣೆ ಸಂದರ್ಭದಲ್ಲಿ ಭಾಷಣ ಮಾಡಿದ್ದ ಸಚಿವರು ಮತ್ತು ಶಾಸಕರು, ಮೇ ತಿಂಗಳಿನೊಳಗೆ ಹಸಿರುಮಕ್ಕಿ ಸೇತುವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವುದಾಗಿ ಹೇಳಿದ್ದರು. ಆದರೆ ಇಂದಿಗೂ ಕಾಮಗಾರಿ ಮುಗಿದಿಲ್ಲ. ಹಣಕಾಸಿನ ಸಮಸ್ಯೆಯಿಂದ ಈ ಯೋಜನೆ ಕುಂಠಿತಗೊಂಡಿದ್ದು, ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಅವರು ತಕ್ಷಣ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಹಣ ಬಿಡುಗಡೆ ಮಾಡಿಸಲಿ ಎಂದು ಆಗ್ರಹಿಸಿದರು. ಇದರೊಂದಿಗೆ, ತಾಲ್ಲೂಕಿನಲ್ಲಿ ಸಿದ್ಧವಾಗಿರುವ ಬಳಸಗೋಡು, ತ್ಯಾಗರ್ತಿ ಮತ್ತು ಕಾಗೋಡು ವಿದ್ಯುತ್ ಗ್ರಿಡ್‌ಗಳನ್ನು ವಿಳಂಬ ಮಾಡದೆ ತಕ್ಷಣ ಲೋಕಾರ್ಪಣೆಗೊಳಿಸಬೇಕು ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಮುಖಂಡರಾದ ದೇವೇಂದ್ರಪ್ಪ, ಗಣೇಶ ಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ರಮೇಶ್ ಎಚ್.ಎಸ್., ಅರುಣ ಕುಗ್ವೆ, ಸುಜಯ್ ಶೆಣೈ, ಬೈರಪ್ಪ, ಬಂಗಾರಪ್ಪ, ಗಿರೀಶ್ ಗುಳ್ಳಳ್ಳಿ, ಪರಶುರಾಮ, ಶ್ರೀಧರ ಜೋಗಿ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

ಜಾಗತಿಕ ವೇದಿಕೆಯಲ್ಲಿ ಭಾರತದ ಕಲಾ ವೈಭವ: ನಾರ್ಡಿಕ್ ನಾಯಕರಿಗೆ ಪ್ರಧಾನಿ ಮೋದಿಯಿಂದ ‘ಸಾಂಸ್ಕೃತಿಕ’ ಉಡುಗೊರೆ!

JOB ALERT: ರಾಜ್ಯದ ವಿವಿಧ ಇಲಾಖೆ, ನಿಗಮಗಳಲ್ಲಿ ಖಾಲಿ ಇರುವ ‘ಎಂಜಿನಿಯರ್ ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಗುಡ್ ನ್ಯೂಸ್; ಸೆ.30ರವರೆಗೆ ನಮೂನೆ-11ಬಿ ಪಡೆಯಲು ಮೇಲ್ಮನವಿ ಅವಧಿ ವಿಸ್ತರಣೆ

2 Mins Read

‘IPS ಅಧಿಕಾರಿ ಡಾ.ಬೆನಕ ಪ್ರಸಾದ್’ ವರ್ಗಾವಣೆ ರದ್ದು; ‘ಸಾಗರ ಎಎಸ್ಪಿ’ಯಾಗಿ ಮುಂದುವರೆಸಿ ಸರ್ಕಾರ ಆದೇಶ

1 Min Read

BREAKING: ಇಬೋಲಾ ವೈರಸ್ ಭೀತಿ: ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿಗಾ, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

3 Mins Read
Recent News

ಎಚ್ಚರ! ನಿಮ್ಮ ಜೀವನಶೈಲಿ ನಿಮ್ಮ ಹೃದಯವನ್ನು ನಿಮಗಿಂತ ಮುಂಚಿತವಾಗಿಯೇ ಮುದುಕರನ್ನಾಗಿಸಬಹುದು!

Happy Marriage: ಸುಖಿ ದಾಂಪತ್ಯಕ್ಕೆ ಗಂಡ-ಹೆಂಡತಿ ನಡುವೆ ಎಷ್ಟು ವಯಸ್ಸಿನ ಅಂತರ ಇರಬೇಕು? ವಿಜ್ಞಾನ ಹೇಳುವ ಅಸಲಿ ಸತ್ಯ ಇಲ್ಲಿದೆ!

​’ಕಾಕ್ರೋಚ್ ಜನತಾ ಪಾರ್ಟಿ’ ಸಂಸ್ಥಾಪಕ ಅಭಿಜೀತ್ ದಿಪ್ಕೆಗೆ ನಿರಂತರ ಬೆದರಿಕೆ; ಭಾರತದಲ್ಲಿರುವ ಕುಟುಂಬದ ಸುರಕ್ಷತೆ ಬಗ್ಗೆ ಆತಂಕ!

ರಾಜ್ಯದ ಜನತೆಗೆ ಗುಡ್ ನ್ಯೂಸ್; ಸೆ.30ರವರೆಗೆ ನಮೂನೆ-11ಬಿ ಪಡೆಯಲು ಮೇಲ್ಮನವಿ ಅವಧಿ ವಿಸ್ತರಣೆ

State News
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್; ಸೆ.30ರವರೆಗೆ ನಮೂನೆ-11ಬಿ ಪಡೆಯಲು ಮೇಲ್ಮನವಿ ಅವಧಿ ವಿಸ್ತರಣೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಆಸ್ತಿ ದಾಖಲಾತಿಗಳನ್ನು ಸುಲಭವಾಗಿ ಮತ್ತು ಪಾರದರ್ಶಕವಾಗಿ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ…

‘IPS ಅಧಿಕಾರಿ ಡಾ.ಬೆನಕ ಪ್ರಸಾದ್’ ವರ್ಗಾವಣೆ ರದ್ದು; ‘ಸಾಗರ ಎಎಸ್ಪಿ’ಯಾಗಿ ಮುಂದುವರೆಸಿ ಸರ್ಕಾರ ಆದೇಶ

BREAKING: ಇಬೋಲಾ ವೈರಸ್ ಭೀತಿ: ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿಗಾ, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ: ಮೇ.24ರಂದು ದೇವನಹಳ್ಳಿಯಲ್ಲಿ ಹೈವೋಲ್ಟೇಜ್ ಸಭೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.