| RTC ಕಾಲಂ |
ವಿವರ (Description) |
ಬಳಸಬೇಕಾದ ಸಾಫ್ಟ್ವೇರ್ / ಮಾಡ್ಯೂಲ್ |
| ಕಾಲಂ-1 |
ಸsurvey ನಂಬರ್ (Surnoc) |
RTC Management Software |
| ಕಾಲಂ-2 |
ಹಿಸ್ಸಾ (Hissa) |
RTC Management Software |
| ಕಾಲಂ-3 |
ವಿಸ್ತೀರ್ಣ ಮತ್ತು ಖರಾಬು ವಿಸ್ತೀರ್ಣ (RTC Extent & Karab Extent) |
RRT Correction Module |
| ಕಾಲಂ-4 |
ಭೂ ಕಂದಾಯ, ಜೋಡಿ, ಉಪಕರ, ನೀರಿನ ತೆರಿಗೆ (Land Revenue, Jodi, Cess, Water Tax) |
RRT Correction Module |
| ಕಾಲಂ-5 |
ಮಣ್ಣಿನ ವಿಧ (Soil Type) |
RRT Correction Module |
| ಕಾಲಂ-6 |
ಪಟ್ಟಾ (Patta) |
RRT Correction Module |
| ಕಾಲಂ-7 |
ಮರಗಳ ಸಂಖ್ಯೆ (Tree Count) |
RTC Management Software |
| ಕಾಲಂ-8 |
ನೀರಾವರಿ ವಿಸ್ತೀರ್ಣ (Ketuvaaru) |
ತಿದ್ದುಪಡಿ ಮಾಡಲು ಯಾವುದೇ ಅವಕಾಶವಿರುವುದಿಲ್ಲ |
| ಕಾಲಂ-9 |
ಮಾಲೀಕರ ವಿವರ (ಹೆಸರು/ತಂದೆಯ ಹೆಸರು/ಲಿಂಗ/ಬಿನ್ಕೋಂ/ವರ್ಗ/ವಿಸ್ತೀರ್ಣ/ಖಾತಾ ಸಂಖ್ಯೆ ಇತ್ಯಾದಿ) |
RRT Correction Module |
| ಕಾಲಂ-10 |
ಸ್ವಾಧೀನದ ವಿಧ (Acquisition Type) |
RRT Correction Module |
| ಕಾಲಂ-11 |
ಹಕ್ಕುಗಳು ಮತ್ತು ಹೊಣೆಗಾರಿಕೆಗಳು (ಸರ್ಕಾರಿ ನಿರ್ಬಂಧ, ಕೋರ್ಟ್ ತಡೆಯಾಜ್ಞೆ ವಿವರ ಇತ್ಯಾದಿ) |
RRT Correction Module |
| ಕಾಲಂ-12 |
ಸಾಗುವಳಿ ವಿವರ (Cultivation) |
RTC Management Software |
| ಕಾಲಂ-13 |
ಬೆಳೆ ವಿವರಗಳು (CROP details) |
Crop Survey (ಯಾವುದೇ ತಿದ್ದುಪಡಿಗೆ ಅವಕಾಶವಿಲ್ಲ) |
ಇತರ ಪ್ರಮುಖ ತಾಂತ್ರಿಕ ಸೌಲಭ್ಯಗಳು:
ಹೊಸ RTC ಸೃಷ್ಟಿ (RTC Creation): ಉಪವಿಭಾಗಾಧಿಕಾರಿಗಳಿಗೆ ಹೊಸ ಪಹಣಿ ಸೃಜನೆಗೆ ಅವಕಾಶ ಬೇಕಿದ್ದಲ್ಲಿ, ಜಿಲ್ಲಾಧಿಕಾರಿಗಳ ಮೂಲಕ ಸೂಕ್ತ ದಾಖಲೆಗಳೊಂದಿಗೆ ಕಂದಾಯ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬಳಿಕ “RTC Management Software” ನಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗುವುದು.
ಪಹಣಿ ರದ್ದತಿ (RTC Deletion): RTC Management Software ಮೂಲಕ ನಿರ್ವಹಿಸಬೇಕು.
ಪಹಣಿ ಮರುಪಡೆಯುವಿಕೆ (RTC Retrieval): RTC Management Software ಮೂಲಕ ಮಾಡಬೇಕು.
ಮಾಲೀಕರಿಲ್ಲದ ಪಹಣಿ ತಿದ್ದುಪಡಿ (No-Owner RTC Correction): RTC Management Software ನಲ್ಲಿ ಅವಕಾಶ ನೀಡಲಾಗಿದೆ.
ದಾಖಲೆಗಳ ಅಪ್ಲೋಡ್: ತಿದ್ದುಪಡಿ ಪ್ರಕ್ರಿಯೆಯ ಸೌಲಭ್ಯಕ್ಕಾಗಿ RRT Correction Module ನಲ್ಲಿ ತಲಾ 2MB ವರೆಗಿನ ಗಾತ್ರದ ಬಹು ದಾಖಲೆಗಳನ್ನು (Multiple documents) ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕಂದಾಯ ಇಲಾಖೆಯ ತಾಂತ್ರಿಕ ಕೋಶದ ನಿರ್ದೇಶಕರು ಈ ಆದೇಶಕ್ಕೆ ಡಿಜಿಟಲ್ ಸಹಿ ಮಾಡಿದ್ದು, ಸಾರ್ವಜನಿಕರ ಪಹಣಿ ತಿದ್ದುಪಡಿ ಅರ್ಜಿಗಳನ್ನು ಯಾವುದೇ ವಿಳಂಬವಿಲ್ಲದೆ ತಂತ್ರಾಂಶದ ಮೂಲಕವೇ ನಿಯಮಾನುಸಾರ ಇತ್ಯರ್ಥಪಡಿಸುವಂತೆ ಕಂದಾಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
