Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

KSRTC ಬಸ್ಸಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ 4,462 ಪ್ರಯಾಣಿಕರಿಗೆ ದಂಡ: ₹8.67 ಲಕ್ಷಕ್ಕೂ ಅಧಿಕ ಮೊತ್ತ ವಸೂಲಿ

Chicken Feet : ಕೋಳಿ ಕಾಲುಗಳನ್ನು ತಿಂದರೆ ಸಿಗುವ ಅದ್ಭುತ ಆರೋಗ್ಯ ಲಾಭಗಳಿವು!

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪಹಣಿ ತಿದ್ದುಪಡಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Land registry amendment

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪಹಣಿ ತಿದ್ದುಪಡಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Land registry amendment
KARNATAKA

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪಹಣಿ ತಿದ್ದುಪಡಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Land registry amendment

By kannadanewsnow57

ಬೆಂಗಳೂರು: ರಾಜ್ಯದ ಭೂಮಿ ಮಾಲೀಕರಿಗೆ ಸಂಬಂಧಿಸಿದ ಪಹಣಿ (RTC) ತಿದ್ದುಪಡಿ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಮತ್ತು ತಾಂತ್ರಿಕ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಲು ಕಂದಾಯ ಆಯುಕ್ತಾಲಯವು ಮಹತ್ವದ ಅಧಿಕೃತ ಆದೇಶ ಹಾಗೂ ಮಾರ್ಗಸೂಚಿಯನ್ನು ಹೊರಡಿಸಿದೆ.

ಕಂದಾಯ ಇಲಾಖೆಯ ಭೂಮಿ ಉಸ್ತುವಾರಿ ಕೋಶದ ವತಿಯಿಂದ ರಾಜ್ಯದ ಎಲ್ಲಾ ಉಪವಿಭಾಗಾಧಿಕಾರಿಗಳು (AC) ಮತ್ತು ತಹಶೀಲ್ದಾರರುಗಳಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಪಹಣಿಯ ವಿವಿಧ ಕಾಲಂಗಳನ್ನು ತಿದ್ದುಪಡಿ ಮಾಡಲು ಯಾವ ನಿರ್ದಿಷ್ಟ ಸಾಫ್ಟ್ವೇರ್ ಮಾಡ್ಯೂಲ್ ಬಳಸಬೇಕು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಭೌತಿಕವಾಗಿ (Physical) ಅರ್ಜಿಗಳನ್ನು ನಿರ್ವಹಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಇನ್ಮುಂದೆ ಕೇವಲ ಆನ್ಲೈನ್ ತಂತ್ರಾಂಶದ ಮೂಲಕವೇ ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿ, ಶೀಘ್ರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸೂಚಿಸಲಾಗಿದೆ.

ಪಹಣಿ (RTC) ಕಾಲಂಗಳು ಮತ್ತು ತಿದ್ದುಪಡಿಗೆ ನಿಗದಿಪಡಿಸಿದ ಮಾಡ್ಯೂಲ್ಗಳು:

ಯಾವ ಕಾಲಂನ ತಿದ್ದುಪಡಿಗೆ ಯಾವ ತಾಂತ್ರಿಕ ಅವಕಾಶವಿದೆ ಎಂಬ ವಿವರ ಈ ಕೆಳಗಿನಂತಿದೆ:

RTC ಕಾಲಂ ವಿವರ (Description) ಬಳಸಬೇಕಾದ ಸಾಫ್ಟ್‌ವೇರ್ / ಮಾಡ್ಯೂಲ್
ಕಾಲಂ-1 ಸsurvey ನಂಬರ್ (Surnoc) RTC Management Software
ಕಾಲಂ-2 ಹಿಸ್ಸಾ (Hissa) RTC Management Software
ಕಾಲಂ-3 ವಿಸ್ತೀರ್ಣ ಮತ್ತು ಖರಾಬು ವಿಸ್ತೀರ್ಣ (RTC Extent & Karab Extent) RRT Correction Module
ಕಾಲಂ-4 ಭೂ ಕಂದಾಯ, ಜೋಡಿ, ಉಪಕರ, ನೀರಿನ ತೆರಿಗೆ (Land Revenue, Jodi, Cess, Water Tax) RRT Correction Module
ಕಾಲಂ-5 ಮಣ್ಣಿನ ವಿಧ (Soil Type) RRT Correction Module
ಕಾಲಂ-6 ಪಟ್ಟಾ (Patta) RRT Correction Module
ಕಾಲಂ-7 ಮರಗಳ ಸಂಖ್ಯೆ (Tree Count) RTC Management Software
ಕಾಲಂ-8 ನೀರಾವರಿ ವಿಸ್ತೀರ್ಣ (Ketuvaaru) ತಿದ್ದುಪಡಿ ಮಾಡಲು ಯಾವುದೇ ಅವಕಾಶವಿರುವುದಿಲ್ಲ
ಕಾಲಂ-9 ಮಾಲೀಕರ ವಿವರ (ಹೆಸರು/ತಂದೆಯ ಹೆಸರು/ಲಿಂಗ/ಬಿನ್ಕೋಂ/ವರ್ಗ/ವಿಸ್ತೀರ್ಣ/ಖಾತಾ ಸಂಖ್ಯೆ ಇತ್ಯಾದಿ) RRT Correction Module
ಕಾಲಂ-10 ಸ್ವಾಧೀನದ ವಿಧ (Acquisition Type) RRT Correction Module
ಕಾಲಂ-11 ಹಕ್ಕುಗಳು ಮತ್ತು ಹೊಣೆಗಾರಿಕೆಗಳು (ಸರ್ಕಾರಿ ನಿರ್ಬಂಧ, ಕೋರ್ಟ್ ತಡೆಯಾಜ್ಞೆ ವಿವರ ಇತ್ಯಾದಿ) RRT Correction Module
ಕಾಲಂ-12 ಸಾಗುವಳಿ ವಿವರ (Cultivation) RTC Management Software
ಕಾಲಂ-13 ಬೆಳೆ ವಿವರಗಳು (CROP details) Crop Survey (ಯಾವುದೇ ತಿದ್ದುಪಡಿಗೆ ಅವಕಾಶವಿಲ್ಲ)

ಇತರ ಪ್ರಮುಖ ತಾಂತ್ರಿಕ ಸೌಲಭ್ಯಗಳು:
ಹೊಸ RTC ಸೃಷ್ಟಿ (RTC Creation): ಉಪವಿಭಾಗಾಧಿಕಾರಿಗಳಿಗೆ ಹೊಸ ಪಹಣಿ ಸೃಜನೆಗೆ ಅವಕಾಶ ಬೇಕಿದ್ದಲ್ಲಿ, ಜಿಲ್ಲಾಧಿಕಾರಿಗಳ ಮೂಲಕ ಸೂಕ್ತ ದಾಖಲೆಗಳೊಂದಿಗೆ ಕಂದಾಯ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬಳಿಕ “RTC Management Software” ನಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗುವುದು.

ಪಹಣಿ ರದ್ದತಿ (RTC Deletion): RTC Management Software ಮೂಲಕ ನಿರ್ವಹಿಸಬೇಕು.

ಪಹಣಿ ಮರುಪಡೆಯುವಿಕೆ (RTC Retrieval): RTC Management Software ಮೂಲಕ ಮಾಡಬೇಕು.

ಮಾಲೀಕರಿಲ್ಲದ ಪಹಣಿ ತಿದ್ದುಪಡಿ (No-Owner RTC Correction): RTC Management Software ನಲ್ಲಿ ಅವಕಾಶ ನೀಡಲಾಗಿದೆ.

ದಾಖಲೆಗಳ ಅಪ್‌ಲೋಡ್: ತಿದ್ದುಪಡಿ ಪ್ರಕ್ರಿಯೆಯ ಸೌಲಭ್ಯಕ್ಕಾಗಿ RRT Correction Module ನಲ್ಲಿ ತಲಾ 2MB ವರೆಗಿನ ಗಾತ್ರದ ಬಹು ದಾಖಲೆಗಳನ್ನು (Multiple documents) ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕಂದಾಯ ಇಲಾಖೆಯ ತಾಂತ್ರಿಕ ಕೋಶದ ನಿರ್ದೇಶಕರು ಈ ಆದೇಶಕ್ಕೆ ಡಿಜಿಟಲ್ ಸಹಿ ಮಾಡಿದ್ದು, ಸಾರ್ವಜನಿಕರ ಪಹಣಿ ತಿದ್ದುಪಡಿ ಅರ್ಜಿಗಳನ್ನು ಯಾವುದೇ ವಿಳಂಬವಿಲ್ಲದೆ ತಂತ್ರಾಂಶದ ಮೂಲಕವೇ ನಿಯಮಾನುಸಾರ ಇತ್ಯರ್ಥಪಡಿಸುವಂತೆ ಕಂದಾಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

GOOD NEWS: Good news for the farmers of the state: Important order from the government regarding `Land registry amendment’ | Land registry amendment
Share. Facebook Twitter LinkedIn WhatsApp Email

Related Posts

KSRTC ಬಸ್ಸಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ 4,462 ಪ್ರಯಾಣಿಕರಿಗೆ ದಂಡ: ₹8.67 ಲಕ್ಷಕ್ಕೂ ಅಧಿಕ ಮೊತ್ತ ವಸೂಲಿ

1 Min Read

Chicken Feet : ಕೋಳಿ ಕಾಲುಗಳನ್ನು ತಿಂದರೆ ಸಿಗುವ ಅದ್ಭುತ ಆರೋಗ್ಯ ಲಾಭಗಳಿವು!

2 Mins Read

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಚಾಲೆಂಜರ್ 2026’ ತಾಲೀಮು; ತುರ್ತು ಸಂದರ್ಭದ ವೇಳೆ 3,000 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ

2 Mins Read
Recent News

KSRTC ಬಸ್ಸಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ 4,462 ಪ್ರಯಾಣಿಕರಿಗೆ ದಂಡ: ₹8.67 ಲಕ್ಷಕ್ಕೂ ಅಧಿಕ ಮೊತ್ತ ವಸೂಲಿ

Chicken Feet : ಕೋಳಿ ಕಾಲುಗಳನ್ನು ತಿಂದರೆ ಸಿಗುವ ಅದ್ಭುತ ಆರೋಗ್ಯ ಲಾಭಗಳಿವು!

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪಹಣಿ ತಿದ್ದುಪಡಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Land registry amendment

ಭಾರತದಲ್ಲಿ ಬೇಸ್‌ಬಾಲ್ ಜನಪ್ರಿಯಗೊಳಿಸಲು ‘ರಿಲಯನ್ಸ್‌ನ ರೈಸ್ ವರ್ಲ್ಡ್‌ವೈಡ್‌’ನೊಂದಿಗೆ ಕೈಜೋಡಿಸಿದ ಎಂಎಲ್ಬಿ

State News
KARNATAKA

KSRTC ಬಸ್ಸಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ 4,462 ಪ್ರಯಾಣಿಕರಿಗೆ ದಂಡ: ₹8.67 ಲಕ್ಷಕ್ಕೂ ಅಧಿಕ ಮೊತ್ತ ವಸೂಲಿ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ತನಿಖಾ ತಂಡಗಳು ಏಪ್ರಿಲ್-2026ರ ಮಾಹೆಯಲ್ಲಿ ರಾಜ್ಯಾದ್ಯಂತ ತಪಾಸಣಾ ಕಾರ್ಯವನ್ನು ತೀವ್ರಗೊಳಿಸಿದ್ದು,…

Chicken Feet : ಕೋಳಿ ಕಾಲುಗಳನ್ನು ತಿಂದರೆ ಸಿಗುವ ಅದ್ಭುತ ಆರೋಗ್ಯ ಲಾಭಗಳಿವು!

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪಹಣಿ ತಿದ್ದುಪಡಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Land registry amendment

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಚಾಲೆಂಜರ್ 2026’ ತಾಲೀಮು; ತುರ್ತು ಸಂದರ್ಭದ ವೇಳೆ 3,000 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.