ಬೆಂಗಳೂರು : ನಿಖಿಲ್ ಕುಮಾರಸ್ವಾಮಿ ಸ್ಟೇಟಸ್ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ ವಿಚಾರವಾಗಿ ಜೆಡಿಎಸ್ ಟ್ವೀಟ್ ಮೂಲಕ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ. ರಾಷ್ಟ್ರೀಯ ಪಕ್ಷ @INCIndia ಪ್ರಸ್ತುತ ಪರಿಸ್ಥಿತಿ ದೇಶದಲ್ಲಿ ಏನಾಗಿದೆ? ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ @DKShivakumar ಅವರೇ
ಬೇರೆ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡುವ ಮುನ್ನ, ದೇಶಾದ್ಯಂತ ಹರಿದು ಹಂಚಿಹೋಗುತ್ತಿರುವ ನಿಮ್ಮದೇ ಪಕ್ಷದ ದಯನೀಯ ಸ್ಥಿತಿಯ ಬಗ್ಗೆ ಒಮ್ಮೆ ಚಿಂತಿಸುವುದು ಒಳ್ಳೆಯದು.
ಅಧಿಕಾರದ ಸೊಕ್ಕು ಮತ್ತು ದುರಹಂಕಾರದ ಮಾತುಗಳು ನಿಮ್ಮ ಸ್ಥಾನಕ್ಕೆ ಕಿಂಚಿತ್ತು ಗೌರವ ತರುವುದಿಲ್ಲ. ನಾಡಿನ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಕಾಲವೇ ನಿಮಗೆ ತಕ್ಕ ಪಾಠ ಕಲಿಸಲಿದೆ. ಸೊನ್ನೆಯೂ ಕೀಳಲ್ಲ, ನೆನಪಿರಲಿ. ಸೊನ್ನೆಯಿಂದಲೇ ಸರ್ವವೂ ಆರಂಭ ಎನ್ನುವುದನ್ನು ಮರೆಯಬೇಡಿ. ಆದರೆ, ಈ ಸೊನ್ನೆ ನಿಮ್ಮ ಕಣ್ತೆರೆಸಲಿ ಎಂಬುದಷ್ಟೇ ನಮ್ಮ ಕಳಕಳಿ.
ರಾಷ್ಟ್ರೀಯ ಪಕ್ಷ @INCIndia ಪ್ರಸ್ತುತ ಪರಿಸ್ಥಿತಿ ದೇಶದಲ್ಲಿ ಏನಾಗಿದೆ? ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ @DKShivakumar ಅವರೇ.
ಬೇರೆ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡುವ ಮುನ್ನ, ದೇಶಾದ್ಯಂತ ಹರಿದು ಹಂಚಿಹೋಗುತ್ತಿರುವ ನಿಮ್ಮದೇ ಪಕ್ಷದ ದಯನೀಯ ಸ್ಥಿತಿಯ ಬಗ್ಗೆ ಒಮ್ಮೆ ಚಿಂತಿಸುವುದು ಒಳ್ಳೆಯದು.
ಅಧಿಕಾರದ ಸೊಕ್ಕು ಮತ್ತು… pic.twitter.com/1ycbDDl3sg
— Janata Dal Secular (@JanataDal_S) May 21, 2026








