Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಧುರಂಧರ್ 2′ ಚಿತ್ರದಿಂದ ಭಾರತೀಯ ಏಜೆಂಟರ ಸುರಕ್ಷತೆಗೆ ಧಕ್ಕೆ?: ಕೇಂದ್ರಕ್ಕೆ ಪರಿಶೀಲಿಸಲು ದೆಹಲಿ ಹೈಕೋರ್ಟ್ ಸೂಚನೆ!

ಸತ್ತ ಸರಕಾರಗಳು, ಸತ್ತ ಪ್ರಜೆಗಳು: ಯುವ ಜೀವಗಳ ಬಲಿಗೆ ಇನ್ನೆಷ್ಟು ದಿನ ಮೌನ?: ಚಿತ್ರ ಸಾಹಿತಿ ಕವಿರಾಜ್ ಪ್ರಶ್ನೆ

​ಸೋಶಿಯಲ್ ಮೀಡಿಯಾದಲ್ಲಿ ‘ಮೆಲೋಡಿ’ ಬಿರುಗಾಳಿ: ಕೆಲವೇ ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ದಾಟಿ ದಾಖಲೆ ಬರೆದ ಮೋದಿ-ಮೆಲೋನಿ ವಿಡಿಯೋ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸತ್ತ ಸರಕಾರಗಳು, ಸತ್ತ ಪ್ರಜೆಗಳು: ಯುವ ಜೀವಗಳ ಬಲಿಗೆ ಇನ್ನೆಷ್ಟು ದಿನ ಮೌನ?: ಚಿತ್ರ ಸಾಹಿತಿ ಕವಿರಾಜ್ ಪ್ರಶ್ನೆ
KARNATAKA

ಸತ್ತ ಸರಕಾರಗಳು, ಸತ್ತ ಪ್ರಜೆಗಳು: ಯುವ ಜೀವಗಳ ಬಲಿಗೆ ಇನ್ನೆಷ್ಟು ದಿನ ಮೌನ?: ಚಿತ್ರ ಸಾಹಿತಿ ಕವಿರಾಜ್ ಪ್ರಶ್ನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನಬೆಳಗಾದರೆ ಸಾಕು, ಕೇಳಿಬರುತ್ತಿರುವ ಕಹಿ ಸುದ್ದಿಗಳೆಂದರೆ ಅನಿರೀಕ್ಷಿತ ಮತ್ತು ಅಕಾಲಿಕ ಹೃದಯಾಘಾತದ ಸಾವುಗಳು. ನಿನ್ನೆ ದಿಲೀಪ್ ರಾಜ್, ಇಂದು ನಂದೀಶ್… ನಾಳೆ ನೀವೋ ಅಥವಾ ನಾನೋ? ಈ ಸಾವುಗಳ ಸರಣಿ ಹೀಗೆಯೇ ಮುಂದುವರಿಯುತ್ತಿದ್ದರೆ, ಅನಿರೀಕ್ಷಿತ ಹೃದಯಾಘಾತಕ್ಕೆ ಇನ್ನೆಷ್ಟು ಯುವ ಜೀವಗಳು ಬಲಿಯಾಗಬೇಕು ಎಂಬ ಯಕ್ಷಪ್ರಶ್ನೆ ಇಡೀ ಸಮಾಜವನ್ನು ಕಾಡುತ್ತಿದೆ.

ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಅವರು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ಮೂಡಿಸಿರುವ ಈ ಗಂಭೀರ ವಿಷಯದ ಬಗ್ಗೆ ಫೇಸ್‌ಬುಕ್‌ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸರ್ಕಾರಗಳು ಮತ್ತು ಆರೋಗ್ಯ ವ್ಯವಸ್ಥೆಯ ನಿದ್ರಾಸ್ಥಿತಿಯನ್ನು ಕಟುವಾಗಿ ಪ್ರಶ್ನಿಸಿದ್ದಾರೆ.

ಜಾರಿಕೊಳ್ಳುತ್ತಿರುವ ಸರ್ಕಾರಗಳು – ಪ್ರಶ್ನಿಸುತ್ತಿರುವ ಜನಸಾಮಾನ್ಯರು

ಔಷಧಿ ತಯಾರಿಕಾ ಕಂಪನಿಗಳೇ ತಮ್ಮ ವ್ಯಾಕ್ಸಿನ್‌ಗಳಲ್ಲಿ ದೋಷವಿತ್ತು (ಅಡ್ಡಪರಿಣಾಮಗಳ ಸಾಧ್ಯತೆ) ಎಂದು ಒಪ್ಪಿಕೊಂಡಿದ್ದರೂ, ಅಂದು ಲಸಿಕೆಯನ್ನು ಕಡ್ಡಾಯಗೊಳಿಸಿ ಜನರಿಗೆ ನೀಡಿದ ಸರ್ಕಾರಗಳು ಇಂದು ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ರಣಹೇಡಿಗಳಂತೆ ನುಣುಚಿಕೊಳ್ಳುತ್ತಿವೆ. ಸಾರ್ವಜನಿಕ ವಲಯದಲ್ಲಿ, ಕುಂತಲ್ಲಿ ನಿಂತಲ್ಲಿ ಜನರೆಲ್ಲರೂ ಈ ಅಕಾಲಿಕ ಸಾವುಗಳಿಗೆ ಕೋವಿಡ್ ವ್ಯಾಕ್ಸಿನ್ ಕಾರಣವಿರಬಹುದೇ ಎಂದು ಚರ್ಚಿಸುತ್ತಲೇ ಇದ್ದಾರೆ.

“ಹೋಗಲಿ, ಅವತ್ತಿನ ಸಂಕಷ್ಟದ ತುರ್ತಿಗೆ ಅನಿವಾರ್ಯವಾಗಿ ಲಸಿಕೆ ಕೊಟ್ಟಾಯಿತು, ಸರಿ.. ಒಪ್ಪಿಕೊಳ್ಳೋಣ.. ಆದರೆ ಈಗ ಅನಾಹುತಗಳಾಗುತ್ತಿವೆಯಲ್ಲಾ? ಇದಕ್ಕೆ ಏನು ಕ್ರಮ, ಏನು ಪರಿಹಾರ ಎಂಬ ಬಗ್ಗೆ ಯಾರೂ ತಲೆಯೇ ಕೆಡಿಸಿಕೊಂಡಿಲ್ಲ.” ಎಂದು ಕವಿರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಬೂಬು ಬೇಡ, ನಿಜವಾದ ಕಾರಣವೇನು?

ಜನಸಾಮಾನ್ಯರು ವೈದ್ಯಕೀಯ ತಜ್ಞರಲ್ಲ, ಅವರ ಅಭಿಪ್ರಾಯ ತಪ್ಪು ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ಕರೊನಾ ನಂತರದ ದಿನಗಳಲ್ಲಿ ಇದ್ದಕ್ಕಿದ್ದಂತೆ ಈ ಯುವಜೀವಗಳ ಮಾರಣಹೋಮ ಯಾಕೆ ಜರುಗುತ್ತಿದೆ? ಇದಕ್ಕೆ ಅಸಲಿ ಕಾರಣವೇನು? ಕೋವಿಡ್ ನಂತರ ಮನುಷ್ಯನ ದೇಹದಲ್ಲಿ, ಆರೋಗ್ಯದಲ್ಲಿ ಏನೇನು ಬದಲಾವಣೆಗಳಾಗಿವೆ? ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಆರೋಗ್ಯ ಇಲಾಖೆಯಾಗಲಿ, ಸರ್ಕಾರಗಳಾಗಲಿ ಇಂದು ಮೌನಕ್ಕೆ ಶರಣಾಗಿವೆ ಎಂದು ಗುಡುಗಿದ್ದಾರೆ.

ಯುವಕರ ಹೃದಯಾಘಾತಕ್ಕೆ ಕೇವಲ ‘ಒತ್ತಡ’ (Stress) ಅಥವಾ ‘ಆಹಾರ ಕ್ರಮ’ (Diet) ಎಂದು ಹಳೇ ಸಬೂಬುಗಳನ್ನು ನೀಡಿ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆಯಾಗಿ ಕವಿರಾಜ್ ಅವರು ನಂದೀಶ್ ಅವರ ಸಾವನ್ನು ಉಲ್ಲೇಖಿಸಿದ್ದಾರೆ. ನಂದೀಶ್ ಅವರು ಯಾವುದೇ ನಗರದ ಒತ್ತಡದ ಬದುಕಿನಲ್ಲಿ ಇರಲಿಲ್ಲ. ಸುಮಾರು ವರ್ಷಗಳಿಂದ ಬೆಂಗಳೂರು ಬಿಟ್ಟು, ತೀರ್ಥಹಳ್ಳಿಯ ತಮ್ಮದೇ ಜಮೀನಿನಲ್ಲಿ ರೈತರಾಗಿ ನೆಮ್ಮದಿಯ ಬದುಕು ಕಂಡುಕೊಂಡಿದ್ದರು. ಆದರೂ ಅವರಿಗೆ ಹೃದಯಾಘಾತವಾಗಿದ್ದಕ್ಕೆ ಉತ್ತರಿಸುವವರು ಯಾರು? ಎಂಬುದಾಗಿ ಪ್ರಶ್ನಿಸಿದ್ದಾರೆ.

ತಜ್ಞರ ಮೌನ ಮತ್ತು ಜೊಂಬಿ ಪಡೆಗಳ ಆಕ್ರಮಣ

ಇಂದು ದೇಶದಲ್ಲಿ ‘ತಜ್ಞರು’ ಎನಿಸಿಕೊಂಡವರಿಗೂ ಈ ಬಗ್ಗೆ ಗಟ್ಟಿಯಾಗಿ ಮಾತನಾಡುವ ಧೈರ್ಯವಿಲ್ಲದಂತಾಗಿದೆ. ವ್ಯಾಕ್ಸಿನ್ ಕಾರಣ ಇರಬಹುದೇ ಎಂದು ಯಾರಾದರೂ ಧ್ವನಿ ಎತ್ತಿದರೆ, ಹಾವು ತುಳಿದವರಂತೆ ಬೆಚ್ಚಿಬೀಳುವ ತಜ್ಞರು, ಯಾರದ್ದೋ ಇಮೇಜ್ ಕಾಪಾಡಲು ಇನ್ನೇನೇನೋ ಬಡಬಡಾಯಿಸುತ್ತಿದ್ದಾರೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಂತೂ ಸತ್ಯವನ್ನು ಮುಚ್ಚಿಹಾಕಲು, ಪ್ರಶ್ನೆ ಕೇಳುವವರ ಮೇಲೆ ಅಸಭ್ಯ ಮಾತುಗಳ ಮೂಲಕ ಆಕ್ರಮಣ ಮಾಡುವ ಒಂದು ‘ಜೊಂಬಿ ಪಡೆ’ಯೇ ಸೃಷ್ಟಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಅಂತಿಮ ಸತ್ಯ

ಆದರೆ, ನಿಲ್ಲುವ ಹೃದಯಕ್ಕೆ ಯಾವುದೇ ಜಾತಿ, ಧರ್ಮ, ಸಿದ್ಧಾಂತ ಅಥವಾ ರಾಜಕೀಯ ಪಕ್ಷಗಳ ಭೇದವಿರುವುದಿಲ್ಲ. ವ್ಯವಸ್ಥೆಯ ತಪ್ಪುಗಳಿಂದ ಅಥವಾ ನಿರ್ಲಕ್ಷ್ಯದಿಂದ ಯುವ ಜನತೆ ಸತ್ತು ಹೆಣವಾಗುತ್ತಿದ್ದರೂ ನಾವಿನ್ನೂ ಮೂಕಪ್ರೇಕ್ಷಕರಾಗಿದ್ದೇವೆ.

ಕವಿರಾಜ್ ಅವರು ತಮ್ಮ ಲೇಖನವನ್ನು ಅತ್ಯಂತ ಮಾರ್ಮಿಕ ಹಾಗೂ ವ್ಯಂಗ್ಯಭರಿತ ಸಾಲುಗಳೊಂದಿಗೆ ಮುಕ್ತಾಯಗೊಳಿಸಿದ್ದಾರೆ: “ನಾವು ಉಳಿಯದಿದ್ದರೂ, ನಮ್ಮ ಹೆಣದ ರಾಶಿಗಳ ಮೇಲೆ ನಾವು ನಂಬಿದ ಸಿದ್ಧಾಂತ, ಪಕ್ಷ, ನಾಯಕರು ಮತ್ತು ಅವರ ಅಧಿಕಾರ ಚಿರಾಯುವಾಗಲಿ!” ಎಂಬುದಾಗಿ ಖೇದ ವ್ಯಕ್ತ ಪಡಿಸಿದ್ದಾರೆ.

ಇನ್ನಾದರೂ ಸರ್ಕಾರಗಳು ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು, ಕೋವಿಡ್ ನಂತರದ ಈ ಅಕಾಲಿಕ ಸಾವುಗಳ ಕುರಿತು ವೈಜ್ಞಾನಿಕ ತನಿಖೆ ನಡೆಸಿ, ಜನರಿಗೆ ಸೂಕ್ತ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ನೀಡಬೇಕಾಗಿದೆ. ಇಲ್ಲದಿದ್ದರೆ ಈ ‘ಸತ್ತ ಸರಕಾರಗಳು ಮತ್ತು ಸತ್ತ ಪ್ರಜೆಗಳ’ ಮೌನಕ್ಕೆ ಇನ್ನಷ್ಟು ಯುವ ಜೀವಗಳು ಬಲಿಯಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

Share. Facebook Twitter LinkedIn WhatsApp Email

Related Posts

ಜಲಮೂಲ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

2 Mins Read

ಮಳೆಗಾಲದಲ್ಲಿ ರಜೆ ಹಾಕದೆ ಜನರ ನೆರವಿಗೆ ಧಾವಿಸಿ: ಸಾಗರದ ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ

2 Mins Read

ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು

1 Min Read
Recent News

​’ಧುರಂಧರ್ 2′ ಚಿತ್ರದಿಂದ ಭಾರತೀಯ ಏಜೆಂಟರ ಸುರಕ್ಷತೆಗೆ ಧಕ್ಕೆ?: ಕೇಂದ್ರಕ್ಕೆ ಪರಿಶೀಲಿಸಲು ದೆಹಲಿ ಹೈಕೋರ್ಟ್ ಸೂಚನೆ!

ಸತ್ತ ಸರಕಾರಗಳು, ಸತ್ತ ಪ್ರಜೆಗಳು: ಯುವ ಜೀವಗಳ ಬಲಿಗೆ ಇನ್ನೆಷ್ಟು ದಿನ ಮೌನ?: ಚಿತ್ರ ಸಾಹಿತಿ ಕವಿರಾಜ್ ಪ್ರಶ್ನೆ

​ಸೋಶಿಯಲ್ ಮೀಡಿಯಾದಲ್ಲಿ ‘ಮೆಲೋಡಿ’ ಬಿರುಗಾಳಿ: ಕೆಲವೇ ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ದಾಟಿ ದಾಖಲೆ ಬರೆದ ಮೋದಿ-ಮೆಲೋನಿ ವಿಡಿಯೋ!

‘ಇದು ಪ್ರಧಾನಿಯ ಬಾಲಿಶ ವರ್ತನೆ’: ಮೋದಿ-ಮೆಲೋನಿ ‘ಮೆಲೋಡಿ’ ವಿಡಿಯೋಗೆ ನಟ ಪ್ರಕಾಶ್ ರಾಜ್ ತೀಕ್ಷ್ಣ ವ್ಯಂಗ್ಯ

State News
KARNATAKA

ಸತ್ತ ಸರಕಾರಗಳು, ಸತ್ತ ಪ್ರಜೆಗಳು: ಯುವ ಜೀವಗಳ ಬಲಿಗೆ ಇನ್ನೆಷ್ಟು ದಿನ ಮೌನ?: ಚಿತ್ರ ಸಾಹಿತಿ ಕವಿರಾಜ್ ಪ್ರಶ್ನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನಬೆಳಗಾದರೆ ಸಾಕು, ಕೇಳಿಬರುತ್ತಿರುವ ಕಹಿ ಸುದ್ದಿಗಳೆಂದರೆ ಅನಿರೀಕ್ಷಿತ ಮತ್ತು ಅಕಾಲಿಕ ಹೃದಯಾಘಾತದ ಸಾವುಗಳು. ನಿನ್ನೆ ದಿಲೀಪ್…

ಜಲಮೂಲ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

ಮಳೆಗಾಲದಲ್ಲಿ ರಜೆ ಹಾಕದೆ ಜನರ ನೆರವಿಗೆ ಧಾವಿಸಿ: ಸಾಗರದ ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ

ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.