Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಭಾರಿ ರಿಲೀಫ್: ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಪಡೆಯುವ ಗಡುವು ಮೇ 23 ರವರೆಗೆ ವಿಸ್ತರಣೆ!

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸವಾಗಲಿ: ಸಾಗರದಲ್ಲಿ ಮಾ.ಸ. ನಂಜುಂಡಸ್ವಾಮಿ ಕರೆ

ವಿಶ್ರಾಂತಿ ಇಲ್ಲದೆ ಸತತ 5 ಗಂಟೆ ಕೆಲಸ ಮಾಡಿಸುವಂತಿಲ್ಲ: ಕಾರ್ಮಿಕರ ಹಿತರಕ್ಷಣೆಗೆ ಕೇಂದ್ರದ ಮಹತ್ವದ ಆದೇಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸವಾಗಲಿ: ಸಾಗರದಲ್ಲಿ ಮಾ.ಸ. ನಂಜುಂಡಸ್ವಾಮಿ ಕರೆ
KARNATAKA

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸವಾಗಲಿ: ಸಾಗರದಲ್ಲಿ ಮಾ.ಸ. ನಂಜುಂಡಸ್ವಾಮಿ ಕರೆ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಮಠಮಂದಿರಗಳು ಸಂಸ್ಕೃತ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿವೆ. ಸಂಸ್ಕೃತ ಪ್ರಸಾರ ಮಾಡುವ ನಿಟ್ಟಿನಲ್ಲಿ ಶಿಬಿರಗಳನ್ನು ಆಯೋಜಿಸಿರುವ ಇಲ್ಲಿನ ಶಂಕರಮಠದ ಪರಿಕಲ್ಪನೆ ಅತ್ಯಂತ ಅಭಿನಂದಾರ್ಹ ಎಂದು ಸಾಗರದಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘದ ಹಿರಿಯ ಸಲಹೆಗಾರರಾದ ಮಾ.ಸ. ನಂಜುಂಡಸ್ವಾಮಿ ತಿಳಿಸಿದರು.

ಇಲ್ಲಿನ ಶೃಂಗೇರಿ ಶಂಕರಮಠದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಬಾಲಭಾರತಿ ಸಂಸ್ಕಾರ ಸುಧಾ ಬೇಸಿಗೆ ಶಿಬಿರ’ದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಉಚಿತ ಶಿಬಿರದ ಮೂಲಕ ಸಂಸ್ಕಾರ ಬಿತ್ತುವ ಕೆಲಸ: ಕಳೆದ 14 ದಿನಗಳ ಕಾಲ ನ್ಯಾಯವಾದಿ ಶ್ರಾವ್ಯ ಹೆಗಡೆ ದಂಪತಿಗಳ ನೇತೃತ್ವದಲ್ಲಿ ನಡೆದ ಈ ಶಿಬಿರವು ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಬೇಸಿಗೆ ರಜಾ ಶಿಬಿರಗಳು ಕೇವಲ ವ್ಯವಹಾರಿಕ ಕೇಂದ್ರಗಳಾಗುತ್ತಿದ್ದು, ಹಣ ಗಳಿಕೆಗೆ ಮಾತ್ರ ಸೀಮಿತವಾಗುತ್ತಿವೆ ಎಂಬ ದೂರುಗಳಿವೆ. ಆದರೆ, ಶಂಕರಮಠವು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿ ಈ ಶಿಬಿರ ನಡೆಸಿರುವುದು ಎಲ್ಲರಿಗೂ ಅನುಕರಣೀಯವಾಗಿದೆ ಎಂದು ಶ್ಲಾಘಿಸಿದರು.

ಇದೇ ವೇಳೆ ಮಹಿಳೆಯರ ಪಾತ್ರದ ಕುರಿತು ಮಾತನಾಡಿದ ಅವರು, “ನಮ್ಮ ಸಂಸ್ಕೃತಿ ಉಳಿದಿರುವುದು ಮನೆಯಲ್ಲಿರುವ ಮಹಿಳೆಯರಿಂದ. ಮನೆಯಲ್ಲಿ ಮಹಿಳೆಯರು ಮೊಬೈಲ್ ಹಾಗೂ ಧಾರವಾಹಿಗಳಿಂದ ದೂರವಿದ್ದು, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಮುನ್ನುಡಿ ಬರೆಯಬೇಕು. ನಾವು ನಂಬುವ ದೇವರು ಮತ್ತು ಮಠಗಳ ಬಗ್ಗೆ ಮಕ್ಕಳಲ್ಲಿ ಅಧ್ಯಯನ ಹಾಗೂ ಅನುಷ್ಠಾನದ ಆಸಕ್ತಿ ಬೆಳೆಸಬೇಕು” ಎಂದು ಕರೆ ನೀಡಿದರು.

ಸಂಸ್ಕೃತಿ ಮರೆಯದ ಉನ್ನತ ಸ್ಥಾನ ತಲುಪಿ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ವಾನ್ ಚಿರಂತನ ಬಡ್ತಿ ಮಾತನಾಡಿ, “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವುದನ್ನು ಯಾರೂ ಮರೆಯಬಾರದು. ಹಿಂದೆ ಮನೆಯಲ್ಲೇ ಸಹಜವಾಗಿ ಸಿಗುತ್ತಿದ್ದ ಸಂಸ್ಕಾರವನ್ನು, ಇಂದು ಕಲಿಯಲು ಶಿಬಿರಗಳಿಗೆ ಕಳುಹಿಸುವ ಕಾಲ ಬಂದಿದೆ. ಮಕ್ಕಳು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ನಮ್ಮ ಮೂಲ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು” ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಶ್ರಾವ್ಯ ಸಾಗರ್, ಸದಾನಂದ ಶರ್ಮ, ಸವಿತಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸಚಿನ್ ಹೆಗಡೆ ಕಾರ್ಯಕ್ರಮವನ್ನು ಅತ್ಯಾಕರ್ಷಕವಾಗಿ ನಿರೂಪಿಸಿದರು.

Lokayukta Raid: ಬೆಂಗಳೂರಲ್ಲಿ 50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇಇ ಮತ್ತು ಗುತ್ತಿಗೆದಾರ

BREAKING: ಬೆಂಗಳೂರು ಸೇರಿದಂತೆ ರಾಜ್ಯದ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳ ಮನೆ, ಕಚೇರಿ ಸೇರಿ 8 ಕಡೆ ಲೋಕಾಯುಕ್ತ ದಾಳಿ

Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರು ಸೇರಿದಂತೆ ರಾಜ್ಯದ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳ ಮನೆ, ಕಚೇರಿ ಸೇರಿ 8 ಕಡೆ ಲೋಕಾಯುಕ್ತ ದಾಳಿ

2 Mins Read

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಗೃಹ ಸಚಿವ ಜಿ.ಪರಮೇಶ್ವರ್

2 Mins Read

Lokayukta Raid: ಬೆಂಗಳೂರಲ್ಲಿ 50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇಇ ಮತ್ತು ಗುತ್ತಿಗೆದಾರ

1 Min Read
Recent News

ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಭಾರಿ ರಿಲೀಫ್: ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಪಡೆಯುವ ಗಡುವು ಮೇ 23 ರವರೆಗೆ ವಿಸ್ತರಣೆ!

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸವಾಗಲಿ: ಸಾಗರದಲ್ಲಿ ಮಾ.ಸ. ನಂಜುಂಡಸ್ವಾಮಿ ಕರೆ

ವಿಶ್ರಾಂತಿ ಇಲ್ಲದೆ ಸತತ 5 ಗಂಟೆ ಕೆಲಸ ಮಾಡಿಸುವಂತಿಲ್ಲ: ಕಾರ್ಮಿಕರ ಹಿತರಕ್ಷಣೆಗೆ ಕೇಂದ್ರದ ಮಹತ್ವದ ಆದೇಶ!

ತೈವಾನ್‌ನಲ್ಲಿ ಭಾರತ ವಿರೋಧಿ ಫ್ಲೆಕ್ಸ್ ವಿವಾದ: ತಲೆಕೆಳಗಾದ ತ್ರಿವರ್ಣ ಧ್ವಜ, ಸಿಖ್ ಯೋಧನ ಚಿತ್ರ ಬಳಕೆಗೆ ತೀವ್ರ ಆಕ್ರೋಶ!

State News
KARNATAKA

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸವಾಗಲಿ: ಸಾಗರದಲ್ಲಿ ಮಾ.ಸ. ನಂಜುಂಡಸ್ವಾಮಿ ಕರೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಮಠಮಂದಿರಗಳು ಸಂಸ್ಕೃತ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿವೆ. ಸಂಸ್ಕೃತ ಪ್ರಸಾರ ಮಾಡುವ ನಿಟ್ಟಿನಲ್ಲಿ…

BREAKING: ಬೆಂಗಳೂರು ಸೇರಿದಂತೆ ರಾಜ್ಯದ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳ ಮನೆ, ಕಚೇರಿ ಸೇರಿ 8 ಕಡೆ ಲೋಕಾಯುಕ್ತ ದಾಳಿ

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಗೃಹ ಸಚಿವ ಜಿ.ಪರಮೇಶ್ವರ್

Lokayukta Raid: ಬೆಂಗಳೂರಲ್ಲಿ 50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇಇ ಮತ್ತು ಗುತ್ತಿಗೆದಾರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.