ಬೆಂಗಳೂರು : ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ಒಂದು ನಡೆದಿದ್ದು ಮೀಟರ್ ಬಡ್ಡಿ ದಂಧೆಗೆ ಪ್ರತಿಯೊಬ್ಬ ಆ ಆತ್ಮಹತ್ಯೆಗೆ ಶರಣಾಗಿದ್ದಾನೆ ಬಸವರಾಜು ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಬಸವೇಶ್ವರನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಸವರಾಜು ಮಹೇಂದ್ರ ಎಂಬಾತನ ಬಳಿ 50,000 ಸಾಲ ಪಡೆದಿದ್ದ. 50,000 ಗೆ 15 ದಿನಕೊಮ್ಮೆ 5,000 ಬಡ್ಡಿ ಕಟ್ಟಬೇಕಿತ್ತು. ಒಂದು ತಿಂಗಳಿಗೆ 10,000 ವನ್ನು ಆರೋಪಿ ಮಹೇಂದ್ರ ಪಡೆಯುತ್ತಿದ್ದ. ತಿಂಗಳಿಗೆ 20% ಬಡ್ಡಿ ವಸೂಲಿ ಮಾಡುತ್ತಿದ್ದ. ಮಹೇಂದ್ರ. ಐವತ್ತು ಸಾವಿರಕ್ಕೆ ಹತ್ತು ಸಾವಿರದಂತೆ ಕೆಲ ತಿಂಗಳು ಬಸವರಾಜ ಬಡ್ಡಿ ಕಟ್ಟಿದ್ದ.
ಬಡ್ಡಿ ಕಟ್ಟಿಲ್ಲ ಅಂದಾಗ ಮಹೇಂದ್ರ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಬಡ್ಡಿ ಹಣ ಕಟ್ಟಲು ಆಗದೆ ಮಹೇಂದ್ರ ಗೆ ಬಸವರಾಜ ಎರಡು ದಿನದಿಂದ ಕಾರು ಓಡಿಸಲು ಹೋಗದೆ ಮನೆಯಲ್ಲಿಯೇ ಇದ್ದ ಬಸವರಾಜು ಡೆತ್ ನೋಟ್ ಬರೆದು ಮತ್ತು ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಸವೇಶ್ವರನಗರ ಪೊಲೀಸ್ರು ಹುಡುಕಾಟ ನಡೆಸುತ್ತಿದ್ದಾರೆ.








