ವಾಷಿಂಗ್ಟನ್: ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸಮೂಹ ಸಂಸ್ಥೆಗಳ ಮೇಲಿದ್ದ ಲಂಚ ಹಾಗೂ ವಂಚನೆಯ ಆರೋಪಗಳಿಗೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆಯು (US Justice Department) ಬಿಗ್ ಟ್ವಿಸ್ಟ್ ನೀಡಿದೆ. ಅದಾನಿ ಗ್ರೂಪ್ ವಿರುದ್ಧ ಹೂಡಲಾಗಿದ್ದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ಅಮೆರಿಕ ಸರ್ಕಾರವು ಅಧಿಕೃತವಾಗಿ ಕೈಬಿಟ್ಟಿದ್ದು (Drops all charges), ಪ್ರಕರಣವನ್ನು ಕಾಯಂ ಆಗಿ ಮುಕ್ತಾಯಗೊಳಿಸಿದೆ (Case closed permanently).
ಈ ಮಹತ್ವದ ಬೆಳವಣಿಗೆಯಿಂದಾಗಿ ಕಳೆದ ಕೆಲವು ಸಮಯದಿಂದ ಅದಾನಿ ಸಮೂಹದ ಮೇಲಿದ್ದ ಜಾಗತಿಕ ಮಟ್ಟದ ದೊಡ್ಡ ಕಾನೂನು ತೂಗುಗತ್ತಿ ಅಂತಿಮವಾಗಿ ನಿವಾರಣೆಯಾದಂತಾಗಿದೆ.
ಅಮೆರಿಕದಲ್ಲಿ ಸೌರಶಕ್ತಿ ಯೋಜನೆಗಳ ಒಪ್ಪಂದ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಲಾಗಿದೆ ಮತ್ತು ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ನ್ಯೂಯಾರ್ಕ್ ಕೋರ್ಟ್ನಲ್ಲಿ ದಾಖಲಾಗಿದ್ದ ಎಲ್ಲಾ ದೂರುಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಈಗ ಹಿಂಪಡೆದಿದೆ.
ಅಮೆರಿಕ ಸರ್ಕಾರದ ಈ ಅದಿರಾಂತ ನಿರ್ಧಾರದಿಂದಾಗಿ ಅದಾನಿ ಗ್ರೂಪ್ನ ಮೇಲಿದ್ದ ಸುಳ್ಳು ಆರೋಪಗಳ ಸರಣಿಗೆ ಪೂರ್ಣವಿರಾಮ ಬಿದ್ದಿದೆ. ಜಾಗತಿಕ ಮಟ್ಟದಲ್ಲಿ ಅದಾನಿ ಸಮೂಹದ ವಿಶ್ವಾಸಾರ್ಹತೆ ಮತ್ತಷ್ಟು ಹೆಚ್ಚಾಗಲು ಇದು ಕಾರಣವಾಗಿದೆ.
ಅಮೆರಿಕದಲ್ಲಿ ಕೇಸ್ ಕಾಯಂ ಆಗಿ ಕ್ಲೋಸ್ ಆಗಿರುವ ಸುದ್ದಿ ಹೊರಬೀಳುತ್ತಿದ್ದಂತೆಯೇ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಷೇರುಗಳು ಭಾರಿ ಜಿಗಿತ ಕಾಣುವ ಮುನ್ಸೂಚನೆ ಸಿಕ್ಕಿದ್ದು, ಹೂಡಿಕೆದಾರರಲ್ಲಿ ಹರ್ಷ ಮೂಡಿಸಿದೆ.








