Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದೆಯೇ? ನೀವು ಈ ವಿಷಯಗಳನ್ನು ತಪ್ಪದೇ ತಿಳಿದುಕೊಳ್ಳಬೇಕು.!

ಪೌರತ್ವ ನಿಯಮದಲ್ಲಿ ಕೇಂದ್ರದಿಂದ ಬಿಗ್ ಚೇಂಜ್! ಇನ್ಮುಂದೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ಪಾಸ್‌ಪೋರ್ಟ್‌ಗಳನ್ನು ಮರಳಿಸುವುದು ಕಡ್ಡಾಯ!

Petrol Pump : ಪೆಟ್ರೋಲ್ ಬಂಕ್ ಗಳಲ್ಲಿ ಸಿಗಲಿದೆ ಈ 6 ಉಚಿತ ಸೇವೆಗಳು : ಪ್ರತಿಯೊಬ್ಬ ವಾಹನ ಸವಾರರು ತಿಳಿಯಲೇಬೇಕು.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೌರತ್ವ ನಿಯಮದಲ್ಲಿ ಕೇಂದ್ರದಿಂದ ಬಿಗ್ ಚೇಂಜ್! ಇನ್ಮುಂದೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ಪಾಸ್‌ಪೋರ್ಟ್‌ಗಳನ್ನು ಮರಳಿಸುವುದು ಕಡ್ಡಾಯ!
INDIA

ಪೌರತ್ವ ನಿಯಮದಲ್ಲಿ ಕೇಂದ್ರದಿಂದ ಬಿಗ್ ಚೇಂಜ್! ಇನ್ಮುಂದೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ಪಾಸ್‌ಪೋರ್ಟ್‌ಗಳನ್ನು ಮರಳಿಸುವುದು ಕಡ್ಡಾಯ!

By ಗೋಪಾಲ್‌ ಎನ್‌

ನವದೆಹಲಿ: ಭಾರತದ ಪೌರತ್ವವನ್ನು (Citizenship) ಪಡೆಯಲು ಬಯಸುವ ವಿದೇಶಿ ಅರ್ಜಿದಾರರಿಗೆ ಕೇಂದ್ರ ಸರ್ಕಾರವು ಹೊಸದೊಂದು ಕಡ್ಡಾಯ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದು ಭಾರತದ ಪೌರತ್ವ ಕೋರಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರೂ, ತಮಗಿರುವ ವಿದೇಶಿ ಪಾಸ್‌ಪೋರ್ಟ್‌ಗಳ ವಿವರಗಳನ್ನು ಅಧಿಕೃತವಾಗಿ ಘೋಷಿಸುವುದಲ್ಲದೆ, ಅವುಗಳನ್ನು ಕಡ್ಡಾಯವಾಗಿ ಹಸ್ತಾಂತರಿಸಬೇಕು (Surrender) ಎಂದು ಕೇಂದ್ರ ಗೃಹ ಸಚಿವಾಲಯ ನಿಯಮವನ್ನು ಬಿಗಿಗೊಳಿಸಿದೆ.

​ಈ ಮಹತ್ವದ ನಿಯಮದ ಬದಲಾವಣೆಯು ದೇಶದ ಭದ್ರತೆ ಮತ್ತು ದ್ವಿಪೌರತ್ವ ತಡೆಗಟ್ಟುವ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ನಿರ್ಧಾರವೆಂದು ಪರಿಗಣಿಸಲಾಗಿದೆ.ಮುಖ್ಯವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದು, ಇಲ್ಲಿನ ನಾಗರಿಕತ್ವ ಪಡೆಯಲು ಕಾಯುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಇತರೆ ಅರ್ಜಿದಾರರಿಗೆ ಈ ನಿಯಮ ನೇರವಾಗಿ ಅನ್ವಯಿಸಲಿದೆ.

ಅರ್ಜಿದಾರರು ತಾವಾಗಿಯೇ ತಮ್ಮ ಹಳೆಯ ದೇಶದ ಪಾಸ್‌ಪೋರ್ಟ್ ವಿವರಗಳನ್ನು ಭಾರತ ಸರ್ಕಾರದ ಮುಂದೆ ಬಹಿರಂಗಪಡಿಸಬೇಕು. ಒಮ್ಮೆ ಭಾರತದ ಪೌರತ್ವ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದಾಗ ಆಯಾ ದೇಶಗಳ ರಾಯಭಾರ ಕಚೇರಿ ಅಥವಾ ಭಾರತೀಯ ಅಧಿಕಾರಿಗಳಿಗೆ ಹಳೆಯ ಪಾಸ್‌ಪೋರ್ಟ್ ಅನ್ನು ಒಪ್ಪಿಸಿ ರದ್ದುಪಡಿಸಿಕೊಳ್ಳಬೇಕು.

ಭಾರತದ ಸಂವಿಧಾನದ ಪ್ರಕಾರ ಒಬ್ಬ ವ್ಯಕ್ತಿಗೆ ಏಕಕಾಲದಲ್ಲಿ ಎರಡು ದೇಶಗಳ ಪೌರತ್ವ ಹೊಂದಲು (Dual Citizenship) ಅವಕಾಶವಿಲ್ಲ. ಪೌರತ್ವ ಪಡೆದ ನಂತರವೂ ಕೆಲವರು ಹಳೆಯ ದೇಶದ ಪಾಸ್‌ಪೋರ್ಟ್ ಬಳಸುವ ಸಾಧ್ಯತೆಗಳನ್ನು ತಡೆಯಲು ಮತ್ತು ಕಾನೂನು ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಈ ತಿದ್ದುಪಡಿ ತರಲಾಗಿದೆ.

Afghanistan Bangladesh Citizenship rule change: Applicants have to declare surrender passports issued by Pakistan
Share. Facebook Twitter LinkedIn WhatsApp Email

Related Posts

ಅನುಷ್ಕಾ ಪ್ರೀತಿಗಾಗಿ ‘ಸಸ್ಯಹಾರಿ’ಯಾದರೇ ಕಿಂಗ್ ಕೊಹ್ಲಿ?: ‘ನನ್ನನ್ನು ಒಬ್ಬ ಉತ್ತಮ ಮನುಷ್ಯನನ್ನಾಗಿ ಮಾಡಿದ್ದು ಅವಳೇ’ ಎಂದ ವಿರಾಟ್!

2 Mins Read

BREAKING: ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ದಿಢೀರ್ ಏರಿಕೆ! ಲೀಟರ್‌ಗೆ 90 ಪೈಸೆ ಹೆಚ್ಚಳ!

1 Min Read

ಇರಾನ್ ಮೇಲಿನ ಭೀಕರ ದಾಳಿ ಕೊನೆ ಕ್ಷಣದಲ್ಲಿ ರದ್ದು! ಗಲ್ಫ್ ರಾಷ್ಟ್ರಗಳ ಮನವಿಗೆ ಮಣಿದು ಯುದ್ಧ ನಿರ್ಧಾರ ಕೈಬಿಟ್ಟ ಅಮೆರಿಕ!

1 Min Read
Recent News

ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದೆಯೇ? ನೀವು ಈ ವಿಷಯಗಳನ್ನು ತಪ್ಪದೇ ತಿಳಿದುಕೊಳ್ಳಬೇಕು.!

ಪೌರತ್ವ ನಿಯಮದಲ್ಲಿ ಕೇಂದ್ರದಿಂದ ಬಿಗ್ ಚೇಂಜ್! ಇನ್ಮುಂದೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ಪಾಸ್‌ಪೋರ್ಟ್‌ಗಳನ್ನು ಮರಳಿಸುವುದು ಕಡ್ಡಾಯ!

Petrol Pump : ಪೆಟ್ರೋಲ್ ಬಂಕ್ ಗಳಲ್ಲಿ ಸಿಗಲಿದೆ ಈ 6 ಉಚಿತ ಸೇವೆಗಳು : ಪ್ರತಿಯೊಬ್ಬ ವಾಹನ ಸವಾರರು ತಿಳಿಯಲೇಬೇಕು.!

ರೈತರೇ ಗಮನಿಸಿ : ಯೂರಿಯಾ ರಸಗೊಬ್ಬರ ಖರೀದಿಗೆ ‘ಫ್ರೂಟ್ಸ್ ಎಫ್‍ಐಡಿ’ ಕಡ್ಡಾಯ

State News
KARNATAKA

ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದೆಯೇ? ನೀವು ಈ ವಿಷಯಗಳನ್ನು ತಪ್ಪದೇ ತಿಳಿದುಕೊಳ್ಳಬೇಕು.!

By kannadanewsnow57 KARNATAKA 2 Mins Read

ನಮ್ಮ ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯ ಅಂಗಳದಲ್ಲೂ ತುಳಸಿ ಕಟ್ಟೆ ಇರುವುದು, ಬೆಳಗು-ಸಂಜೆ…

Petrol Pump : ಪೆಟ್ರೋಲ್ ಬಂಕ್ ಗಳಲ್ಲಿ ಸಿಗಲಿದೆ ಈ 6 ಉಚಿತ ಸೇವೆಗಳು : ಪ್ರತಿಯೊಬ್ಬ ವಾಹನ ಸವಾರರು ತಿಳಿಯಲೇಬೇಕು.!

ರೈತರೇ ಗಮನಿಸಿ : ಯೂರಿಯಾ ರಸಗೊಬ್ಬರ ಖರೀದಿಗೆ ‘ಫ್ರೂಟ್ಸ್ ಎಫ್‍ಐಡಿ’ ಕಡ್ಡಾಯ

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಶಾಲಾ ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕ ವಿತರಣೆಗೆ ಶಿಕ್ಷಣ ಇಲಾಖೆ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.