ಮೈಸೂರು : ಕಾಂಗ್ರೆಸ್ ಕುರ್ಚಿ ಆಟ ಕೊನೆ ಹಂತಕ್ಕೆ ಬಂದಿದೆ. ಕುರುಬ ಸಮಾಜದ ಜೊತೆಗೆ ಯಾವತ್ತು ಜೆಡಿಎಸ್ ಪಕ್ಷ ಇದ್ದೇ ಇರುತ್ತದೆ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದರು.
ಬೋಗಾದಿ ಭೋಗನಂದೀಶ್ವರ ದೇಗುಲ ಬಳಿ ಈ ಒಂದು ಸಮಾವೇಶ ಆಯೋಜನೆ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿ ಬಿಟ್ಟು ಕುರ್ಚಿ ಆಟ ನಡೆದಿತ್ತು. ಮಳೆಯಿಂದಾದ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಿಲ್ಲ. ಬೆಳೆ ನಷ್ಟದ ಬಗ್ಗೆ ರೈತರಿಗೆ ಧೈರ್ಯ ಹೇಳುವ ಕೆಲಸ ಮಾಡಿಲ್ಲ ಮುಂದೆ ಮೈತ್ರಿ ಸರ್ಕಾರ ಬರಲಿದೆ ಬೇಕಾದ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಪಕ್ಷಕ್ಕೆ ಶಕ್ತಿ ತುಂಬಿರುವುದು ಕಾರ್ಯಕರ್ತರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉದ್ಬೂರು ರಮ್ಮನಹಳ್ಳಿ ವಿಶೇಷ. ಕೊನೆಯುಸಿರಿ ಇರುವರೆಗೂ ನಿಮ್ಮ ಪ್ರೀತಿ ಮರೆಯಲ್ಲ ಎಂದರು.
ನಮ್ಮವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಈ ರೀತಿ ಬರುತ್ತಿರಲಿಲ್ಲ. ಮುಖಂಡರು ಮೈಮರೆತಿದ್ದಕ್ಕೆ ನಾವು ಚುನಾವಣೆಯಲ್ಲಿ ಸೋತಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರದ ಜನರ ಜೊತೆಗೆ ನನಗೆ ಅನ್ನೋನ್ಯ ಸಂಬಂಧ ಇದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಿಮ್ಮ ಜೊತೆ ಇರುತ್ತೇನೆ. ಈ ಸಮಾವೇಶ ಯಾರ ವಿರುದ್ಧವು ಅಲ್ಲ ಕುರುಬ ಸಮುದಾಯವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಸಿದ್ದರಾಮಯ್ಯಗಿಂತ ನಾನು ಹೆಚ್ಚು ಕೊಡುಗೆ ನೀಡಿದ್ದೇನೆ. ಹೀಗಾಗಿ ಕುರುಬ ಸಮಾಜ ಯುವಕರಿಂದ ಹಳದಿಪೇಟ ಧರಿಸಿದ್ದೇನೆ ಎಂದರು.
ಡೆಹಲಿ ಇಂದ ಬಂದು ನಂಜನಗೂಡು ಕುಟುಂಬಕ್ಕೆ ಸಹಾಯ ಮಾಡಿದೆ. ಮೈಸೂರು ನವರೇ ಆದ ಸಿಎಂ ಸಿದ್ದರಾಮಯ್ಯ ಅವರಿಗೆ ಇದು ಕಾಣಿಸಲಿಲ್ಲ. ನಮ್ಮ ಪಕ್ಷದಿಂದ ನಂಜನಗೂಡು ಕುಟುಂಬಕ್ಕೆ ಮನೆಯ ವ್ಯವಸ್ಥೆ ಮಾಡಿದೆ. ಈಗ ಲೀಸ್ಗೆ ಮನೆಯನ್ನು ಕೊಡಿಸಿದ್ದೇವೆ ಎರಡು ವರ್ಷದಲ್ಲಿ ನಮ್ಮ ಸರ್ಕಾರ ಬರಲಿದೆ ಆಗ ಮತ್ತಷ್ಟು ಸಹಾಯ ಮಾಡುತ್ತೇವೆ. ಗ್ಯಾರಂಟಿ ಎಲ್ಲರಿಗೂ ಸಹಾಯ ಆಗಿದೆ ಅನ್ನೋ ಗುಂಗಲ್ಲಿ ಇದ್ದಾರೆ. ಕಾಂಗ್ರೆಸ್ ನಾಯಕರು ಅರ್ಧ ಗಂಟೆ ನಮ್ಮ ಮನೆ ಬಳಿ ಬನ್ನಿ ರಾಜ್ಯದ ಚಿತ್ರಣ ನಿಮಗೆ ಗೊತ್ತಾಗುತ್ತದೆ ಎಂದು ಎಚ್ ಡಿ ಕುಮಾರಸ್ವಾಮಿ ತಿಳಿಸಿದರು ಸಿಎಂ ತವರು ಜಿಲ್ಲೆಯಿಂದಲೇ ಕುರುಬ ಮತಕ್ಕೆ ಗುರಿ ಇಟ್ಟಿದ್ದು ಜೆಡಿಎಸ್ ಸಮಾವೇಶದಲ್ಲಿ ಹೆಚ್ ಡಿ ಕುಮಾರಸ್ವಾಮಿ ನಿಖಿಲ್ ಸೇರಿದಂತೆ ಎಲ್ಲಾ ನಾಯಕರು ಹಳದಿಪೇಟ ಧರಿಸಿದ್ದಾರೆ.








